ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ ಮಂದಿರ ನಿರ್ಮಾಣ ಯಾವಾಗ ಪೂರ್ಣ, ತಗುಲುವ ವೆಚ್ಚವೆಷ್ಟು?

|
Google Oneindia Kannada News

ಅಯೋಧ್ಯೆ, ಜನವರಿ 24: ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು 3 ವರ್ಷಗಳ ಸಮಯ ಬೇಕಾಗುತ್ತದೆ. ಕಾಮಗಾರಿಗೆ 1,100 ಕೋಟಿ ರೂ ವೆಚ್ಚ ತಗುಲಲಿದೆ ಎಂದು ದೇವಸ್ಥಾನ ಟ್ರಸ್ಟ್ ತಿಳಿಸಿದೆ.

ಈ ಕುರಿತು ರಾಮ ಮಂದಿರ ನಿರ್ಮಾಣ ಯೋಜನೆಯ ತಜ್ಞರೊಂದಿಗೆ ಮಾತುಕತೆ ನಡೆಸಿದ ಬಳಕ ಸಂಪೂರ್ಣ ವೆಚ್ಚವನ್ನು ಅಂದಾಜಿಸಲಾಗಿದೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ದೇಣಿಗೆಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ದೇಣಿಗೆ

ಪ್ರಮುಖ ದೇವಾಲಯ ನಿರ್ಮಾಣಕ್ಕೆ 300 ರಿಂದ 400 ಕೋಟಿ ರೂ ವೆಚ್ಚವಾಗಲಿದೆ. ಸಂಪೂರ್ಣ 70 ಎಕರೆ ಜಮೀನಿನ ಅಭಿವೃದ್ಧಿಗೆ 1,100 ಕೋಟಿ ರೂ ಬೇಕಾಗಬಹುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಖಜಾಂಚಿ ಗೋವಿಂದ್ ದೇವ್ ಗಿರಿ ಮಹಾರಾಜ್ ಅವರು ತಿಳಿಸಿದ್ದಾರೆ.

Sri Ram Temple In 3 Years; To Cost Rs 1,100 Crore

ರಾಮ ಮಂದಿರ ನಿರ್ಮಾಣದ ಸಂಪೂರ್ಣ ವೆಚ್ಚದ ಬಗ್ಗೆ ಟ್ರಸ್ಟ್ ಈವರೆಗೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಕೆಲವೊಂದು ಕಾರ್ಪೊರೇಟ್ ಕಂಪನಿಗಳು ಮಂದಿರ ನಿರ್ಮಿಸಲು ದೇಣಿಗೆ ನೀಡುವುದಾಗಿ ಹೇಳಿವೆ. ಇದಕ್ಕೂ ಮುನ್ನ ಕಾರ್ಪೊರೇಟ್ ಕಂಪನಿಗಳು ರಾಮ ಮಂದಿರದ ವಿನ್ಯಾಸವನ್ನು ನೀಡಿದರೆ ತಾವೇ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಆದರೆ ನಾವು ಅವರ ಮನವಿಯನ್ನು ನಿರಾಕರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ತೆರಿಗೆ ಸಂಗ್ರಹಿಸುವ ಮೂಲಕ ಬಿಜೆಪಿ 2024ರ ಚುನಾವಣಾ ಪ್ರಚಾರ ಮಾಡುತ್ತದೆ ಎನ್ನುವ ದೂರುಗಳು ಕೇಳಿಬಂದಿವೆ.

ರಾಮ ಮಂದಿರ ನಿರ್ಮಾಣಕ್ಕಾಗಿ 6.4 ಲಕ್ಷ ಗ್ರಾಮಗಳು ಮತ್ತು 15 ಕೋಟಿ ಮನೆಗಳಿಂದ ದೇಣಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ. ಒಂದು ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೇಣಿಗೆ ನೀಡಲು ಸಿದ್ಧವಿದ್ದರೇ ಅವರಿಂದಲೂ ಹಣ ಸಂಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಜನರು ಯಾವ ಬಣ್ಣದ ಕನ್ನಡಕ ಧರಿಸುತ್ತಾರೋ ಅದೇ ಬಣ್ಣದಲ್ಲಿ ದೃಶ್ಯಗಳು ಕಾಣುತ್ತವೆ. ಆದರೆ ನಾವು ಯಾವ ಕನ್ನಡಕವನ್ನೂ ಧರಿಸಿಲ್ಲ ಎಂದರು.

English summary
The Ram temple in Ayodhya will be built in around three years and the construction cost of the project will exceed Rs 1100 crore, a prominent functionary of the temple trust has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X