ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಪಕ್ಷದ ಹೆಸರು ಘೋಷಿಸಿದ ಶಿವಪಾಲ್ ಯಾದವ್

|
Google Oneindia Kannada News

ಲಕ್ನೋ, ಅಕ್ಟೋಬರ್ 23: ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೋದರ ಶಿವಪಾಲ್ ಯಾದವ್ ಅವರು ತಮ್ಮ ಹೊಸ ಪಕ್ಷವನ್ನು ಘೋಷಿಸಿದ್ದಾರೆ.

ಸಮಾಜವಾದಿ ಪಕ್ಷದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಎಸ್ ಪಿ ಮುಖಂಡ ಶಿವಪಾಲ್ ಯಾದವ್ ಅವರು 'ಸಮಾಜವಾದಿ ಜಾತ್ಯಾತೀತ ಮೋರ್ಚಾ'(ಎಸ್ಎಸ್ಎಂ) ಎಂಬ ಪಕ್ಷವನ್ನು ಆಗಸ್ಟ್ ತಿಂಗಳಿನಲ್ಲಿ ಘೋಷಿಸಿದ್ದರು. ಅಣ್ಣನ ಮಗ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಂದ ಬೇರ್ಪಟ್ಟು ಆಗಸ್ಟ್ 29ರಂದು ಎಸ್ಎಸ್ಎಂ ಘೋಷಿಸಿದ್ದರು.

ಎಸ್ಪಿ ವಿಭಜನೆಯನ್ನು ತಡೆಯಲು ಆ ದೇವರಿಂದಲೂ ಸಾಧ್ಯವಿಲ್ಲ!ಎಸ್ಪಿ ವಿಭಜನೆಯನ್ನು ತಡೆಯಲು ಆ ದೇವರಿಂದಲೂ ಸಾಧ್ಯವಿಲ್ಲ!

ಆದರೆ, ಈಗ ಚುನಾವಣಾ ಆಯೋಗಕ್ಕೆ ಹೊಸ ಪಕ್ಷದ ಹೆಸರನ್ನು 'ಪ್ರಗತಿಶೀಲ್ ಸಮಾಜವಾದಿ ಪಾರ್ಟಿ ಲೋಹಿಯಾ' ಎಂದು ನೀಡಿದ್ದಾರೆ.

Shivpal Yadav announces new party

'ನನ್ನ ಹೊಸ ಪಕ್ಷದ ಹೆಸರನ್ನು ನೋಂದಾಯಿಸಲಾಗಿದೆ. ಪ್ರಗತಿಶೀಲ್ ಸಮಾಜಶೀಲ್ ಸಮಾಜವಾದಿ ಪಕ್ಷ ಲೋಹಿಯಾ ಎಂಬ ಹೆಸರು ಸ್ಥಿರವಾಗಲಿದೆ, ಹೊಸ ಶಕ್ತಿಯಾಗಲಿದೆ ಎಂದರು. 2019ರ ಚುನಾವಣೆಯಲ್ಲಿ 80ಕ್ಕೂ ಅಧಿಕ ಲೋಕಸಭೆ ಸ್ಥಾನದಲ್ಲಿ ಸ್ಪರ್ಧಿಸಲು ಶಿವಪಾಲ್ ಯಾದವ್ ಅವರ ಪಕ್ಷ ಸಿದ್ಧವಾಗುತ್ತಿದೆ.

ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಗೆ 12 ಕೋಣೆಯ ಸರಕಾರಿ ಬಂಗಲೆಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಗೆ 12 ಕೋಣೆಯ ಸರಕಾರಿ ಬಂಗಲೆ

ಜಸ್ವಂತ್ ನಗರದ ಎತಾವಾ ಜಿಲ್ಲೆಯ ಸಮಾಜವಾದಿ ಪಕ್ಷದ ಶಾಸಕರಾಗಿರುವ ಶಿವಪಾಲ್ ಯಾದವ್ ಅವರಿಗೆ ಇತ್ತೀಚೆಗೆ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅರ್ಪಣಾ ಯಾದವ್ ಅವರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದರು.

English summary
Weeks after launching the Samajwadi Secular Morcha, Shivpal Singh Yadav Tuesday announced his new political party, registered with the Election Commission as Pragatisheel Samajwadi Party Lohia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X