ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಸಮರ : ರಾಯ್ ಬರೇಲಿಯಿಂದಲೇ ಸೋನಿಯಾ ಗಾಂಧಿ ಸ್ಪರ್ಧೆ?

|
Google Oneindia Kannada News

Recommended Video

ರಾಯ್ ಬರೇಲಿಯಿಂದಲೇ ಸೋನಿಯಾ ಗಾಂಧಿ ಸ್ಪರ್ಧೆ? | Oneindia Kannada

ಲಕ್ನೋ, ಫೆಬ್ರವರಿ 22: ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಿಂದ ತನ್ನ ಕಾರ್ಯತಂತ್ರ ಆರಂಭಿಸಿದೆ. ಈ ನಡುವೆ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.

ಲಭ್ಯ ಮಾಹಿತಿ ಪ್ರಕಾರ, ಈ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಸೋನಿಯಾ ಗಾಂಧಿ(72) ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದು, ಈ ಬಾರಿ ಚುನಾವಣಾ ಕಣಕ್ಕಿಳಿಯುವುದೇ ಅನುಮಾನ ಎಂಬ ಸುದ್ದಿಯೂ ಇದೆ.

ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್‌ ಬರೇಲಿಗೆ ಪ್ರಿಯಾಂಕಾ?ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್‌ ಬರೇಲಿಗೆ ಪ್ರಿಯಾಂಕಾ?

19ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು 2017ರಲ್ಲಿ ಪಕ್ಷದ ಜವಾಬ್ದಾರಿಯನ್ನು ಪುತ್ರ ರಾಹುಲ್ ಗಾಂಧಿಗೆ ವಹಿಸಿಕೊಟ್ಟರು. ಸದ್ಯ ಯುಪಿಎ ಚೇರ್ಮನ್ ಆಗಿ ಸೋನಿಯಾ ಗಾಂಧಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈತ್ರಿ ಪಕ್ಷಗಳ ಜತೆ ಸಂಪರ್ಕ ಸಂಪನ್ಮೂಲ ವ್ಯಕ್ತಿಯಾಗಿ ಸೋನಿಯಾ ಇದ್ದಾರೆ.

Sonia Gandhi to contest from Rae Bareli again, say Reports

ಕಳೆದ ಹಲವು ವರ್ಷಗಳಿಂದ ಸೋನಿಯಾ ಗಾಂಧಿ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಚಿಕಿತ್ಸೆ ಪಡೆದು ಮತ್ತೆ ಭಾರತಕ್ಕೆ ಮರಳಿದ್ದಾರೆ. ಅನಾರೋಗ್ಯ ಬಾಧಿಸಿದರೂ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿಲ್ಲ.

ಆದರೆ, ಈಗ ಪುತ್ರಿ ಪ್ರಿಯಾಂಕಾ ಗಾಂಧಿ ಅವರು ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕ ಸೋನಿಯಾ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ರಾಯ್ ಬರೇಲಿ ಕ್ಷೇತ್ರವನ್ನು ಪುತ್ರಿ ಪ್ರಿಯಾಂಕಾಗೆ ಬಿಟ್ಟು ಕೊಡುತ್ತಾರೆ ಎಂಬ ಸುದ್ದಿಯೂ ಬಂದಿದೆ.

ಸೋನಿಯಾ ಪಕ್ಕದಲ್ಲೇ ಕುಳಿತು ಮೋದಿ ಪ್ರಧಾನಿ ಆಗಲೆಂದ ಮುಲಾಯಂ!ಸೋನಿಯಾ ಪಕ್ಕದಲ್ಲೇ ಕುಳಿತು ಮೋದಿ ಪ್ರಧಾನಿ ಆಗಲೆಂದ ಮುಲಾಯಂ!

ಅಮೇಥಿಯಲ್ಲಿ 1999ರಲ್ಲಿ ಗೆಲುವು ಸಾಧಿಸಿದ್ದ ಸೋನಿಯಾ ನಂತರ ಅಮೇಥಿಯನ್ನು ಪುತ್ರ ರಾಹುಲ್ ಗೆ ಬಿಟ್ಟುಕೊಟ್ಟರು. 2004ರಿಂದ ರಾಹುಲ್ ಅಲ್ಲಿಂದಲೇ ಸ್ಪರ್ಧಿಸುತ್ತಿದ್ದಾರೆ.

ಮತ್ತೆ ರಾಯ್ ಬರೇಲಿಗೆ ಮರಳಿದ ಸೋನಿಯಾ ಅವರು ಸ್ಪರ್ಧಿಸಿದರೆ ಮುಖ್ಯ ಕ್ಷೇತ್ರ ರಾಯ್ ಬರೇಲಿ ಆಗಲಿದ್ದು, ಮತ್ತೊಂದು ಕ್ಷೇತ್ರವನ್ನು ದಕ್ಷಿಣ ಭಾಗದಲ್ಲಿ (ಈ ಹಿಂದೆ ಬಳ್ಳಾರಿಯಿಂದ ಸ್ಪರ್ಧಿಸಿದಂತೆ) ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

'ನನ್ನಿಂದ ಪವಾಡ ನಿರೀಕ್ಷಿಸಬೇಡಿ, ಬೂತ್ ಮಟ್ಟದಲ್ಲಿ 'ಕೈ' ಬಲಪಡಿಸಿ''ನನ್ನಿಂದ ಪವಾಡ ನಿರೀಕ್ಷಿಸಬೇಡಿ, ಬೂತ್ ಮಟ್ಟದಲ್ಲಿ 'ಕೈ' ಬಲಪಡಿಸಿ'

ಪ್ರಿಯಾಂಕಾ ಗಾಂಧಿ ಅವರು ಪ್ರಸ್ತುತ ಲಕ್ನೋ ಪೂರ್ವ ವಿಭಾಗದ ಚುನಾವಣಾ ಉಸ್ತುವಾರಿಯಾಗಿದ್ದು, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಬಲ ತುಂಬಲು ಮುಂದಾಗಿದ್ದಾರೆ. ಉತ್ತರಪ್ರದೇಶದಲ್ಲಿ ಈಗ ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮೈತ್ರಿ ಜತೆಗೆ ಕಾಂಗ್ರೆಸ್ ವಿರುದ್ಧವೂ ಸೆಣಸಬೇಕಿದೆ.

English summary
Lucknow, Feb 19: Former Congress president Sonia Gandhi may contest the national election again from Raebareli, media reports said on Tuesday. The formal announcement on this is expected early next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X