ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಬೇಸಿಗೆಯಲ್ಲಿ ಎಲ್ಲಿಗೆ ಹೋಗ್ತಾರೆ ಎಂದು ಸೋನಿಯಾಗೂ ಗೊತ್ತಿಲ್ಲ: ಅಮಿತ್ ಶಾ

|
Google Oneindia Kannada News

Recommended Video

Lok Sabha Elections 2019: ರಾಹುಲ್ ಬೇಸಿಗೆಯಲ್ಲಿ ಎಲ್ಲಿಗೆ ಹೋಗ್ತಾರೆ ಅಂತ ಸ್ವತಃ ಸೋನಿಯಾಗೂ ಗೊತ್ತಿಲ್ಲ..ಕಾರಣ?

ಲಕ್ನೋ, ಏಪ್ರಿಲ್ 30: ದೇಶದಲ್ಲಿ ತಾಪಮಾನ ಹೆಚ್ಚಾದಂತೆ ಕೂಲ್ ಆಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ವಿದೇಶಕ್ಕೆ ಓಡುತ್ತಾರೆ ಅವರು ಎಲ್ಲಿಗೆ ಹೋಗುತ್ತಾರೆ ಎಂದು ಸೋನಿಯಾಗೂ ಕೂಡ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.

ಉತ್ತರ ಪ್ರದೇಶದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಬೇಸಿಗೆ ಬಂತೆಂದರೆ ರಜೆ ತೆಗೆದುಕೊಂಡು ವಿದೇಶಕ್ಕೆ ಹಾರಿಬಿಡುತ್ತಾರೆ, ತಾಯಿ ಸೋನಿಯಾಗಾಂಧಿ ಕೈಗೂ ಸಿಗುವುದಿಲ್ಲ ಎಂದರು.

ಮೋದಿ, ಶಾ ವಿರುದ್ಧ ಕ್ರಮ ಜರುಗಿಸದ ಆಯೋಗದ ವಿರುದ್ಧ ಸುಪ್ರೀಂಗೆ ದೂರುಮೋದಿ, ಶಾ ವಿರುದ್ಧ ಕ್ರಮ ಜರುಗಿಸದ ಆಯೋಗದ ವಿರುದ್ಧ ಸುಪ್ರೀಂಗೆ ದೂರು

ಆದರೆ ಮತ್ತೊಂದೆಡೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಕಳೆದ 20 ವರ್ಷಗಳಿಂದ ರಜೆಯನ್ನೇ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ.

Sonia Gandhi Also Unaware Where Rahul Goes Every Summer

ಮೋದಿಗೆ ಇನ್ನೊಂದು ಅವಕಾಶವನ್ನು ನೀಡಿದರೆ ದೇಶದಲ್ಲಿ ಬಡವರು ಹಾಗೂ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಶ್ರಮವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಯಾವತ್ತೂ ಪಾಕಿಸ್ತಾನಕ್ಕೆ ತಿರುಗೇಟು ನೀಡಿರಲಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತದ ಯೋಧ ಹೇಮರಾಜ್ ಅವರ ದೇಹವನ್ನು ಪಾಕ್ ಯೋಧರು ಛಿದ್ರಗೊಳಿಸಿದ್ದ ಘಟನೆಯನ್ನು ನೆನಪಿಸಿಕೊಂಡರೆ ದುಃಖವಾಗುತ್ತದೆ.

ಜಾರ್ಖಂಡ್‌ನಲ್ಲಿರುವ ಕಾಂಗ್ರೆಸ್ ಮಿತ್ರ ಪಕ್ಷಗಳಾದ ಜೆಎಂಎಂ ಮತ್ತು ಆರ್‌ಜೆಡಿ ಇದಕ್ಕಿಂತ ಹೊರತಾಗಿಲ್ಲ. ಕಾಂಗ್ರೆಸ್ ಕಶ್ಮೀರದಲ್ಲಿ ಆರ್ಟಿಕಲ್ 370ನ್ನು ರದ್ದು ಮಾಡಲು ಬಯಸುವುದಿಲ್ಲ, ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಜನತಾದಳ ಈ ವಿಷಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ ಎಂದು ಹರಿಹಾಯ್ದರು.

English summary
BJP president Amit Shah on Monday accused the Opposition of giving tickets to musclemen in Uttar Pradesh, asserting that their presence would not have any impact as the Yogi Adityanath government had been acting "tough" against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X