ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತಮ ಸಂಸ್ಕಾರದಿಂದ ಮಾತ್ರ ಅತ್ಯಾಚಾರ ತಡೆ ಸಾಧ್ಯ: ಬಿಜೆಪಿ ಶಾಸಕ

|
Google Oneindia Kannada News

ಲಕ್ನೋ, ಅ. 4: 'ಅತ್ಯಾಚಾರ ಘಟನೆಗಳನ್ನು ತಡೆಯಲು ಶ್ರೀರಾಮನಿಗೂ ಸಾಧ್ಯವಿಲ್ಲ' ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಬಲಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್​ ಮತ್ತೊಮ್ಮೆ ಅತ್ಯಾಚಾರ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ. ಹತ್ರಾಸ್ ಜಿಲ್ಲೆಯಲ್ಲಿ 19ರ ಹರೆಯದ ಯುವತಿ ಮೇಲೆ ನಡೆದ ಅತ್ಯಚಾರ ಹಾಗೂ ಹತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶವೇ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವಾಗ ಬಿಜೆಪಿ ಶಾಸಕ ಸುರೇಂದ್ರ ಅವರು ಯುವತಿ ಕುಟುಂಬದ ಸಂಸ್ಕಾರದ ಬಗ್ಗೆ ಮಾತನಾಡಿದ್ದಾರೆ.

ಬಲಿಯಾ ಕ್ಷೇತ್ರದ ಶಾಸಕ ಸುರೇಂದ್ರ ಸಿಂಗ್​ ಶನಿವಾರದಂದು ಸುದ್ದಿಗೋಷ್ಠಿ ನಡೆಸಿ, ''ನಾನು ಶಾಸಕನಾಗಿರುವುದರ ಜತೆಗೆ ಓರ್ವ ಶಿಕ್ಷಕನು ಹೌದು. ಉತ್ತಮ ಆಡಳಿತವಾಗಲಿ ಅಥವಾ ತಲ್ವಾರ್​ನಿಂದಾಗಲಿ ಅತ್ಯಾಚಾರ​ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಬದಲಾಗಿ ಉತ್ತಮ ಸಂಸ್ಕಾರದಿಂದ ಮಾತ್ರ ಇಂಥ ಪ್ರಕರಣಗಳನ್ನು ನಿಲ್ಲಿಸಬಹುದು. ಎಲ್ಲ ತಂದೆ-ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ಕಲಿಸಿ ಉತ್ತಮ ಮೌಲ್ಯಗಳನ್ನು ಬೆಳೆಸಿ'' ಎಂದು ಹೇಳಿದರು.

ಹತ್ರಾಸ್ ಅತ್ಯಾಚಾರ ಪ್ರಕರಣ ಸಿಬಿಐ ತನಿಖೆಗೆ ವಹಿಸಿದ ಸಿಎಂ ಯೋಗಿಹತ್ರಾಸ್ ಅತ್ಯಾಚಾರ ಪ್ರಕರಣ ಸಿಬಿಐ ತನಿಖೆಗೆ ವಹಿಸಿದ ಸಿಎಂ ಯೋಗಿ

''ಇದು ನನ್ನ ಧರ್ಮವೂ ಹೌದು, ಸರ್ಕಾರದ ಕರ್ತವ್ಯವೂ ಸರಿಯೇ, ಹಾಗೆಯೇ ಕುಟುಂಬದ ಧರ್ಮವೂ ಇದೆ. ರಕ್ಷಣೆಗೆ ಸರ್ಕಾರ ಬದ್ಧವಾಗಿರುವಾಗ ಕುಟುಂಬವೂ ಸಹ ತಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ತಿಳಿಸಲು ಬದ್ಧವಾಗಿರಬೇಕು. ಸಂಸ್ಕಾರ ಮತ್ತು ಸರ್ಕಾರ ಭವ್ಯ ಭಾರತವನ್ನು ನಿರ್ಮಿಸಬಹುದೇ ಹೊರತು ಇದಕ್ಕೆ ಯಾವುದೇ ಆಯ್ಕೆ ಇಲ್ಲ'' ಎಂದು ಹೇಳಿದರು.

ವಿವಾದಾತ್ಮಕ ಹೇಳಿಕೆಗಳ ಮೂಲಕ ಜನಪ್ರಿಯ

ವಿವಾದಾತ್ಮಕ ಹೇಳಿಕೆಗಳ ಮೂಲಕ ಜನಪ್ರಿಯ

ಶಾಸಕ ಸುರೇಂದ್ರ ಸಿಂಗ್​ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಜನಪ್ರಿಯತೆ ಗಳಿಸಿದವರು. ''ಗಾಂಧೀಜಿ ಕೊಂದ ನಾಥೂರಾಮ್​ ಗೂಡ್ಸೆ ಉಗ್ರನಲ್ಲ ಎಂದು ವಿವಾದ ಸೃಷ್ಟಿಸಿದ್ದರು. ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, "ಲಂಕೆಗೆ ತೆರಳಿದ್ದ ಹನುಮಂತನ ಹಾದಿಗೆ ಮುಳುವಾಗಲು ಪ್ರಯತ್ನಿಸಿದ ರಾಕ್ಷಸರಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಾದಿಗೆ ಮಮತಾ ಬ್ಯಾನರ್ಜಿ ಮುಳುವಾಗುತ್ತಿದ್ದಾರೆ" ಎಂದು ಸುರೇಂದ್ರ ಸಿಂಗ್ ಹೇಳಿದ್ದರು

"ಈ ದೇಶವು ಯೋಗಿ ಆದಿತ್ಯನಾಥ್ ರೂಪದಲ್ಲಿ ಹನುಮಂತನನ್ನು ಹೊಂದಿದೆ. ಆತನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಈಗ ರಾಕ್ಷಸಿಯನ್ನು ಸೋಲಿಸಲಾಗಿದ್ದು, ವಿಭೀಷಣನ ಯುಗ ಆರಂಭವಾಗಲಿದೆ" ಎಂದು ಸಿಂಗ್ ಹೇಳಿದ್ದರು.

ಮುಸ್ಲಿಂ ಮತ ಬ್ಯಾಂಕ್ ಬಗ್ಗೆ ಆಕ್ಷೇಪ

ಮುಸ್ಲಿಂ ಮತ ಬ್ಯಾಂಕ್ ಬಗ್ಗೆ ಆಕ್ಷೇಪ

"ಮುಸ್ಲಿಂ ಮತದಲ್ಲಿ ಜನರು 50 ಪತ್ನಿಯರನ್ನು ಮದುವೆಯಗುತ್ತಾರೆ, 1050 ಮಕ್ಕಳನ್ನು ಮಾಡಿಕೊಳ್ಳುತ್ತಾರೆ.. ಇದೊಂಥರ ಮೃಗೀಯ ಸ್ವಭಾವ"

ಹತ್ರಾಸ್ ಸಂತ್ರಸ್ತೆ ಸಂಬಂಧಿಕರನ್ನು ಮನೆಯಲ್ಲೇ ಕೂಡಿಟ್ಟರಾ ಪೊಲೀಸರು?ಹತ್ರಾಸ್ ಸಂತ್ರಸ್ತೆ ಸಂಬಂಧಿಕರನ್ನು ಮನೆಯಲ್ಲೇ ಕೂಡಿಟ್ಟರಾ ಪೊಲೀಸರು?

ಸಮಾಜದಲ್ಲಿ ಇಬ್ಬರು ಅಥವಾ ನಾಲ್ವರು ಮಕ್ಕಳಿಗೆ ಜನ್ಮ ನೀಡುವುದು ಸಹಜ. ಆದರೆ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆರುವುದು ಅಂದರೆ 50 ಪತ್ನಿಯರನ್ನು ಹೊಂದುವುದು, 1050 ಮಕ್ಕಳಿಗೆ ಜನ್ಮ ನೀದುವುದು ಎಂದರೆ ಅದು ಮೃಗೀಯ ವರ್ತನೆ, ಅದನ್ನು ಮನುಷ್ಯ ಸ್ವಭಾವ ಎನ್ನುವುದಕ್ಕೆ ಬರುವುದಿಲ್ಲ ಎಂದು ಅವರು ಹೇಳಿದ್ದರು.

ಅತ್ಯಾಚಾರದ ಬಗ್ಗೆ 2 ವರ್ಷ ಹಿಂದೆ ನೀಡಿದ್ದ ಹೇಳಿಕೆ

ಅತ್ಯಾಚಾರದ ಬಗ್ಗೆ 2 ವರ್ಷ ಹಿಂದೆ ನೀಡಿದ್ದ ಹೇಳಿಕೆ

'ನಾನು ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳುತ್ತೇನೆ, ಇಂತಹ ಘಟನೆಗಳನ್ನು ಖುದ್ದು ಶ್ರೀರಾಮನಿಗೂ ತಡೆಯಲು ಸಾಧ್ಯವಿಲ್ಲ. ಇದು ನೈಸರ್ಗಿಕ ಮಾಲಿನ್ಯದಂತೆ. ಯಾರನ್ನೂ ಸ್ಪರ್ಶಿಸದೆ ಬಿಟ್ಟಿಲ್ಲ.

ಬೇರೆಯವರನ್ನು ತಮ್ಮ ಕುಟುಂಬದಂತೆ, ಸಹೋದರಿಯರಂತೆ ನೋಡುವುದು ಜನರ ಜವಾಬ್ದಾರಿ. ನಾವು ಇದನ್ನು ಮೌಲ್ಯಗಳ ಮೂಲಕ ನಿಯಂತ್ರಿಸಲು ಸಾಧ್ಯವೇ ಹೊರತು ಸಂವಿಧಾನದ ಮೂಲಕವಲ್ಲ' ಎಂದು ಅವರು ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು.

ಉನ್ನಾವೋ ಪ್ರಕರಣದಲ್ಲಿ ಸೆಂಗರ್ ಪರ ನಿಂತಿದ್ದರು

ಉನ್ನಾವೋ ಪ್ರಕರಣದಲ್ಲಿ ಸೆಂಗರ್ ಪರ ನಿಂತಿದ್ದರು

ನಾನು ಸೈಕಾಲಜಿಯ ದೃಷ್ಟಿಕೋನದಿಂದ ಈ ಮಾತು ಹೇಳಿದ್ದೇನೆ. ಯಾರೂ ಮೂರು ಮಕ್ಕಳ ತಾಯಿಯನ್ನು ಅತ್ಯಾಚಾರ ಮಾಡಲಾರರು. ಅದು ಸಾಧ್ಯವಿಲ್ಲ. ಇದು ಕುಲದೀಪ್ ಸಿಂಗ್ ವಿರುದ್ಧ ಮಾಡಿರುವ ಸಂಚು.

ಸರ್ಕಾರಿ ಸಿಬ್ಬಂದಿಗಿಂತ ವೇಶ್ಯೆಯರೇ ಎಷ್ಟೋ ಉತ್ತಮರು ಎನ್ನುವ ಮೂಲಕ ಈ ಹಿಂದೆಯೂ ಸುರೇಂದ್ರ ಸಿಂಗ್ ವಿವಾದ ಸೃಷ್ಟಿದ್ದರು, ಅಲ್ಲದೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪೋಷಕರು ಮತ್ತು ಸ್ಮಾರ್ಟ್‌ಫೋನ್‌ಗಳೇ ಕಾರಣ ಎಂದು ಅವರು ದೂಷಿಸಿದ್ದರು.

ದೇಶದಾದ್ಯಂತ ಸಂಚಲನ ಮೂಡಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರ ಪರವಾಗಿ ಸುರೇಂದ್ರ ಸಿಂಗ್ ಇತ್ತೀಚೆಗೆ ಧ್ವನಿ ಎತ್ತಿದ್ದರು.

English summary
"Rape Cases Can Be Stopped Only With Sanskar Not Governance"said UP BJP MLA Surendra Singh Amid massive outrage over the alleged gang rape of a 20-year-old woman from Uttar Pradesh's Hathras.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X