ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಆಹಾರ: ಪ್ರಿಯಾಂಕಾ ಗಾಂಧಿ ಆಕ್ರೋಶ

|
Google Oneindia Kannada News

ಮಿರ್ಜಾಪುರ, ಆಗಸ್ಟ್ 23: ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಳಪೆ ಆಹಾರ ಪೂರೈಸುತ್ತಿರುವ ಸರ್ಕಾರವನ್ನು ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಆಡಳಿತದ ಉತ್ತರ ಪ್ರದೇಶದ ಮಿರ್ಜಾಪುರದ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಚಪಾತಿ ಮತ್ತು ಉಪ್ಪು ನೀಡಲಾಗುತ್ತಿದೆ. ಈ ವಿಡಿಯೋ ವೈರಲ್ ಆಗಿದ್ದು, ಪ್ರಿಯಾಂಕಾ ಗಾಂಧಿ ಸಹ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದು, 'ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ' ಎಂದಿದ್ದಾರೆ.

ಮೆಡಿಕಲ್ ಕಾಲೇಜ್‌ನಲ್ಲಿ Ragging: ತಲೆಬೋಳಿಸಿಕೊಂಡು ಸೆಲ್ಯೂಟ್ ಹೊಡೆದ ವಿದ್ಯಾರ್ಥಿಗಳುಮೆಡಿಕಲ್ ಕಾಲೇಜ್‌ನಲ್ಲಿ Ragging: ತಲೆಬೋಳಿಸಿಕೊಂಡು ಸೆಲ್ಯೂಟ್ ಹೊಡೆದ ವಿದ್ಯಾರ್ಥಿಗಳು

ಪ್ರಿಯಾಂಕಾ ಗಾಂಧಿ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಶಿಕ್ಷಣ ಇಲಾಖೆ ಕಳಪೆ ಆಹಾರ ಪೂರೈಸಿದ ಶಾಲೆಯ ಶಿಕ್ಷಕ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಯನ್ನು ಅಮಾನತ್ತು ಮಾಡಿದೆ. ಈ ಘಟನೆಯ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದೆ.

Roti-Salt Meal To School children Priyanka Gandhi Slams UP Government

ಮಧ್ಯಾಹ್ನ ಊಟದ ಉಸ್ತುವಾರಿ ನೋಡಿಕೊಳ್ಳುವ ಮಂಡಳಿಯೊಂದು ಶಿಕ್ಷಣ ಇಲಾಖೆಯಲ್ಲಿದ್ದು, ಅನ್ನ, ರೊಟ್ಟಿ, ತರಕಾರಿ ಪಲ್ಯ, ಹಣ್ಣು, ಹಾಲುಗಳನ್ನು ವಾರದ ಪ್ರತ್ಯೇಕ ದಿನಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟವಾಗಿ ನೀಡಬೇಕಾಗಿರುವುದು ನಿಯಮ. ಆದರೆ ಆ ಶಾಲೆಯಲ್ಲಿ ಕೇವಲ ರೊಟ್ಟಿ ಮತ್ತು ಉಪ್ಪು ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಮೋದಿ ಜೊತೆ ಉನ್ನಾವೊ ಅತ್ಯಾಚಾರ ಆರೋಪಿ ಶಾಸಕನ ಜಾಹಿರಾತುಮೋದಿ ಜೊತೆ ಉನ್ನಾವೊ ಅತ್ಯಾಚಾರ ಆರೋಪಿ ಶಾಸಕನ ಜಾಹಿರಾತು

ಉತ್ತರ ಪ್ರದೇಶ ಸರ್ಕಾರ ಹೇಳುವಂತೆ 1.5 ಲಕ್ಷ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನದ ಆಹಾರ ನೀಡಲಾಗುತ್ತಿದೆ. 2018 ರ ವೇಳೆಗೆ ಒಂದು ಕೋಟಿ ವಿದ್ಯಾರ್ಥಿಗಳು ಈ ಯೋಜನೆಯಿಂದ ಲಾಭ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.

ಬಕ್ರೀದ್ ವಿಶೇಷ: ಈ ಬಾರಿ ಸಲ್ಮಾನ್ ಖಾನ್ ಹೆಸರಿನ ಮೇಕೆಗೆ ಬೇಡಿಕೆ ಬಕ್ರೀದ್ ವಿಶೇಷ: ಈ ಬಾರಿ ಸಲ್ಮಾನ್ ಖಾನ್ ಹೆಸರಿನ ಮೇಕೆಗೆ ಬೇಡಿಕೆ

ಕೇಂದ್ರ ರಚಿಸಿರುವ ನಿಯಮದಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿದಿನ 450 ಕ್ಯಾಲರಿಯುಕ್ತ ಸ್ವಸ್ಥ ಆಹಾರ ನೀಡಬೇಕು. ಪ್ರತಿ ದಿನ 12 ಗ್ರಾಂ ಪ್ರೋಟೀನು ಇರಬೇಕು. ಈ ರೀತಿಯ ಪ್ರೋಟೀನ್‌ಯುಕ್ತ ಆಹಾರವನ್ನು ವರ್ಷಕ್ಕೆ ಕನಿಷ್ಟ 200 ದಿನವಾದರೂ ನೀಡಲೇಬೇಕು.

English summary
Roti-salt served to government school children in Uttar Pradesh's Mirzapur. Priyanka Gandhi slams government for this negligence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X