ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಪೊಲೀಸರನ್ನು ಹತ್ಯೆಗೈದ ರೌಡಿ ಶೀಟರ್ ವಿಕಾಸ್ ದುಬೆ ಮನೆ ನೆಲಸಮ

|
Google Oneindia Kannada News

ಲಕ್ನೋ, ಜುಲೈ 4: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ಶೀಟರ್ ವಿಕಾಸ್ ದುಬೆಯ ಮನೆಯನ್ನು ಕಾನ್ಪುರ ಜಿಲ್ಲಾಡಳಿತ ಶನಿವಾರ ನೆಲಸಮ ಮಾಡಿದೆ.

Recommended Video

Corona Updates : ಒಂದೇ ದಿನದಲ್ಲಿ 22 ಸಾವಿರಕ್ಕೂ ಅಧಿಕ ಪ್ರಕರಣ | Oneindia Kannada

ಬಂಧಿಸಲು ಹೋದ ಸಂದರ್ಭದಲ್ಲಿ 8 ಪೊಲೀಸರ ಮೇಲೆ ಗುಂಡು ಹಾರಿಸಿ ಹತ್ಯೆಗೈದು ತಪ್ಪಿಸಿಕೊಂಡಿದ್ದ ರೌಡಿ ಶೀಟರ್ ವಿಕಾಸ್ ದುಬೆಯ ಬಂಗಲೆಯನ್ನು ಕೆಡವಲಾಗಿದೆ.

ನನ್ನ ಮಗ ಪೊಲೀಸರಿಗೆ ಶರಣಾಗದಿದ್ದರೆ ಕೊಂದು ಬಿಡಿ: ವಿಕಾಸ್ ದುಬೆ ತಾಯಿನನ್ನ ಮಗ ಪೊಲೀಸರಿಗೆ ಶರಣಾಗದಿದ್ದರೆ ಕೊಂದು ಬಿಡಿ: ವಿಕಾಸ್ ದುಬೆ ತಾಯಿ

ಚೌಬೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ರು ಪ್ರದೇಶದಲ್ಲಿ ರೌಡಿ ಶೀಟರ್ ವಿಕಾಸ್ ಹಾಗೂ ಆತನ ಸಹಚರರು ಅಡಗಿರುವ ಮಾಹಿತಿ ಪಡೆದು ಪೊಲೀಸರು ಬಂಧನಕ್ಕೆಂದು ತೆರಳಿದ್ದರು. ಓರ್ವ ಡಿವೈಎಸ್‌ಪಿ ಸೇರಿ 8 ಮಂದಿ ಪೊಲೀಸರಿಗೆ ಗುಂಡು ಹಾರಿಸಿದ್ದ.

Rowdy Sheeter Vikas Dube House Demolished By District Administration

ರೌಡಿ ವಿಕಾಸ್ ದುಬೆ ವಿರುದ್ಧ ಬೆದರಿಕೆ, ಅಪಹರಣ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು.

2000ದಲ್ಲಿ ನಡೆದ ರಾಮ್ ಬಾಬು ಯಾದವ್ ಹತ್ಯೆ ಪ್ರಕರಣ, 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲಿಯೂ ವಿಕಾಸ್ ದುಬೆ ಹೆಸರು ಕೇಳಿ ಬಂದಿದೆ. ಈ ಹತ್ಯೆಗಳು ನಡೆಯವಾಗ ಜೈಲಿನಲ್ಲಿದ್ದ ವಿಕಾಸ್ ದುಬೆ ಅಲ್ಲಿಂದಲೇ ಸಹಚರರ ಮೂಲಕ ಸಂಚು ರೂಪಿಸಿದ್ದ.

ಎನ್‌ಕೌಂಟರ್‌ ನಡೆದ ಸಮಯದಿಂದ ಆತ ತಲೆಮರಸಿಕೊಂಡಿದ್ದಾನೆ. ಆತನನ್ನು ಬಂಧಿಸಲು ಪೊಲೀಸರು ತಂಡ ತಂಡವಾಗಿ ಸಿದ್ಧರಿದ್ದಾರೆ. ಇದೀಗ ಆತನ ಮನೆಯನ್ನು ಜಿಲ್ಲಾಡಳಿತ ನೆಲಸಮ ಮಾಡಿದೆ.

English summary
he Kanpur district administration on Saturday razed the bungalow of gangster Vikas Dubey accused of the killing of eight policemen including a DSP during an encounter on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X