ಹರಿದ್ವಾರ ದ್ವೇಷದ ಭಾಷಣವಲ್ಲ, ಸ್ತ್ರೀದ್ವೇಷಕ್ಕಾಗಿ ಯತಿ ನರಸಿಂಹಾನಂದ ಬಂಧನ: ಪೊಲೀಸರು
ನವದೆಹಲಿ, ಜನವರಿ 16: ಕಳೆದ ತಿಂಗಳು ಹರಿದ್ವಾರದಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದ ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ ಅವರನ್ನು ಮಹಿಳೆಯರ ಮೇಲೆ ಆಕ್ಷೇಪಾರ್ಹ ಹೇಳಿಕೆಗಾಗಿ ಬಂಧಿಸಲಾಗಿದೆಯೇ ಹೊರತು ಧರ್ಮ ಸಂಸದ್ ಅಥವಾ ಧಾರ್ಮಿಕ ಸಭೆಯಲ್ಲಿ ದ್ವೇಷ ಭಾಷಣ ಮಾಡಿದ್ದಕ್ಕಾಗಿ ಅಲ್ಲ ಎಂದು ಪೊಲೀಸರು ಎನ್ಡಿಟಿವಿಗೆ ತಿಳಿಸಿದ್ದಾರೆ. "ಯತಿ ನರಸಿಂಹಾನಂದ್ ಅವರನ್ನು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಬಂಧಿಸಲಾಗಿದೆ. ದ್ವೇಷ ಭಾಷಣ ಪ್ರಕರಣದಲ್ಲಿ ಧಾರ್ಮಿಕ ಮುಖಂಡನಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಆ ಪ್ರಕರಣದಲ್ಲೂ ಆತನನ್ನು ರಿಮಾಂಡ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಯತಿ ನರಸಿಂಹಾನಂದ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
"ಯತಿ ನರಸಿಂಹಾನಂದ್ ಅವರನ್ನು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿಗಾಗಿ ಬಂಧಿಸಲಾಗಿದೆ. ಇದು ಹರಿದ್ವಾರದ ದ್ವೇಷ ಭಾಷಣ ಪ್ರಕರಣವಲ್ಲ. ಅವರಿಗೆ ಇಲ್ಲಿಯವರೆಗೆ ಆ ಪ್ರಕರಣದಲ್ಲಿ ನೋಟಿಸ್ ನೀಡಲಾಗಿದೆ. ದ್ವೇಷ ಭಾಷಣ ಪ್ರಕರಣಕ್ಕೂ ಅವರನ್ನು ರಿಮಾಂಡ್ ಮಾಡಲಾಗುವುದು. ಪ್ರಕ್ರಿಯೆಯು ನಡೆಯುತ್ತಿದೆ. ರಿಮಾಂಡ್ ಅರ್ಜಿ ದ್ವೇಷ ಭಾಷಣದ ಪ್ರಕರಣದ ವಿವರಗಳನ್ನು ಸಹ ಒಳಗೊಂಡಿರುತ್ತದೆ" ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಹರಿದ್ವಾರ ದ್ವೇಷದ ಭಾಷಣ: ಧಾರ್ಮಿಕ ಮುಖಂಡ ಯತಿ ನರಸಿಂಹಾನಂದ್ ಬಂಧನ
ಮೂಲಗಳ ಪ್ರಕಾರ, ನರಸಿಂಹಾನಂದ್ ವಿರುದ್ಧದ ಪ್ರಸ್ತುತ ಪ್ರಕರಣ ಸ್ತ್ರೀದ್ವೇಷಕ್ಕೆ ಸಂಬಂಧಿಸಿದೆ. ಅವರ ಬಂಧನ ಇತರ ಧರ್ಮಗಳ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಹೇಳಿಕೆಗಳಿಗಾಗಿ ಈ ತಿಂಗಳ ಆರಂಭದಲ್ಲಿ ಸಲ್ಲಿಸಲಾದ ದೂರನ್ನು ಆಧರಿಸಿದೆ. ಮಹಿಳೆಯರನ್ನು ಅವಮಾನಿಸುವ ಆರೋಪದ ಜೊತೆಗೆ ದ್ವೇಷ ಭಾಷಣದ ಆರೋಪಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅವರ ಬಂಧನ ಹರಿದ್ವಾರದಲ್ಲಿ ನಡೆದ ಧರಮ್ ಸಂಸದ್ನಲ್ಲಿ ನಡೆದ ದ್ವೇಷದ ಭಾಷಣಗಳಿಗೆ ಸಂಬಂಧಿಸಿಲ್ಲ. ಬದಲಿಗೆ ಮಹಿಳೆಯರನ್ನು ಅವಮಾನಿಸುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ.
ತ್ಯಾಗಿ ಬಂಧನದ ವೇಳೆ ಕೇಸರಿ ವಸ್ತ್ರಧಾರಿ ನರಸಿಂಹಾನಂದ್ ಅವರು ಪೋಲೀಸ್ ಅಧಿಕಾರಿಗಳಿಗೆ "ನೀವೆಲ್ಲರೂ ಸಾಯುತ್ತೀರಿ" ಎಂದು ಶಾಪ ಹಾಕಿದ್ದು ಕಂಡುಬಂದಿತ್ತು.

ನಾನು ಪೊಲೀಸರಿಗೆ ಹೆದರುವುದಿಲ್ಲ
"ನಾನು ಹೇಳಿದ್ದಕ್ಕೆ ನಾನು ನಾಚಿಕೆಪಡುವುದಿಲ್ಲ, ನಾನು ಪೊಲೀಸರಿಗೆ ಹೆದರುವುದಿಲ್ಲ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ" ಎಂದು ಪ್ರಬೋಧಾನಂದ ಗಿರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮತ್ತಷ್ಟು ಆಕ್ರೋಶಕ್ಕೆ ಗುರಿಯಾಗಿತ್ತು. ಪ್ರಬೋಧಾನಂದ ಗಿರಿ ಡಿಸೆಂಬರ್ 23 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉತ್ತರಾಖಂಡದ ಅವರ ಸಹವರ್ತಿ ಪುಷ್ಕರ್ ಧಾಮಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಆಗಾಗ್ಗೆ ಫೋಟೋಗಳಲ್ಲಿ ಕಾಣಿಸಿಕೊಂಡಿರುವುದನ್ನು ಎನ್ಡಿಟಿವಿ ವರದಿ ಮಾಡಿದೆ.
ಇನ್ನೂ ಮುಸ್ಲಿಂ ಸಮುದಾಯ ವಿರುದ್ಧ ದ್ವೇಷದ ಭಾಷಣ ಮಾಡಿ ಮಾರಣಹೋಮಕ್ಕೆ ಪ್ರಚೋದನೆ ನೀಡುವ ಧರ್ಮ ಸಂಸದ್ನಂತ ಕಾರ್ಯಕ್ರಮಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ವಿದ್ವಾಂಸರ ಒಕ್ಕೂಟ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಜಮೀಯತ್- ಉಲ್- ಉಲಾಮಾ - ಹಿಂದ್ ಎನ್ನುವ ಮುಸ್ಲಿಂ ನಾಯಕರ ಸಂಘಟನೆ ಈ ಬಗ್ಗೆ ಸೋಮವಾರ ಸರ್ವೋಚ್ಚ ನ್ಯಾಯಾಯಲಕ್ಕೆ ಅರ್ಜಿ ಸಲ್ಲಿಸಿದ್ದು, ಇಂಥ ಕಾರ್ಯಕ್ರಮಗಳನ್ನು ನಿಷೇಧಿಸಬೇಕು. ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನು ರಿತ್ಯಾ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.