ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಖಾ ಧರಿಸಿ ನಕಲಿ ಮತದಾನ ಎಂದು ಆರೋಪಿಸಿದ ಬಿಜೆಪಿ ಅಭ್ಯರ್ಥಿ

|
Google Oneindia Kannada News

ಮುಜಾಫರ್‌ನಗರ, ಏ.11: ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಬುರ್ಖಾ ಧರಿಸಿ ನಕಲಿ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಂಜೀವ್ ಬಲ್ಯನ್ ಆರೋಪಿಸಿದರು.

ದೇಶದ ಒಟ್ಟು 19ರಾಜ್ಯ 91 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಬುರ್ಖಾ ಧರಿಸಿದರೆ ಯಾರೂ ಕೂಡ ಅವರನ್ನು ಪರೀಕ್ಷೆ ಮಾಡುವುದಿಲ್ಲ ಎಂದು ಹೇಳಿ ಬುರ್ಖಾ ಧರಿಸಿ ಕೆಲವರು ನಕಲಿ ಮತದಾನ ಮಾಡಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆ LIVE:ಛತ್ತೀಸ್ ಗಢದಲ್ಲಿ ಮತಗಟ್ಟೆ ಬಳಿಯೇ ಸ್ಫೋಟ!ಲೋಕಸಭೆ ಚುನಾವಣೆ LIVE:ಛತ್ತೀಸ್ ಗಢದಲ್ಲಿ ಮತಗಟ್ಟೆ ಬಳಿಯೇ ಸ್ಫೋಟ!

ಮುಜಾಫರ್‌ನಗರದಲ್ಲಿ ಇವಿಎಂನಲ್ಲಿ ದೋಷವಿದ್ದ ಕಾರಣ ಸ್ವಲ್ಪ ತಡವಾಗಿ ಮತದಾನ ಆರಂಭವಾಗಿದೆ. ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಅಜಿತ್ ಸಿಂಗ್ ವಿರುದ್ಧ ಬಲ್ಯನ್ ಅವರು ಕಣದಲ್ಲಿದ್ದಾರೆ.
ಬುರ್ಖಾದಲ್ಲಿರುವವರನ್ನು ಯಾರೂ ಪರೀಕ್ಷಿಸುವುದಿಲ್ಲ ಈಗಾಗಲೇ ಸಾಕಷ್ಟು ನಕಲಿ ಮತದಾನ ನಡೆದಿದೆ ಹಾಗಾಗಿ ಮರು ಮತದಾನ ನಡೆಸಬೇಕು ಎಂದು ಒತ್ತಾಯಿಸಿದರು. ಮಂಗಳವಾರವಷ್ಟೇ ಮತದಾರರಿಗೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಸಂಜೀವ್ ಮೇಲೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು.

Sanjeev Balyan alleges fake voting by burqa-clad women in Muzaffarnagar

ಒಂದೇ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಉತ್ತರ ಪ್ರದೇಶ, ಆಂಧ್ರ, ಅರುಣಾಚಲ, ಗೋವಾ, ಗುಜರಾತ್‌, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತೆಲಂಗಾಣ, ತಮಿಳುನಾಡು, ಉತ್ತರಾಖಂಡ್, ಅಂಡಮಾನ್- ನಿಕೋಬಾರ್, ದಾದ್ರಾ ನಗರ್‌ಹವೇಲಿ, ದಮನ್ ಅಂಡ್ ದಿಯು, ಲಕ್ಷದ್ವೀಪ, ದಿಲ್ಲಿ, ಪುದುಚೇರಿ, ಚಂಡೀಗಢ.

ಅಮೇಥಿಯಲ್ಲಿ ಇಂದು ನಾಮಪತ್ರ ಸಲ್ಲಿಸಲಿರುವ ಸ್ಮೃತಿ ಇರಾನಿ ಅಮೇಥಿಯಲ್ಲಿ ಇಂದು ನಾಮಪತ್ರ ಸಲ್ಲಿಸಲಿರುವ ಸ್ಮೃತಿ ಇರಾನಿ

ಎರಡು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಕರ್ನಾಟಕ, ಮಣಿಪುರ, ರಾಜಸ್ಥಾನ, ತ್ರಿಪುರಾ. ಮೂರು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಅಸ್ಸಾಂ, ಛತ್ತೀಸ್‌ಗಢ , ನಾಲ್ಕುಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಜಾರ್ಖಂಡ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ , ಐದು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಜಮ್ಮು ಮತ್ತು ಕಾಶ್ಮೀರ ಏಳು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತದಾನ ನಡೆಯಲಿದೆ.

English summary
BJP candidate from Muzaffarnagar in Uttar Pradesh, Sanjeev Balyan, on Thursday sparked a row with his allegations that fake votes were being cast by women clad in burqas in the first phase of polling for the Lok Sabha election that started at 7 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X