ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಷ್ಯತ್ವ ಕಿತ್ತುಕೊಂಡ ಕೊರೊನಾ, ಹಸಿವಿಗೆ ಬೆಲೆ ನೀಡದ ಹೀನ ಮನಸ್ಥಿತಿ

|
Google Oneindia Kannada News

ಲಕ್ನೌ, ಏಪ್ರಿಲ್ 26: ಕೊರೊನಾ ಬಂದು ಸಾಯುವ ಬದಲು, ತಿನ್ನಲು ಊಟ ಇಲ್ಲದೆ ಜನರು ಸಾಯುವ ಪರಿಸ್ಥಿತಿ ಬಂದುಬಿಡುತ್ತಾ ಎಂಬ ಆತಂಕ ಕೆಲವರ ಸ್ಥಿತಿ ನೋಡಿದರೆ ಅನಿಸುತ್ತಿದೆ. ಅದಕ್ಕೊಂದು ತಾಜಾ ನಿರ್ದೇಶನ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

Recommended Video

ಮಂಡ್ಯದಲ್ಲಿ ಕೊರೊನ ಪರೀಕ್ಷೆ ವೇಳೆ ಪತ್ರಕರ್ತರ ಮೇಲೆ ಹಲ್ಲೆ , ಸಚಿವ ಡಾ. ನಾರಾಯಣಗೌಡ ಪ್ರತಿಕ್ರಿಯೆ

ಕೊರೊನಾ ಸೋಂಕು ಹರಡಬಹುದು ಎಂಬ ಆತಂಕದಿಂದ ಕೆಲವು ಪ್ರದೇಶಗಳನ್ನ, ಕೆಲವು ಸ್ಥಳಗಳನ್ನು ಕ್ವಾರೆಂಟೈನ್‌ ಮಾಡಲಾಗಿದೆ. ಆಗ್ರಾದ ಶಾರದಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್‌ನಲ್ಲಿ ಕೊರೊನಾ ಭೀತಿಯಿಂದ ಕೆಲವರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಯಾರೊಬ್ಬರು ಹೊರಗೆ ಬರದಂತೆ ಎಲ್ಲ ಕಡೆಯೂ ಬಾಗಿಲು ಬಂದ್ ಮಾಡಿ ಎಚ್ಚರ ವಹಿಸಲಾಗುತ್ತಿದೆ.

ಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆಒಳ್ಳೇ ಸುದ್ದಿ: ಆಗ್ರಾದಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತೆ

ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಸಂದರ್ಭದಲ್ಲಿ, ಅವರನ್ನು ಮನುಷ್ಯರಂತೆ ನೋಡದೆ ಬೀದಿ ನಾಯಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಸರಿಯಾದ ಆಹಾರ ವ್ಯವಸ್ಥೆ ಕಲ್ಪಿಸಿದ ಆಡಳಿತ ಮಂಡಳಿ, ಗೇಟ್‌ ಹೊರಗೆ ನಿಂತು, ನೀರು-ಬಿಸ್ಕತ್ ಎಸೆದು ಹೋಗುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಈಗ ಉತ್ತರ ಪ್ರದೇಶ ಸರ್ಕಾರದ ಮಾನವನ್ನು ಹರಾಜು ಹಾಕುತ್ತಿದೆ.

Staff Throwed Up Essential Food To Quarantined People

ಗೇಟ್‌ ಒಳಗೆ ಗಂಡಸರು-ಹೆಂಗಸರು ಸೇರಿದಂತೆ ಸುಮಾರು ಜನರು ಇದ್ದಾರೆ. ಈ ಗೇಟ್‌ ಹೊರಗೆ ಪಿಪಿಇ ಕಿಟ್ ಧರಿಸಿರುವ ವ್ಯಕ್ತಿಯೊಬ್ಬ ಬಂದು, ನೀರಿನ ಬಾಟಲ್ ಹಾಗೂ ಬಿಸ್ಕತ್ ಬೀಸಾಡುತ್ತಾನೆ. ಅದನ್ನು ಎತ್ತಿಕೊಳ್ಳಲು ಗೇಟ್‌ ಒಳಗಿರುವ ಜನರು, ಮುಗಿಬೀಳುತ್ತಾರೆ. ತಾ ಮುಂದು, ನಾ ಮುಂದು ಎಂದು ಒಬ್ಬರ ಮೇಲೊಬ್ಬರು ಬಿದ್ದು ಗೇಟ್‌ ಹೊರಗೆ ಕೈಹಾಕಿ ನೀರು, ಬಿಸ್ಕತ್‌ಗಾಗಿ ತಳ್ಳಾಡುತ್ತಾರೆ.

ಈ ದೃಶ್ಯ ನೋಡುವ ಎಂತವರಿಗೂ ಒಂದು ಕ್ಷಣ 'ಅಯ್ಯೋ ಪಾಪ....' ಎನಿಸಿದೆ ಇರಲ್ಲ. ಇವರಿಗೆಲ್ಲ ಊಟ ಕೊಡುತ್ತಿದ್ದಾರೋ ಇಲ್ವೋ ಎಂಬ ಅನುಮಾನ ಕಾಡ್ತಿದೆ. ತಪ್ಪು ಮಾಡಿ ಜೈಲಿನಲ್ಲಿರುವವರಿಗೆ ಸರಿಯಾದ ಆಹಾರ ನೀಡುವ ಈ ದೇಶದಲ್ಲಿ, ಏನೂ ತಪ್ಪು ಮಾಡದ ಜನರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಈ ಘಟನೆಯನ್ನು ಅನೇಕರು ಖಂಡಿಸಿದ್ದಾರೆ.

ಅಲ್ಲಿರುವ ಜನರಲ್ಲಿ ಹಸಿವು ಕಾಣುತ್ತಿತ್ತೇ ಹೊರತು, ಕೊರೊನಾ ಸೋಂಕಿನ ಭಯ ಕಾಣಿಸಿಲ್ಲ. ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಧರಿಸಿಲ್ಲ. ಒಂದು ಕಡೆ ಕೊರೊನಾ ಬಗ್ಗೆ ಆತಂಕ, ತಿಳುವಳಿಕೆ ಇಲ್ಲ, ಮತ್ತೊಂದೆಡೆ ಆಹಾರವೂ ಇಲ್ಲ. ಇದನ್ನು ನೋಡುತ್ತಿದ್ದರೆ ಕೊರೊನಾದಿಂದ ತಪ್ಪಿಸಿಕೊಳ್ಳಿ ಎಂದು ಹೇಳಬೇಕಾ ಅಥವಾ ಊಟ ಇಲ್ಲದ ಸಾಯಿರಿ ಎಂದು ಹೇಳಬೇಕಾ?

ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಅವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಈವರೆಗೂ ಉತ್ತರ ಪ್ರದೇಶದಲ್ಲಿ 1873 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಆಗ್ರಾದಲ್ಲಿ 372 ಕೇಸ್ ದಾಖಲಾಗಿದೆ. ಆಗ್ರಾ ಡೇಂಜರ್ ಝೋನ್‌ನಲ್ಲಿದೆ.

English summary
The Staff throwed up essential food to quarantined people in uttar pradesh. video went to viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X