ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 4ನೇ ಗೆಲುವಿನ ನಿರೀಕ್ಷೆಯಲ್ಲಿ ಸೋನಿಯಾ ಗಾಂಧಿ

|
Google Oneindia Kannada News

ಲಕ್ನೋ, ಮೇ 6: ಇಂದು ಮತದಾನ ನಡೆಯಲಿರುವ51ಕ್ಷೇತ್ರಗಳಲ್ಲಿ ಉತ್ತರಪ್ರದೇಶದ ರಾಯ್‌ಬರೇಲಿ ಕೂಡ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್‌ಬರೇಲಿಯಿಂದ 4ನೇ ಬಾರಿಗೆ ಆಯ್ಕೆ ಬಯಿಸಿ ಕಾಂಗ್ರೆಸ್‌ ಇಂದ ಸ್ಪರ್ಧಿಸಿದ್ದಾರೆ.

ಸೋನಿಯಾ ಆಪ್ತ ವಲಯದಲ್ಲೇ ಇದ್ದ ದಿನೇಶ್‌ ಪ್ರತಾಪ್‌ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿರುವುದು ವಿಶೇಷ. ಈ ಬಾರಿಯೂ ಸೋನಿಯಾ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ ಎಂಬ ವರದಿಗಳು ಬರುತ್ತಿದ್ದು, ಬಿಜೆಪಿ ಅಭ್ಯರ್ಥಿ ಎಷ್ಟು ಮತ ಪಡೆಯುತ್ತಾರೆ ಎನ್ನುವುದಷ್ಟೆ ಬಾಕಿಯಿದೆ.

5ನೇ ಹಂತದ ಚುನಾವಣೆ LIVE: ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರ5ನೇ ಹಂತದ ಚುನಾವಣೆ LIVE: ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರ

ಕಳೆದ ಬಾರಿ ಮೂರೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಸೋನಿಯಾ ಗೆದ್ದಿದ್ದರು. ಈ ಬಾರಿಯೂ ಎಸ್ಪಿ-ಬಿಎಸ್ಪಿ ಮೈತ್ರಿಕೂಟದಿಂದ ಸೋನಿಯಾ ವಿರುದ್ಧ ಅಭ್ಯರ್ಥಿ ಹಾಕಲಾಗಿಲ್ಲ. ಹೀಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆಯಿದೆ.

Sonia gandhi is looking for 4th consecutive win at Raebareli

ಅನಾರೋಗ್ಯ ಕಾರಣದಿಂದ ನಾಮಪತ್ರ ಸಲ್ಲಿಕೆ ಬಳಿಕ ಒಮ್ಮೆ ಮಾತ್ರ ಕ್ಷೇತ್ರದಲ್ಲಿ ಸೋನಿಯಾ ಪ್ರಚಾರ ಮಾಡಿದ್ದಾರೆ. ಉಳಿದಂತೆ ಪುತ್ರಿ ಪ್ರಿಯಾಂಕಾ ಗಾಂಧಿಯೇ ಪ್ರಚಾರದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಸೋನಿಯಾ ಪಾಲಿಗೆ ಇದು ಕೊನೆಯ ಚುನಾವಣೆ ಎನ್ನಲಾಗುತ್ತಿದೆ. ಈ ಕ್ಷೇತ್ರವನ್ನು ಭವಿಷ್ಯದಲ್ಲಿ ಪ್ರಿಯಾಂಕಾ ಪ್ರತಿನಿಧಿಸಬಹುದು ಎಂಬ ಮಾತುಗಳು ಕೂಡ ಇವೆ. ಈ ಹಿಂದೆ ಇಂದಿರಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

English summary
UPA chairperson Sonia Gandhi is looking for 4th consecutive win at Raebareli constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X