ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೌಡಿ ವಿಕಾಸ್ ದುಬೆ ಪೊಲೀಸರ ಆಯುಧಗಳನ್ನೇ ಬಳಸಿ ಹತ್ಯೆ ಮಾಡಿದ್ದ

|
Google Oneindia Kannada News

ಲಕ್ನೋ, ಜುಲೈ 6: ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ಶೀಟರ್ ವಿಕಾಸ್ ದುಬೆ ಪೊಲೀಸರ ಆಯುಧಗಳನ್ನೇ ಬಳಸಿ ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

Recommended Video

Huawei out of UK ಭಾರತದ ನಂತರ ಚೀನಾಗೆ ದೊಡ್ಡ ಶಾಕ್ ಕೊಟ್ಟ ಬ್ರಿಟನ್ | Oneindia Kannada

54 ವರ್ಷದ ಪೊಲೀಸ್ ಅಧಿಕಾರಿಯೊಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಐದು ಬಾರಿ ಗುಂಡು ಹಾರಿಸಲಾಗಿದೆ. ಹಣೆ, ಎದೆ, ಹೊಟ್ಟೆ ಹಾಗೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಹಾಗೆಯೇ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಹತ್ಯೆ ಮಾಡಿದ ಬಳಿಕ ಹಿಂಸೆ ನೀಡಿದ್ದಾರೋ ಅಥವಾ ಹಿಂಸೆ ನೀಡಿ ಬಳಿಕ ಹತ್ಯೆ ಮಾಡಿದ್ದಾರೋ ಎಂದು ತಿಳಿದುಬಂದಿಲ್ಲ.

ನನ್ನ ಮಗ ಪೊಲೀಸರಿಗೆ ಶರಣಾಗದಿದ್ದರೆ ಕೊಂದು ಬಿಡಿ: ವಿಕಾಸ್ ದುಬೆ ತಾಯಿನನ್ನ ಮಗ ಪೊಲೀಸರಿಗೆ ಶರಣಾಗದಿದ್ದರೆ ಕೊಂದು ಬಿಡಿ: ವಿಕಾಸ್ ದುಬೆ ತಾಯಿ

ವಿಕಾಸ್ ದುಬೆ ಮತ್ತು ಆತನ ಸಹಚರರನ್ನು ಹಿಡಿಯಲು 50 ಮಂದಿ ಪೊಲೀಸ್ ತಂಡ ತೆರಳಿತ್ತು. ಪೊಲೀಸರನ್ನು ಅವರ ಆಯುಧದ ಮೂಲಕವೇ ಹತ್ಯೆ ಮಾಡಲಾಗಿದೆ. 2 9ಎಂಎಂ ಪಿಸ್ತೂಲ್, ಎಕೆ-47, ಇನ್ಸಾಸ್ ರೈಫಲ್ ಸೇರಿದಂತೆ ಹಲವು ಆಯುಧಗಳನ್ನು ಪೊಲೀಸರಿಂದ ಕಿತ್ತುಕೊಂಡಿದ್ದರು.

ಮೂರು ದಿನಗಳಿಂದ ಶೋಧ

ಮೂರು ದಿನಗಳಿಂದ ಶೋಧ

ಎಂಟು ಪೊಲೀಸರ ಹತ್ಯೆ ನಡೆಸಿ ತಲೆ ಮರೆಸಿಕೊಂಡಿರುವ ಮೋಸ್ಟ್​ ವಾಂಟೆಡ್​ ಕ್ರಿಮಿನಲ್​ ವಿಕಾಸ್​ ದುಬೆಗಾಗಿ ಕಳೆದ ಮೂರು ದಿನಗಳಿಂದ ಶೋಧ ನಡೆಯುತ್ತಲೇ ಇದೆ.

ಬಂಧಿತನಾಗಿರುವ ಆತನ ಸಹಚರ ನೀಡಿರುವ ಮಾಹಿತಿ ಮೇರೆಗೆ ಪೊಲೀಸರಿಂದಲೇ ಆತನಿಗೆ ದಾಳಿಯ ವಿಷಯ ಮುಟ್ಟಿತ್ತು. ಹೀಗಾಗಿ ಪೊಲೀಸರು ಮನೆಗೆ ಬರುವ ಮುನ್ನವೇ ಪ್ರತಿದಾಳಿ ನಡೆಸಲು ಆತ ಸಿದ್ಧತೆ ಮಾಡಿಕೊಂಡಿದ್ದ.

ಮನೆ ಮದ್ದುಗುಂಡುಗಳ ಕಾರ್ಖಾನೆ

ಮನೆ ಮದ್ದುಗುಂಡುಗಳ ಕಾರ್ಖಾನೆ

ಇಷ್ಟಕ್ಕೂ ಆತನಿದ್ದದ್ದು ಬರೀ ಮನೆಯಾಗಿರಲಿಲ್ಲ. ಅದೊಂದು ಮದ್ದುಗುಂಡುಗಳ ಮಿನಿ ಕಾರ್ಖಾನೆಯಾಗಿತ್ತು ಎಂದೇ ಪೊಲೀಸರು ಹೇಳಿದ್ದಾರೆ. ಆತನ ಮನೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಕೆಜಿ ಸ್ಫೋಟಕಗಳು, ಆರು ನಾಡ ಪಿಸ್ತೂಲ್​ಗಳು, 25 ಕಾಟ್ರಿಡ್ಜ್​ಗಳು ದೊರೆತಿವೆ.

60 ಪ್ರಕರಣಗಳಿವೆ

60 ಪ್ರಕರಣಗಳಿವೆ

ಉತ್ತರಪ್ರದೇಶವೊಂದರಲ್ಲಿಯೇ ವಿಕಾಸ್​ ದುಬೆ ವಿರುದ್ಧ 60 ಪ್ರಕರಣಗಳಿವೆ. ಆತ ರಾಜ್ಯದಿಂದ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ. ಈತನ ಜತೆ ಗುರುತಿಸಿಕೊಂಡಿದ್ದ 21 ಜನರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?

ಮನೆಯಲ್ಲೇ ಬಾಂಬ್​ ತಯಾರಿಕೆ:

ಮನೆಯಲ್ಲೇ ಬಾಂಬ್​ ತಯಾರಿಕೆ:

ವಿಕಾಸ್​ ದುಬೆ ಮನೆಯಲ್ಲೇ ಬಾಂಬ್​ ತಯಾರಿಸುತ್ತಿದ್ದ. ಇದಕ್ಕಾಗಿ ಸ್ಫೋಟಕಗಳೊಂದಿಗೆ ಭಾರಿ ಪ್ರಮಾಣದಲ್ಲಿ ಕಬ್ಬಿಣದ ಮೊಳೆಗಳನ್ನು ಸಂಗ್ರಹಿಸಿಟ್ಟಿದ್ದ.

ಇಡೀ ಪ್ರದೇಶವನ್ನೇ ಬಾಂಬ್​ನಿಂದ ಉಡಾಯಿಸುವುದು ಆತನ ಉದ್ದೇಶವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈತ ಹಾಗೂ ಸಹಚರರು ಪೊಲೀಸರ ಮೇಲೆ ಎಕೆ-47 ನಂಥ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

English summary
Kanpur's senior police officer Devendra Mishra, who not only filed the attempt to murder case against arch-criminal Vikas Dubey but also led the police team to arrest the man, was killed with savagery unparalleled in similar incidents in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X