• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈನ್‌ಪುರಿಯಲ್ಲಿ ಎಸ್‌ಪಿ ನಾಯಕನ ಕಾರಿಗೆ ಡಿಕ್ಕಿ ಹೊಡೆದು 500 ಮೀಟರ್‌ ಎಳೆದೊಯ್ದ ಟ್ರಕ್

|
Google Oneindia Kannada News

ಮೈನ್‌ಪುರಿ ಆಗಸ್ಟ್ 8: ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಸಮಾಜವಾದಿ ಪಕ್ಷದ ನಾಯಕ ದೇವೇಂದ್ರ ಸಿಂಗ್ ಯಾದವ್ ಅವರ ಕಾರಿಗೆ ಭಾನುವಾರ ರಾತ್ರಿ ಟ್ರಕ್ ಡಿಕ್ಕಿ ಹೊಡೆದು, 500 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದ ಘಟನೆ ನಡೆದಿದೆ. ಯಾದವ್ ಅವರು ಈ ಪ್ರದೇಶದಲ್ಲಿ ಎಸ್ಪಿ ಜಿಲ್ಲಾಧ್ಯಕ್ಷರಾಗಿದ್ದಾರೆ. ಈ ವೇಳೆ ಅವರು ಪಕ್ಷದ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದರು.

ಟ್ರಕ್ ಚಾಲಕ ಇಟಾವಾ ಮೂಲದವನಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಮೈನ್‌ಪುರಿ ಕಮಲೇಶ್ ದೀಕ್ಷಿತ್ ತಿಳಿಸಿದ್ದಾರೆ. ವಿಲಕ್ಷಣ ಅಪಘಾತದ ವಿಡಿಯೊ ವೈರಲ್ ಆಗಿದ್ದು ಸ್ವಲ್ಪ ದೂರದವರೆಗೆ ವಾಹನ ಎಳೆದೊಯ್ಯುವುದನ್ನು ತೋರಿಸುತ್ತದೆ. ವಾಹನ ನಿಂತ ತಕ್ಷಣ ರಸ್ತೆಯಲ್ಲಿದ್ದ ಹಲವರು ಸ್ಥಳಕ್ಕೆ ಧಾವಿಸಿ ಸಮಾಜವಾದಿ ಪಕ್ಷದ ನಾಯಕನನ್ನು ರಕ್ಷಿಸಲು ಯತ್ನಿಸಿದರು.

English summary
Samajwadi Party leader Devendra Singh Yadav's car was hit by a truck on Sunday night, and was dragged for more than 500 meters in Uttar Pradesh's Mainpuri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X