ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರ ಅಂತ್ಯ ಸಂಸ್ಕಾರಕ್ಕಾಗಿ 3 ಲೋಡ್‌ ಕಟ್ಟಿಗೆ ಕಳುಹಿಸಿದ ಸೋನಿಯಾ

|
Google Oneindia Kannada News

ರಾಯ್‌ ಬರೇಲಿ, ಮೇ 25: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಲೋಕಸಭಾ ಕ್ಷೇತ್ರವಾದ ರಾಯ್‌ ಬರೇಲಿಯಲ್ಲಿ ಬಡವರ ಶವಸಂಸ್ಕಾರ ಮಾಡಲು ಮೂರು ಟ್ರಕ್ ಲೋಡ್ ಕಟ್ಟಿಗೆಯನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಕ್ಷದ ವಕ್ತಾರ ವಿನಯ್ ದ್ವಿವೇದಿ, "ಶವಸಂಸ್ಕಾರಕ್ಕಾಗಿ ಕಟ್ಟಿಗೆಗಳನ್ನು ವ್ಯವಸ್ಥೆ ಮಾಡುವಂತೆ ಸೋನಿಯಾಜಿ ತನ್ನ ಪ್ರತಿನಿಧಿ ಕೆ.ಎಲ್. ಶರ್ಮಾ ಅವರಿಗೆ ನಿರ್ದೇಶನ ನೀಡಿದ್ದಾರೆ. ಬಡವರಿಗೆ ಅಂತ್ಯ ಸಂಸ್ಕಾರ ನಡೆಸಲೂ ಸಂಕಷ್ಟದಲ್ಲಿರುವ ಸಂದರ್ಭ ಈಗ ಪಕ್ಷದ ಕಾರ್ಯಕರ್ತರು ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡುವ ಮೂಲಕ ತಮ್ಮ ಆತ್ಮೀಯರನ್ನು ಕಳೆದುಕೊಂಡ ಬಡ ಜನರಿಗೆ ಸಹಾಯ ಮಾಡಲಿದೆ" ಎಂದು ಹೇಳಿದ್ದಾರೆ.

ಜಗತ್ತಿನ 4ನೇ ಶ್ರೀಮಂತ ಮಹಿಳೆ ಸೋನಿಯಾ ಗಾಂಧಿ ಕೋವಿಡ್ ನಿಧಿಗೆ ಸಹಾಯ ಹಸ್ತ ಚಾಚಿಲ್ಲವೇಕೆ?ಜಗತ್ತಿನ 4ನೇ ಶ್ರೀಮಂತ ಮಹಿಳೆ ಸೋನಿಯಾ ಗಾಂಧಿ ಕೋವಿಡ್ ನಿಧಿಗೆ ಸಹಾಯ ಹಸ್ತ ಚಾಚಿಲ್ಲವೇಕೆ?

ರಾಯ್‌ ಬರೇಲಿಯಲ್ಲಿ ಶವಸಂಸ್ಕಾರವು ಗಂಗಾ ನದಿ ತೀರದಲ್ಲಿರುವ ಗೋಕ್ನಾ, ಡಾಲ್ಮಾ, ಮತ್ತು ಗೆಗಾಸೊ ಘಾಟ್‌ಗಳಲ್ಲಿ ನಡೆಯುತ್ತದೆ. ಅನೇಕ ಬಡ ಜನರು ತಮ್ಮ ಮನೆಯವರ ಕೊನೆಯ ವಿಧಿ ಸಂಸ್ಕಾರಕ್ಕೆ ಕಟ್ಟಿಗೆ ಖರೀದಿಸಲೂ ಸಾಧ್ಯವಾಗದೆ ನದಿಯ ಪಕ್ಕದಲ್ಲಿ ಮೃತರನ್ನು ಸಮಾಧಿ ಮಾಡುತ್ತಿದ್ದಾರೆ.

Sonia sends firewood for cremation of poor people in Rae Bareli

ಕೋವಿಡ್ ಪರಿಸ್ಥಿತಿ; ಕೇಂದ್ರದ ವಿರುದ್ಧ ಹಲವು ಆರೋಪ ಮಾಡಿದ ಸೋನಿಯಾ ಗಾಂಧಿ ಕೋವಿಡ್ ಪರಿಸ್ಥಿತಿ; ಕೇಂದ್ರದ ವಿರುದ್ಧ ಹಲವು ಆರೋಪ ಮಾಡಿದ ಸೋನಿಯಾ ಗಾಂಧಿ

ಈ ತಿಂಗಳ ಆರಂಭದಲ್ಲಿ ಯುಪಿಯಲ್ಲಿ ಗಂಗಾ ನದಿ ತೀರದಲ್ಲಿ ಶಂಕಿತ ಕೋವಿಡ್ ರೋಗಿಗಳ ಶವಗಳು ತೇಲಿ ಬಂದಿರುವುದು ಸುದ್ದಿಯಾಗಿತ್ತು. ಈ ಬಳಿಕ ಯೋಗಿ ಆದಿತ್ಯನಾಥ್ ಸರ್ಕಾರವು ಹಳ್ಳಿಗಳಲ್ಲಿನ ಎಲ್ಲ ಬಡವರ ಅಂತ್ಯಕ್ರಿಯೆಗಾಗಿ 5,000 ರೂ.ಗಳನ್ನು ಘೋಷಿಸಿದರೆ, ರಾಜ್ಯದ ಕಾರ್ಮಿಕ ಕಲ್ಯಾಣ ಮಂಡಳಿಯು ಪ್ರತ್ಯೇಕವಾಗಿ 7,500 ರೂಗಳನ್ನು ಘೋಷಿಸಿದೆ.

English summary
Congress interim president Sonia Gandhi sends three truckloads of firewood for cremation of poor people in Rae Bareli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X