ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಗೇಜ್ ಹೊತ್ತ 80ರ ವೃದ್ಧ ಸೋಷಿಯಲ್ ಮೀಡಿಯಾದ ಹೀರೋ!

|
Google Oneindia Kannada News

ಲಕ್ನೋ, ಜೂನ್.02: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನೆರವು ನೀಡಿದ 80 ವರ್ಷದ ವೃದ್ಧ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಹೀರೋ ಆಗಿ ಮಿಂಚುತ್ತಿದ್ದಾರೆ.

ವಲಸೆ ಕಾರ್ಮಿಕರ ಸಂಚಾರಕ್ಕೆ ಅನುಕೂಲವಾಗಲೆಂದು ಭಾರತೀಯ ರೈಲ್ವೆ ಸಚಿವಾಲಯವು ಶ್ರಮಿಕ್ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಈ ಹಿನ್ನೆಲೆ ಲಕ್ನೋದ ಚರ್ಬಾಗ್ ರೈಲ್ವೆ ನಿಲ್ದಾಣದಲ್ಲಿ ಕೂಲಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ 80 ವರ್ಷದ ಮುಜಿಬುಲ್ಲಾ ರೆಹಮಾನ್ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಿದ ಉಡುಪಿಯ ದಿಟ್ಟ ಯುವತಿವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಿದ ಉಡುಪಿಯ ದಿಟ್ಟ ಯುವತಿ

80ನೇ ವಯಸ್ಸಿನಲ್ಲೂ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿರುವ ಮುಜಿಬುಲ್ಲಾ, ಶ್ರಮಿಕ್ ರೈಲುಗಳಲ್ಲಿ ಆಗಮಿಸುವ ಕಾರ್ಮಿಕರ ಲಗೇಜ್ ಗಳನ್ನು ಹೊತ್ತುಕೊಂಡು ಉಚಿತವಾಗಿ ಸೇವೆ ಸಲ್ಲಿಸುವ ಮೂಲಕ ವಲಸಿಗರ ಕಾರ್ಮಿಕರಿಗೆ ನೆರವು ನೀಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

Social Media Hero: 80-year-old Porter Who Helps Migrants For Free At Railway Station

ದಿನಕ್ಕೆ 8-10 ಗಂಟೆಗಳ ಕಾಲ ಕೂಲಿ ಕೆಲಸ:

ಇಳಿವಯಸ್ಸಿನಲ್ಲೂ ಸೇವಾ ಮನೋಭಾವನೆಯನ್ನು ಇಟ್ಟುಕೊಂಡು ಮುಜಿಬುಲ್ಲಾ ರೆಹಮಾನ್ ಅವರು ಪ್ರತಿನಿತ್ಯ ಲಕ್ನೋದ ಚರ್ಬಾಗ್ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕಾರ್ಮಿಕರಾಗಿ 8 ರಿಂದ 10 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದರು. ಮುಖಕ್ಕೆ ಮಾಸ್ಕ್ ತೊಟ್ಟುಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಯಾಣಿಕರಿಗೆ ಉಚಿತವಾಗಿ ಸಹಾಯ ಮಾಡುತ್ತಿದ್ದ 80ರ ಮುಜಿಬುಲ್ಲಾ ರೆಹಮಾನ್ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇವರೊಬ್ಬ ಹೀರೋರಂತೆ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.

English summary
Social Media Hero: 80-year-old porter who helps migrants for free at railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X