ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಾಸ್ ದುಬೆ ಕಾರ್ ಪಲ್ಟಿ ಆಗಿದ್ದರಿಂದ ಯೋಗಿ ಸರಕಾರ ಬಚಾವ್ ಆಯಿತು!

|
Google Oneindia Kannada News

ಲಕ್ನೋ, ಜುಲೈ 10: ರೌಡಿ ಶೀಟರ್ ವಿಕಾಸ್ ದುಬೆ ಎನ್ಕೌಂಟರ್ ವಿಚಾರದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.

Recommended Video

Asia cup postponed till june 2021 | Oneindia Kannada

ಈ ಬಗ್ಗೆ ಟ್ವೀಟ್ ಮಾಡಿರುವ ಅಖಿಲೇಶ್, "ಅಸಲಿಗೆ ವಿಕಾಸ್ ದುಬೆಯಿದ್ದ ಕಾರ್ ಪಲ್ಟಿಯಾಗಿಲ್ಲ. ಕಾರು ಪಲ್ಟಿಯಾಗಿಸಿ ಯೋಗಿ ಆದಿತ್ಯನಾಥ್ ಸರಕಾರವನ್ನು ಉಳಿಸಿಕೊಳ್ಳಲಾಯಿತು"ಎಂದು ಹೇಳಿದ್ದಾರೆ.

8 ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಪಾತಕಿ ವಿಕಾಸ್ ದುಬೆ ಎನ್‌ಕೌಂಟರ್‌8 ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಪಾತಕಿ ವಿಕಾಸ್ ದುಬೆ ಎನ್‌ಕೌಂಟರ್‌

"ಕಾರು ಪಲ್ಟಿಯಾಗದಿದ್ದರೆ ಯೋಗಿ ಸರಕಾರದ ಅಸಲಿಯತ್ತು ಬಹಿರಂಗವಾಗುತ್ತಿತ್ತು" ಎಂದು ಲೇವಡಿ ಮಾಡಿರುವ ಅಖಿಲೇಶ್, "ಪ್ರಮುಖ ವ್ಯಕ್ತಿಗಳ ಜೊತೆಗಿನ ವಿಕಾಸ್ ದುಬೆ ನಂಟು ಬಹಿರಂಗಗೊಳ್ಳುವುದು ಎನ್ನುವ ಕಾರಣಕ್ಕಾಗಿ ದುಬೆಯನ್ನು ಪೊಲೀಸರು ಹೊಡೆದುರುಳಿಸಿದ್ದಾರೆ"ಎಂದು ಹೇಳಿದ್ದಾರೆ.

Samajwadi Party Leader Akhilesh Yadav Questions Vikas Dubeys Encounter

"ವಿಕಾಸ್ ದುಬೆಯನ್ನು ಉಜ್ಜೈನಿಯಲ್ಲಿ ಬಂಧಿಸಲಾಯಿತೋ ಅಥವಾ ಆತನೇ ಶರಣಾಗತಿಯಾದನೇ ಎನ್ನುವುದೂ ತಿಳಿಯಬೇಕಾಗಿದೆ"ಎಂದು ಅಖಿಲೇಶ್, ಯೋಗಿ ಸರಕಾರವನ್ನು ಆಗ್ರಹಿಸಿದ್ದಾರೆ.

"ದುಬೆ ಪ್ರಕರಣದಲ್ಲಿನ ಎಲ್ಲಾ ದೂರವಾಣಿ ಕರೆ ಮಾಹಿತಿಯನ್ನು ಸರಕಾರ, ಸಾರ್ವಜನಿಕರ ಮುಂದಿಡಬೇಕೆಂದು" ಅಖಿಲೇಶ್ ಯಾದವ್, ಯೋಗಿ ಸರಕಾರವನ್ನು ಒತ್ತಾಯಿಸಿದ್ದಾರೆ.

ವಿಕಾಸ್ ದುಬೆ ಎನ್ ಕೌಂಟರ್; ಪೊಲೀಸರ ಮುಂದೆ 5 ಪ್ರಶ್ನೆಗಳುವಿಕಾಸ್ ದುಬೆ ಎನ್ ಕೌಂಟರ್; ಪೊಲೀಸರ ಮುಂದೆ 5 ಪ್ರಶ್ನೆಗಳು

ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿದ್ದ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರ ಜೊತೆ ದುಬೆ ತೆರಳುತ್ತಿದ್ದ ಎಸ್‌ಟಿಎಫ್ ಕಾರು ಅಪಘಾತಕ್ಕೀಡಾಗಿ ಪಲ್ಟಿ ಹೊಡೆದು, ಆ ಸಂದರ್ಭದಲ್ಲಿ ಪೊಲೀಸರ ಆಯುಧಗಳನ್ನು ತೆಗೆದುಕೊಂಡು ಬೆದರಿಸಿ ಪರಾರಿಯಾಗಲು ದುಬೆ ಯತ್ನಿಸಿದಾಗ ಆತನನ್ನು ಎನ್ಕೌಂಟರ್ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

English summary
Samajwadi Party Leader Akhilesh Yadav Questions Vikas Dubey's Encounter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X