ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ಪಿ, ಎಸ್‌ಪಿ ಚುನಾವಣೆಯಲ್ಲಿ ಮಾತ್ರವಲ್ಲ, ಧ್ವಜದಲ್ಲೂ ಮೈತ್ರಿ!

|
Google Oneindia Kannada News

ಲಕ್ನೋ, ಮಾರ್ಚ್ 15: ಚುನಾವಣಾ ಮೈತ್ರಿ ಅಂದ್ರೆ ಹೀಗಿರಬೇಕು ನೋಡಿ, ಕೇವಲ ಒಟ್ಟಾಗಿ ಸ್ಪರ್ಧೆ ಮಾಡ್ತೀವಿ ಅನ್ನೋದಲ್ಲ, ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷ ಚುನಾವಣೆಗಾಗಿ ತಮ್ಮ ಧ್ವಜವನ್ನೇ ವಿಲೀನಗೊಳಿಸಿವೆ.

ಕೇವಲ ಒಂದು ವರ್ಷದ ಹಿಂದೆ ಬದ್ಧ ವೈರಿಗಳಾಗಿದ್ದು ಚುನಾವಣಾಯಲ್ಲಿ ಮೈತ್ರಿಯ ಮೂಲಕ ಗೆಲುವಿನ ಭರ್ಜರಿ ರುಚಿ ಕಂಡಿದ್ದ ಉತ್ತರ ಪ್ರದೇಶದ ಎಸ್‌ಪಿ ಮತ್ತು ಬಿಎಸ್‌ಪಿ ಪಕ್ಷಗಳು ಇದೀಗ ತಮ್ಮ ಧ್ವಜವನ್ನೇ ವಿಲೀನಗೊಳಿಸುವ ಮೂಲಕ ಹೊಸದೊಂದು ರಾಜಕೀಯ ಇತಿಹಾಸ ಸೃಷ್ಟಿಸಿದ್ದಾರೆ.

ಬಿಜೆಪಿಯನ್ನು ಸೋಲಿಸಲೇ ಬೇಕು

ಬಿಜೆಪಿಯನ್ನು ಸೋಲಿಸಲೇ ಬೇಕು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದು ಪಣತೊಟ್ಟು ಮೈತ್ರಿ ಮಾಡಿಕೊಂಡಿರುವ ಈ ಎರಡೂ ಪಕ್ಷಗಳು, ಇದೀಗ ಲೋಕಸಭಾ ಚುನಾವಣೆಗಾಗಿ ತಮ್ಮ ಪಕ್ಷಗಳ ಧ್ವಜವನ್ನೇ ವಿಲೀನಗೊಳಿಸಿವೆ.

ವಿಲೀನ ಧ್ವಜ ಹೇಗಿದೆ?

ವಿಲೀನ ಧ್ವಜ ಹೇಗಿದೆ?

ಕೆಂಪು ಮತ್ತು ನೀಲಿ ಬಣ್ಣದ ಧ್ವಜದ ಮೇಲೆ ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷದ ಚಿಹ್ನೆಯ ಒತೆ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಅವರ ಭಾವಚಿತ್ರವನ್ನು ಕಾಣಬಹುದಾಗಿದೆ. ಈ ಧ್ವಜ ಇದೀಗ ಉತ್ತರ ಪ್ರದೇಶದಲ್ಲಿ ಭಾರಿ ಜನಪ್ರಿಯವಾಗಿದೆ.

ಪ್ರಿಯಾಂಕಾ ದಲಿತ ರಾಜಕೀಯಕ್ಕೆ ಕಂಗಾಲಾದ ಮಾಯಾವತಿ, ಅಖಿಲೇಶ್ಪ್ರಿಯಾಂಕಾ ದಲಿತ ರಾಜಕೀಯಕ್ಕೆ ಕಂಗಾಲಾದ ಮಾಯಾವತಿ, ಅಖಿಲೇಶ್

ಧ್ವಜ ಅಧಿಕೃತ ಬಿಡುಗಡೆ ಇಲ್ಲ ಬಿಎಸ್‌ಪಿ , ಎಸ್‌ಪಿ ಜಂಟಿ ಧ್ವಜವನ್ನು ಅಧಿಕೃತವಾಗಿ ಬಿಡುಗಡೆ ಮಾಡದೇ ಇದ್ದರೂ ಕಾರ್ಯಕರ್ತರ ವಲಯದಲ್ಲಿ ಈ ಧ್ವಜಕ್ಕೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಲಕ್ನೋ ನಲ್ಲಿ 2 ಸಾವಿರಕ್ಕೂ ಹೆಚ್ಚು ಜಂಟಿ ಧ್ವಜಗಳ ಮಾರಾಟವಾಗಿವೆ. ಅಲ್ಲದೇ ಚುನಾವಣಾ ಪ್ರಚಾರಕ್ಕೂ ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷ ಗಳು ಒಂದೇ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.

ಧ್ವಜ ಅಧಿಕೃತ ಬಿಡುಗಡೆ ಇಲ್ಲ ಬಿಎಸ್‌ಪಿ , ಎಸ್‌ಪಿ ಜಂಟಿ ಧ್ವಜವನ್ನು ಅಧಿಕೃತವಾಗಿ ಬಿಡುಗಡೆ ಮಾಡದೇ ಇದ್ದರೂ ಕಾರ್ಯಕರ್ತರ ವಲಯದಲ್ಲಿ ಈ ಧ್ವಜಕ್ಕೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಲಕ್ನೋ ನಲ್ಲಿ 2 ಸಾವಿರಕ್ಕೂ ಹೆಚ್ಚು ಜಂಟಿ ಧ್ವಜಗಳ ಮಾರಾಟವಾಗಿವೆ. ಅಲ್ಲದೇ ಚುನಾವಣಾ ಪ್ರಚಾರಕ್ಕೂ ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷ ಗಳು ಒಂದೇ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.

ಬಿಎಸ್‌ಪಿ , ಎಸ್‌ಪಿ ಜಂಟಿ ಧ್ವಜವನ್ನು ಅಧಿಕೃತವಾಗಿ ಬಿಡುಗಡೆ ಮಾಡದೇ ಇದ್ದರೂ ಕಾರ್ಯಕರ್ತರ ವಲಯದಲ್ಲಿ ಈ ಧ್ವಜಕ್ಕೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಲಕ್ನೋ ನಲ್ಲಿ 2 ಸಾವಿರಕ್ಕೂ ಹೆಚ್ಚು ಜಂಟಿ ಧ್ವಜಗಳ ಮಾರಾಟವಾಗಿವೆ. ಅಲ್ಲದೇ ಚುನಾವಣಾ ಪ್ರಚಾರಕ್ಕೂ ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷ ಗಳು ಒಂದೇ ವಾಹನಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ.

ಮಾಯಾವತಿ ಬಗ್ಗೆ ಹುಷಾರು! ಅಖಿಲೇಶ್ ಯಾದವ್‌ಗೆ ಚಿಕ್ಕಪ್ಪನ ಎಚ್ಚರಿಕೆಮಾಯಾವತಿ ಬಗ್ಗೆ ಹುಷಾರು! ಅಖಿಲೇಶ್ ಯಾದವ್‌ಗೆ ಚಿಕ್ಕಪ್ಪನ ಎಚ್ಚರಿಕೆ

ಎಸ್‌ಪಿ, ಬಿಎಸ್‌ಪಿಗೆ ಕಾಂಗ್ರೆಸ್ ಬೆಂಬಲ?

ಎಸ್‌ಪಿ, ಬಿಎಸ್‌ಪಿಗೆ ಕಾಂಗ್ರೆಸ್ ಬೆಂಬಲ?

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ್ನು ಬದಿಗೆ ಸರಿಸಿ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜಪಕ್ಷಗಳ ನಡುವೆ ಹೊಂದಾಣಿಕೆ ಅಂತಿಮವಾಗಿದ್ದರೂ ಮುಂದಿನ ದಿನಗಳಲ್ಲಿ ಕೆಲ ಮಟ್ಟಿಗಿನ ಹೊಂದಾಣಿಕೆ ಏರ್ಪಡುವ ಸುಳಿವನ್ನು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ನೀಡಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮೈತ್ರಿ ಮಾಡಿಕೊಂಡಿದ್ದಾರೆ. ಬಹುಜನ ಸಮಾಜ ಪಕ್ಷ 38 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಅದರ ಮೈತ್ರಿಕೂಟದ ಅಂಗಪಕ್ಷ ಸಮಾಜವಾದಿ ಪಕ್ಷ 37 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

English summary
Once sworn enemies, SP and BSP have not just stitched together a grand alliance ahead of Lok Sabha polls, their flags too have merged into one united colours of red and blue, with respective party symbols embossed on either side. While red symbolises Akhilesh Yadav’s SP, blue stand’s for Mayawati’s BSP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X