ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಗಿಂತ ಹೆಚ್ಚು ದುಡ್ಡು ಉಳಿಸುವವರ ಬಗ್ಗೆ ರಾಷ್ಟ್ರಪತಿಗಳ ಮಾತು!

|
Google Oneindia Kannada News

ಲಕ್ನೋ, ಜೂನ್ 28; "ದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಜನರು ತೆರಿಗೆಯನ್ನು ಜವಾಬ್ದಾರಿಯುವತವಾಗಿ ಪಾವತಿ ಮಾಡಬೇಕು. ನಾನು ಕೂಡಾ ತೆರಿಗೆಯನ್ನು ತಪ್ಪದೇ ಪಾವತಿ ಮಾಡುತ್ತೇನೆ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

Recommended Video

ರಾಷ್ಟ್ರಪತಿಗಳು ತಿಂಗಳಿಗೆ ಎಷ್ಟು ತೆರಿಗೆ ಕಟ್ಟುತ್ತಾರೆ | Oneindia Kannada

ರಾಮನಾಥ್ ಕೋವಿಂದ್ ತಮ್ಮ ತವರು ರಾಜ್ಯ ಉತ್ತರ ಪ್ರದೇಶ ಪ್ರವಾಸದಲ್ಲಿದ್ದಾರೆ. ರಾಷ್ಟ್ರಪತಿಗಳ ಹುಟ್ಟೂರು ಪರೌಂಖ್ ಗ್ರಾಮದ ಸಮೀಪವಿರುವ ಜಿನ್‌ಜಾಕ್‌ ರೈಲು ನಿಲ್ದಾಣದ ಸಮೀಪ ಸ್ಥಳೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

ರಾಷ್ಟ್ರಪತಿ ಕೋವಿಂದ್ ಐಸಿಯುದಿಂದ ವಿಶೇಷ ಕೊಠಡಿಗೆ ವರ್ಗಾವಣೆರಾಷ್ಟ್ರಪತಿ ಕೋವಿಂದ್ ಐಸಿಯುದಿಂದ ವಿಶೇಷ ಕೊಠಡಿಗೆ ವರ್ಗಾವಣೆ

"ದೇಶದ ಮೊದಲ ಪ್ರಜೆಯಾಗಿ ನಾನು ಮಾಸಿಕ 5 ಲಕ್ಷ ವೇತನ ಪಡೆಯುತ್ತೇನೆ. ಅದರಲ್ಲಿ 2.75 ಲಕ್ಷ ಹಣವನ್ನು ತೆರಿಗೆಗೆ ಪಾವತಿಸುತ್ತೇನೆ. ಇದರಲ್ಲಿ ನಾನು ಉಳಿಸುವುದಕ್ಕಿಂತ ಹೆಚ್ಚಿನದನ್ನು ನಮ್ಮ ಅಧಿಕಾರಿಗಳು, ಶಿಕ್ಷಕರು ಸಂಬಳವಾಗಿ ಪಡೆಯುತ್ತಾರೆ" ಎಂದರು.

ಆಸ್ಪತ್ರೆಯಿಂದ ರಾಷ್ಟ್ರಪತಿ ಭವನಕ್ಕೆ ಮರಳಿದ ರಾಮನಾಥ್ ಕೋವಿಂದ್ಆಸ್ಪತ್ರೆಯಿಂದ ರಾಷ್ಟ್ರಪತಿ ಭವನಕ್ಕೆ ಮರಳಿದ ರಾಮನಾಥ್ ಕೋವಿಂದ್

Ramnath Kovind Explained About Salary And Tax

"ದೇಶದ ನಾಗರೀಕರು ತಪ್ಪದೇ ತೆರಿಗೆ ಕಟ್ಟಬೇಕು. ಇದರಿಂದ ಮಾತ್ರ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯ. ನಾನು ಕೂಡಾ ತಪ್ಪದೇ ತೆರಿಗೆಯನ್ನು ಪಾವತಿ ಮಾಡುತ್ತೇನೆ" ಎಂದು ರಾಮನಾಥ್ ಕೋವಿಂದ್ ತಿಳಿಸಿದರು.

ಶೇ.80 ರಷ್ಟು ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿದ ಐಟಿ ದೈತ್ಯ ವಿಪ್ರೋ: ಸೆ. 1 ರಿಂದ ಜಾರಿ ಶೇ.80 ರಷ್ಟು ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿದ ಐಟಿ ದೈತ್ಯ ವಿಪ್ರೋ: ಸೆ. 1 ರಿಂದ ಜಾರಿ

"ಜನರು ರೈಲಿಗೆ ಕಲ್ಲು ಹೊಡೆಯುತ್ತಾರೆ. ಬೆಂಕಿ ಹಚ್ಚುತ್ತಾರೆ. ಹಾಗೆ ಮಾಡಿದರೆ ಯಾರಿಗೆ ನಷ್ಟ. ಅದು ಸರ್ಕಾರದ ಆಸ್ತಿಯಾದರೂ ತೆರಿಗೆ ಕಟ್ಟುವವರ ಹಣವಾಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು" ಎಂದು ರಾಷ್ಟ್ರಪತಿಗಳು ಹೇಳಿದರು.

"ನಾವು ಮತ್ತು ನೀವು ತೆರಿಗೆ ಪಾವತಿ ಮಾಡಿದರೆ ಮಾತ್ರ ದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ ಎಂಬುದನ್ನು ತಿಳಿಸಲು ನಾನು ಈ ವಿಚಾರವನ್ನು ಪ್ರಸ್ತಾಪಿಸಿದೆ. ಅದಕ್ಕಾಗಿ ವೇತನದ ವಿಚಾರ ಪ್ರಸ್ತಾಪ ಮಾಡಿದೆ" ಎಂದು ರಾಮನಾಥ್ ಕೋವಿಂದ್ ತಿಳಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಡ್ ಶುಕ್ರವಾರ ದೆಹಲಿಯಿಂದ ಕಾನ್ಪುರಕ್ಕೆ ರಾಷ್ಟ್ರಪತಿಗಳ ವಿಶೇಷ ರೈಲಿನಲ್ಲಿ ಆಗಮಿಸಿದ್ದರು. ತಮ್ಮ ಹುಟ್ಟೂರಿನಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು.

English summary
President of India Ramnath Kovind explained how much he will be paid and how much tax is deducted. A teacher has more savings than us said in his Uttar Pradesh tour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X