ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಕಾರ್ಮಿಕರ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟ ಯೋಗಿ ಆದಿತ್ಯನಾಥ್

|
Google Oneindia Kannada News

ಲಕ್ನೋ, ಮೇ 25 : "ಉತ್ತರ ಪ್ರದೇಶದದಿಂದ ವಲಸೆ ಕಾರ್ಮಿಕರನ್ನು ಕರೆಸಿ ಬೇರೆ ರಾಜ್ಯಗಳು ಕೆಲಸ ನೀಡಲು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕು" ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Recommended Video

ಅಯ್ಯೋ ಪಾಪ ಪೊಲೀಸರಿಗೆ ಹೊಡೆದವರ ಕಥೆ ಏನಾಗಿದೆ ನೋಡಿ..! | Madhya Pradesh

ಸೋಮವಾರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. "ವಲಸೆ ಕಾರ್ಮಿಕರ ಜೊತೆ ಸರ್ಕಾರ ನಿಲ್ಲಲಿದೆ. ಅವರಿಗೆ ರಾಜ್ಯದಲ್ಲಿಯೇ ಕೆಲಸ ನೀಡಲು ಪ್ರಯತ್ನ ನಡೆಸಲಾಗುತ್ತದೆ" ಎಂದರು.

ವಲಸೆ ಕಾರ್ಮಿಕರಿಗೆ ಸಂತಸದ ಸುದ್ದಿ ನೀಡಿದ ಕರ್ನಾಟಕ ಸರ್ಕಾರವಲಸೆ ಕಾರ್ಮಿಕರಿಗೆ ಸಂತಸದ ಸುದ್ದಿ ನೀಡಿದ ಕರ್ನಾಟಕ ಸರ್ಕಾರ

"ಬೇರೆ ರಾಜ್ಯಗಳು ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಕೆಲಸ ಮಾಡಿಸಲು ರಾಜ್ಯದ ಒಪ್ಪಿಗೆ ಪಡೆಯಬೇಕು. ಇದಕ್ಕಾಗಿ ವಲಸೆ ಕಾರ್ಮಿಕರ ಆಯೋಗವನ್ನು ರಚನೆ ಮಾಡಲಾಗುತ್ತದೆ" ಎಂದು ಮುಖ್ಯಮಂತ್ರಿಗಳು ವಿವರಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ಎಸ್ಪಿ ಕೈ ಅಡುಗೆ! ಆಂಧ್ರ ಪ್ರದೇಶದಲ್ಲಿ ವಲಸೆ ಕಾರ್ಮಿಕರಿಗೆ ಎಸ್ಪಿ ಕೈ ಅಡುಗೆ!

ವಲಸೆ ಕಾರ್ಮಿಕರನ್ನು ಗುರುತಿಸುವುದು ಹೇಗೆ?, ಅವರ ವಲಸೆ ತಡೆಯುವುದು ಹೇಗೆ?, ಬೇರೆ ರಾಜ್ಯಗಳು ಒಪ್ಪಿಗೆ ಪಡೆಯುವುದು ಹೇಗೆ ಮುಂತಾದ ವಿವರಗಳನ್ನು ಯೋಗಿ ಆದಿತ್ಯನಾಥ್ ಇಂದಿನ ಸಭೆಯಲ್ಲಿ ನೀಡಿಲ್ಲ. ಆದರೆ, ಕಾರ್ಮಿಕರ ಹಿತ ಕಾಯಲು ಬದ್ಧ ಎಂದು ಘೋಷಣೆ ಮಾಡಿದ್ದಾರೆ.

ವೈರಲ್ ಆಯ್ತು, ತೆರೆದ ಟ್ರಕ್‌ನಲ್ಲಿ ಮೃತದೇಹದ ಜೊತೆ ವಲಸೆ ಕಾರ್ಮಿಕರ ಸಂಚಾರ ವೈರಲ್ ಆಯ್ತು, ತೆರೆದ ಟ್ರಕ್‌ನಲ್ಲಿ ಮೃತದೇಹದ ಜೊತೆ ವಲಸೆ ಕಾರ್ಮಿಕರ ಸಂಚಾರ

ಇಲ್ಲೇ ಉದ್ಯೋಗ ಸಿಗಬೇಕು

ಇಲ್ಲೇ ಉದ್ಯೋಗ ಸಿಗಬೇಕು

ಮಾಧ್ಯಮಗಳ ಜೊತೆ ಮಾತನಾಡಿದ ಯೋಗಿ ಆದಿತ್ಯನಾಥ್, "ವಲಸೆ ಕಾರ್ಮಿಕರಿಗೆ ರಾಜ್ಯದಲ್ಲಿಯೆ ಕೆಲಸ ಸಿಗುವಂತೆ ಆಗಬೇಕು. ಲಾಕ್ ಡೌನ್ ಸಂದರ್ಭದಲ್ಲಿ ವಿವಿಧ ರಾಜ್ಯಗಳು ಕಾರ್ಮಿಕರನ್ನು ಯಾವ ರೀತಿ ನಡೆಸಿಕೊಂಡವು ಎಂಬುದು ತಿಳಿದಿದೆ. ಇಲ್ಲೇ ಉದ್ಯೋಗ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಹೇಳಿದರು.

ವಿಮೆ, ಸಾಮಾಜಿಕ ಭದ್ರತೆ

ವಿಮೆ, ಸಾಮಾಜಿಕ ಭದ್ರತೆ

"ಬೇರೆ ರಾಜ್ಯಗಳು ನಮ್ಮ ರಾಜ್ಯದ ವಲಸೆ ಕಾರ್ಮಿಕರಿಗೆ ಕೆಲಸ ನೀಡುವುದಾದರೆ ವಿಮೆ, ಸಾಮಾಜಿಕ ಭದ್ರತೆಯನ್ನು ನೀಡಬೇಕು. ರಾಜ್ಯದ ಒಪ್ಪಿಗೆ ಇಲ್ಲದೆ ನಮ್ಮ ರಾಜ್ಯದಿಂದ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಅನುಮತಿ ಇಲ್ಲ" ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಹಲವು ರಾಜ್ಯಗಳಲ್ಲಿ ಇದ್ದರು

ಹಲವು ರಾಜ್ಯಗಳಲ್ಲಿ ಇದ್ದರು

"ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ಇದ್ದರು. ಲಾಕ್ ಡೌನ್ ಅವಧಿ ಮುಗಿಯುತ್ತಿದ್ಧಂತೆ ಆ ರಾಜ್ಯಗಳು ಕಾರ್ಮಿಕರನ್ನು ವಾಪಸ್ ಕರೆದುಕೊಂಡು ಹೋಗಲು ಆಗಮಿಸುತ್ತವೆ. ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಕಾರ್ಮಿಕರು ಕೆಲಸ ಮಾಡುತ್ತಿದ್ದರು" ಯೋಗಿ ಆದಿತ್ಯನಾಥ್ ತಿಳಿಸಿದರು.

20 ಲಕ್ಷ ಕಾರ್ಮಿಕರು ವಾಪಸ್

20 ಲಕ್ಷ ಕಾರ್ಮಿಕರು ವಾಪಸ್

ಲಾಕ್ ಡೌನ್ ಘೋಷಣೆಯಾದ ಬಳಿಕ ವಿವಿಧ ರಾಜ್ಯಗಳಿಂದ 20 ಲಕ್ಷ ವಲಸೆ ಕಾರ್ಮಿಕರು ಉತ್ತರ ಪ್ರದೇಶಕ್ಕೆ ವಾಪಸ್ ಆಗಿದ್ದಾರೆ. ಶ್ರಮಿಕ್ ವಿಶೇಷ ರೈಲು, ಖಾಸಗಿ ವಾಹನ ಸೇರಿದಂತೆ ವಿವಿಧ ಸಾರಿಗೆ ಸೌಲಭ್ಯಗಳ ಮೂಲಕ ತವರು ರಾಜ್ಯಕ್ಕೆ ವಲಸೆ ಕಾರ್ಮಿಕರು ವಾಪಸ್ ತೆರಳಿದ್ದಾರೆ.

English summary
Any state wants to employ migrant workers from Uttar Pradesh will have to seek permission first said Chief Minister Yogi Adityanath. More than 20 lakh migrant workers returned to UP from other states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X