ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಥಿಯಲ್ಲಿ ಕಳ್ಳರನ್ನು ತಡೆಯಲು ಯತ್ನಿಸಿದ ನಿವೃತ್ತ ಯೋಧ ಹತ್ಯೆ

|
Google Oneindia Kannada News

ಲಕ್ನೋ, ಜುಲೈ 29: ಉತ್ತರಪ್ರದೇಶಾ ಅಮೇಥಿ ಜಿಲ್ಲೆಯ ಹೆಚ್ಚುತ್ತಿರುವ ಕ್ರೈಂಗಳ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಕಾ ಗಾಂಧಿ ವಾದ್ರಾ ಇತ್ತೀಚಿಗೆ ಎಚ್ಚರಿಸಿದ್ದರು. ನಿವೃತ್ತ ಯೋಧರನ್ನು ಅಪರಿಚಿತರ ಗುಂಪೊಂದು ಬಡಿದು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಕಮ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊದಿಯಾನ್ ಕಾ ಪೂರ್ವ ಗ್ರಾಮದ ನಿವಾಸಿ 64ವರ್ಷ ವಯಸ್ಸಿನ ನಿವೃತ್ತ ಕ್ಯಾಪ್ಟನ್ ಅಮಾನುಲ್ಲಾ ಅವರು ಮೃತ ದುರ್ದೈವಿ. ಶನಿವಾರ ತಡರಾತ್ರಿ ಕ್ಯಾಪ್ಟನ್ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಹಾಕಿ ಸ್ಟಿಕ್ ಗಳಿಂದ ಹೊಡೆದಿದ್ದಾರೆ ಎಂದು ಅಮಾನುಲ್ಲಾ ಅವರ ಪುತ್ರ ಹೇಳಿದ್ದಾರೆ.

ಕುಡಿದ ಅಮಲಿನಲ್ಲಿ ಸೋದರನ ಮಗನ ಕೊಲೆ ಮಾಡಿದ ನಿವೃತ್ತ ಸೈನಿಕ ಕುಡಿದ ಅಮಲಿನಲ್ಲಿ ಸೋದರನ ಮಗನ ಕೊಲೆ ಮಾಡಿದ ನಿವೃತ್ತ ಸೈನಿಕ

"ಮನೆಗೆ ಹೊಂದಿಕೊಂಡಂತೆ ಇರುವ ಅಂಗಡಿಯನ್ನು ದೋಚಲು ಈ ದುಷ್ಕರ್ಮಿಗಳ ತಂಡ ಬಂದಿತ್ತು. ನಾನು ನನ್ನ ಪತಿ ಇದನ್ನು ಪ್ರಶ್ನಿಸಿದೆವು, ಪೊಲೀಸರಿಗೆ ವಿಷಯ ತಿಳಿಸಲು ಮುಂದಾದೆವು, ತಕ್ಷಣ ಮನೆಗೆ ನುಗ್ಗಿ ಏಕಾಏಕಿ ದಾಳಿ ನಡೆಸಿದರು" ಎಂದು ಅಮಾನುಲ್ಲಾ ಅವರ ಪತ್ನಿ ದೂರಿನಲ್ಲಿ ಹೇಳಿದ್ದಾರೆ ಎಂದು ಎ ಎಸ್ ಪಿ ದಯಾರಾಮ್ ತಿಳಿಸಿದರು.

Retired army officer killed for resisting robbery in Amethi

"ಹಲ್ಲೆ ವೇಳೆ ಅಮಾನುಲ್ಲಾ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವ ಯತ್ನ ವಿಫಲವಾಗಿದೆ. ಮರಣೋತ್ತರ ಪರೀಕ್ಷೆ ನಂತರ ಘಟನೆ ಬಗ್ಗೆ ಇನ್ನಷ್ಟು ವಿವರಗಳು ತಿಳಿದು ಬರಲಿದೆ, ತನಿಖೆ ಮುಂದುವರೆದಿದೆ' ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಬಗ್ಗೆ ಪ್ರಿಯಾಂಕಾ ಪ್ರತಿಕ್ರಿಯೆ:
"ನನ್ನ ಸ್ವಕ್ಷೇತ್ರ ಅಮೇಥಿಯಲ್ಲಿ ಇಂಥ ದುರ್ಘಟನೆ ನಡೆದಿರುವುದು ಖೇದಕರ. ಉತ್ತರಪ್ರದೇಶದಲ್ಲಿ ಕಾನೂನು -ಸುವ್ಯವಸ್ಥೆ ಹದಗೆಟ್ಟಿದೆ, ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದಾರೆ, ಮತ್ತೆ ಮತ್ತೆ ಮರುಕಳಿಸುತ್ತದೆ" ಎಂದು ಟ್ವೀಟ್ ಮಾಡಿದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯವಿರುವ ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಾಹುಲ್ ಗಾಂಧಿರನ್ನು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
A 64-year-old retired Army captain was beaten to death by unidentified men in Uttar Pradesh's Amethi district, police said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X