ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಎ ಪ್ರತಿಭಟನೆಗಳಿಗೆ ದಂಡ ವಿಧಿಸುವ ಕುರಿತು ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

|
Google Oneindia Kannada News

ಮೀರತ್ ಫೆಬ್ರವರಿ 11: 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಕಾರರಿಂದ ಆಸ್ತಿ ಹಾನಿಗಾಗಿ ಹಣವನ್ನು ಮರುಪಡೆಯಲು ಪ್ರಯತ್ನಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ವಿಚಾರಣೆಯನ್ನು ಹಿಂಪಡೆಯಲು ರಾಜ್ಯಕ್ಕೆ ಒಂದು ಅಂತಿಮ ಅವಕಾಶವನ್ನು ನೀಡುವುದಾಗಿ ಅಥವಾ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ರದ್ದುಗೊಳಿಸುವುದಾಗಿ ನ್ಯಾಯಾಲಯ ಹೇಳಿದೆ.

ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಸುವಲ್ಲಿ ಉತ್ತರ ಪ್ರದೇಶ ಸರ್ಕಾರ "ತೀರ್ಪುಗಾರ ಮತ್ತು ಪ್ರಾಸಿಕ್ಯೂಟರ್" ನಂತೆ ವರ್ತಿಸಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ ಹೇಳಿದೆ. "ಈ ಪ್ರಕ್ರಿಯೆಗಳನ್ನು ಹಿಂತೆಗೆದುಕೊಳ್ಳಿ ಅಥವಾ ಈ ನ್ಯಾಯಾಲಯವು ನಿಗದಿಪಡಿಸಿದ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಅದನ್ನು ರದ್ದುಗೊಳಿಸುತ್ತೇವೆ" ಎಂದು ಪೀಠ ಹೇಳಿದೆ. "ನೀವು ಕಾನೂನಿನ ಅಡಿಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ನಾವು ಫೆಬ್ರವರಿ 18 ರವರೆಗೆ ಒಂದು ಅವಕಾಶವನ್ನು ನೀಡುತ್ತೇವೆ" ಎಂದು ನ್ಯಾಯಾಲಯ ಹೇಳಿದೆ.

ಉತ್ತರ ಪ್ರದೇಶ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿ ಆಂದೋಲನದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಿಂದ ಉಂಟಾದ ನಷ್ಟವನ್ನು ವಸೂಲಿ ಮಾಡಲು ಜಿಲ್ಲಾಡಳಿತವು ಪ್ರತಿಭಟನಾಕಾರರಿಗೆ ಕಳುಹಿಸಿರುವ ನೋಟಿಸ್ ರದ್ದುಗೊಳಿಸುವಂತೆ ಕೋರಿ ಪರ್ವೈಜ್ ಆರಿಫ್ ಟಿಟು ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಅದಕ್ಕೆ ಸ್ಪಂದಿಸುವಂತೆ ರಾಜ್ಯವನ್ನು ಕೇಳಿದೆ.

Stop It Or We Will: Supreme Court To Team Yogi About Fining CAA Protests

ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಮತ್ತು ಆರು ವರ್ಷಗಳ ಹಿಂದೆ 94 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಮತ್ತು 90 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಸೇರಿದಂತೆ ಇತರ ಹಲವರಿಗೆ ನೋಟಿಸ್ ಕಳುಹಿಸಿರುವ ನಿದರ್ಶನಗಳನ್ನು ಉಲ್ಲೇಖಿಸಲಾಗಿದೆ.

833 ಗಲಭೆಕೋರರ ವಿರುದ್ಧ 106 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 274 ವಸೂಲಿ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಗರಿಮಾ ಪ್ರಸಾದ್ ಹೇಳಿದರು. "274 ನೋಟಿಸ್‌ಗಳಲ್ಲಿ 236 ರಲ್ಲಿ ವಸೂಲಾತಿ ಆದೇಶಗಳನ್ನು ರವಾನಿಸಲಾಗಿದೆ ಮತ್ತು 38 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ" ಎಂದು ಯುಪಿ ಸರ್ಕಾರದ ವಕೀಲರು ಹೇಳಿದ್ದಾರೆ.

ನ್ಯಾಯಪೀಠವು 2009 ಮತ್ತು 2018ರಲ್ಲಿ ಎರಡು ತೀರ್ಪುಗಳನ್ನು ನೀಡಿತು. ನ್ಯಾಯಾಂಗ ಅಧಿಕಾರಿಗಳನ್ನು ಕ್ಲೈಮ್ ಟ್ರಿಬ್ಯೂನಲ್‌ಗಳಲ್ಲಿ ನೇಮಿಸಬೇಕು ಆದರೆ ನೀವು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳನ್ನು (ಎಡಿಎಂ) ನೇಮಿಸಿದ್ದೀರಿ ಎಂದು ಪೀಠ ಹೇಳಿದೆ.

ನ್ಯಾಯಮೂರ್ತಿ ಸೂರ್ಯ ಕಾಂತ್, "ಈ ಮನವಿಯು ಡಿಸೆಂಬರ್ 2019 ರಲ್ಲಿ ಒಂದು ರೀತಿಯ ಆಂದೋಲನ ಅಥವಾ ಪ್ರತಿಭಟನೆಗೆ ಸಂಬಂಧಿಸಿದಂತೆ ಕಳುಹಿಸಲಾದ ನೋಟಿಸ್‌ಗಳಿಗೆ ಸಂಬಂಧಿಸಿದೆ. ಯುಪಿಯಂತಹ ದೊಡ್ಡ ರಾಜ್ಯದಲ್ಲಿ 274 ನೋಟಿಸ್‌ಗಳು ದೊಡ್ಡ ವಿಷಯವಲ್ಲ, ನೀವು ಇದಕ್ಕೆ ಉತ್ತರ ನೀಡದಿದ್ದರೆ. ನಂತರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ. ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಹೇಗೆ ಅನುಸರಿಸಬೇಕು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ'' ಎಂದಿದ್ದಾರೆ.

ಆಗಸ್ಟ್ 31, 2020 ರಂದು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರ ನಿಯೋಗವನ್ನು ಸೂಚಿಸಿದೆ ಎಂದು ಅವರು ಹೇಳಿದರು.

ನ್ಯಾಯಮೂರ್ತಿ ಚಂದ್ರಚೂಡ್, "ಇತರ ಪ್ರಕ್ರಿಯೆಗಳು ನಮಗೆ ಸಂಬಂಧಿಸಿಲ್ಲ. ಸಿಎಎ ಪ್ರತಿಭಟನೆಗಳ ಸಂದರ್ಭದಲ್ಲಿ ಡಿಸೆಂಬರ್ 2019 ರಲ್ಲಿ ಕಳುಹಿಸಲಾದ ನೋಟಿಸ್‌ಗಳಿಗೆ ಮಾತ್ರ ನಾವು ಚರ್ಚೆ ಮಾಡುತ್ತೇವೆ. ನಮ್ಮ ಆದೇಶಗಳನ್ನು ನೀವು ನಿರ್ಲಕ್ಷ್ಯ ತೋರಲು ಸಾಧ್ಯವಿಲ್ಲ. ನಾವು ಅದನ್ನು ಹೇಳಿದಾಗ ನೀವು ಎಡಿಎಂಗಳನ್ನು ಹೇಗೆ ನೇಮಿಸಬಹುದು. ಡಿಸೆಂಬರ್ 2019 ರಲ್ಲಿ ಯಾವುದೇ ಪ್ರಕ್ರಿಯೆಗಳನ್ನು ನಡೆಸಲಾಗಿದ್ದರೂ ಅದು ಈ ನ್ಯಾಯಾಲಯವು ನಿಗದಿಪಡಿಸಿದ ಕಾನೂನಿಗೆ ವಿರುದ್ಧವಾಗಿದೆ" ಎಂದಿದ್ದಾರೆ. ವಾದಗಳ ಬಳಿಕ ನ್ಯಾಯಾಲಯ ಏನು ಹೇಳಿದ್ದರೂ ಅದರಂತೆ ನಡೆದುಕೊಳ್ಳಲು ಯುಪಿ ಸರ್ಕಾರದ ವಕೀಲರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ ಮಾಡಿದವರಿಗೆ ನೋಟಿಸ್‌ ನೀಡಿ ದಂಡ ವಸೂಲಿ ಮಾಡಲು ಉತ್ತರ ಪ್ರದೇಶ ಸರಕಾರ ನಿರ್ಧರಿಸಿತ್ತು. ಇದಕ್ಕೆ ಪೂರಕ ಎಂಬಂತೆ ಉತ್ತರ ಪ್ರದೇಶದ ಬುಲಂದ್‌ ಶಹರ್‌ನ ಕೆಲವು ನಿವಾಸಿಗಳು ಜಿಲ್ಲಾಡಳಿತಕ್ಕೆ 6.27 ಲಕ್ಷ ರೂ. ದಂಡ ಪಾವತಿಸಿದ್ದಾರೆ.

ಅಲ್ಲದೇ ಇನ್ನುಮುಂದೆ ಈ ರೀತಿಯ ಹಿಂಸಾತ್ಮಕ ಪ್ರತಿಭಟನೆ ನಡೆಸುವುದಿಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವುದಿಲ್ಲ ಎಂದು ಮುಚ್ಚಳಿಕೆ ಕೂಡ ಬರೆದುಕೊಟ್ಟಿದ್ದಾರೆ. ಬುಲಂದ್‌ಶಹರ್‌ನ ಉಪ್ಪಿಕೊಟ್‌ ಬಡಾವಣೆಯಲ್ಲಿ ಅತಿ ಹಿಂಸಾತ್ಮಕ ಪ್ರತಿಭಟನೆ 2019 ಡಿಸೆಂಬರ್‌ 20ರಂದು ನಡೆದಿತ್ತು. ಈ ವೇಳೆ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಭಾರಿ ಹಾನಿಯಾಗಿತ್ತು.

ಆದರೆ ಈ ಬಡಾವಣೆಯ ಜನರಿಗೆ ಸರಕಾರದಿಂದ ಯಾವುದೇ ನೋಟಿಸ್‌ ಬಂದಿರಲಿಲ್ಲ. ಆದರೆ ಇತರೆಡೆ ನೋಟಿಸ್‌ ಜಾರಿಯಾಗಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡು ಬಡಾವಣೆಯ ನಿವಾಸಿಗಳು ಸಭೆ ಸೇರಿ ನಿರ್ಧಾರ ಕೈಗೊಂಡರು. ಸ್ವಯಂಪ್ರೇರಿತವಾಗಿ ದಂಡ ಪಾವತಿಸಲು ಸ್ಥಳೀಯ ಮುಖಂಡ ಶಖೀವುಲ್ಲಾ ಮತ್ತು ಇತರೆ ಮುಸ್ಲಿಂ ಸಮುದಾಯದ ನಿಯೋಗದವರು ತೀರ್ಮಾನ ಕೈಗೊಂಡರು.

Recommended Video

ತಕ್ಷಣವೇ Ukraine ತೊರೆಯುವಂತೆ ಅಮೆರಿಕನ್ನರಿಗೆ ಎಚ್ಚರಿಕೆ ಕೊಟ್ಟ Joe Biden | Oneindia Kannada

ಅದರಂತೆ 6.27 ಲಕ್ಷ ರೂ. ಸಂಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪಾವತಿಸಿದರು. ಭವಿಷ್ಯದಲ್ಲಿ ಇಂಥ ಯಾವುದೇ ಅಹಿತಕರ ಘಟನೆ ನಮ್ಮ ಬಡಾವಣೆಯಲ್ಲಿ ನಡೆಯದಂತೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಬಡಾವಣೆಯ ನಿವಾಸಿಗಳು ಭರವಸೆ ನೀಡಿದರು.

English summary
The Uttar Pradesh government was told off by the Supreme Court for trying to recover money for property damage during the 2019 anti-Citizenship (Amendment) Act protests from those identified as protesters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X