ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'2024ರಲ್ಲಿ ಚುನಾವಣೆ ಎದುರಿಸುತ್ತೇನೆ...': ಹೇಮಾ ಮಾಲಿನಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಖಿ ಸಾವಂತ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಬಾಲಿವುಡ್ ನಟಿ ಮತ್ತು ಸಂಸದೆ ಹೇಮಾ ಮಾಲಿನಿ ಹೇಳಿಕೆಗೆ ವಿವಾದಿತ ನಟಿ ರಾಖಿ ಸಾವಂತ್ ಪ್ರತಿಕ್ರಿಯೆ ನೀಡುವ ಮೂಲಕ ತಾವು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸೂಚನೆ ನೀಡಿದ್ದಾರೆ. 2024 ರ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರಾಖಿ ಹೇಳಿಕೊಂಡಿದ್ದಾರೆ.

ಇದಕ್ಕಾಗಿ ಹೇಮಾ ಮಾಲಿನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಸಾವಂತ್ ಧನ್ಯವಾದ ತಿಳಿಸಿದ್ದಾರೆ. "ನನ್ನ ಹೆಗಲ ಮೇಲೆ ಮಹತ್ತರವಾದ ಜವಾಬ್ದಾರಿಯನ್ನು ಹಾಕಿದ್ದಕ್ಕಾಗಿ ಮತ್ತು ನನ್ನನ್ನು ಇದಕ್ಕೆ ಅರ್ಹ ಎಂದು ಪರಿಗಣಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಹೇಮಾ ಮಾಲಿನಿ ಅವರು ಈಗಾಗಲೇ ಘೋಷಿಸಿದಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ಸಾವಂತ್ ಹೇಳಿದರು.

ಜೈಲಿನಲ್ಲೊಬ್ಬ ಜೊತೆಗಾರ: ಬಾಲಿವುಡ್ ಸುಂದರಿಯರ ಪಾಲಿಗೆ ಸುಕೇಶನೇ ಸಾಹುಕಾರ! ಜೈಲಿನಲ್ಲೊಬ್ಬ ಜೊತೆಗಾರ: ಬಾಲಿವುಡ್ ಸುಂದರಿಯರ ಪಾಲಿಗೆ ಸುಕೇಶನೇ ಸಾಹುಕಾರ!

ಪ್ರಧಾನಿ ಮೋದಿ ಚಹಾ ಮಾಡಿ ಪ್ರಧಾನಿ ಆಗಲು ಸಾಧ್ಯವಾದರೆ ತಾನೂ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದರು. "ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಬಾಲ್ಯದಿಂದಲೂ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ನಾನು ದೇಶ ಸೇವೆ ಮಾಡಲು ಹುಟ್ಟಿದ್ದೇನೆ ಮತ್ತು ನಾನು ಸೇವೆ ಮಾಡಲು ಬಯಸುತ್ತೇನೆ. ನಮ್ಮ ಪ್ರಧಾನಿ ಚಹಾ ಮಾಡಿ ಪ್ರಧಾನಿ ಆಗಬಹುದು. ಹೀಗಿರುವಾಗ ನಾನೇಕೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ? ಬಾಲಿವುಡ್‌ನಲ್ಲಿ ಕೆಲಸ ಮಾಡಿದ ನನಗೆ ನಿಮ್ಮೆಲ್ಲರ ಶುಭ ಹಾರೈಕೆಗಳು ಬೇಕು" ಎಂದು ಸಾವಂತ್ ಹೇಳಿದ್ದಾರೆ.

Rakhi Sawant reacts to Hema Malinis statement I will contest elections in 2024...

ಆದರೆ ರಾಖಿ ಅವರು ಯಾರ ವಿರುದ್ಧ ಸ್ಪರ್ಧಿಸುತ್ತಾರೆ ಎಂಬುದು "ಆಶ್ಚರ್ಯ" ಎಂದು ಹೇಳಿದರು. 2024ರ ಚುನಾವಣೆಗೆ ಸ್ಪರ್ಧಿಸುತ್ತೇನೆ ಆದರೆ ಯಾರ ವಿರುದ್ಧ ಕಣಕ್ಕಿಳಿಯುವುದು ಅಚ್ಚರಿ ತಂದಿದೆ ಎಂದು ಸಾವಂತ್ ಹೇಳಿದ್ದಾರೆ.

ನಟಿ ಕಂಗನಾ ರಣಾವತ್ ಅವರು ಮಥುರಾದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿಗೆ ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಶನಿವಾರ ಪ್ರತಿಕ್ರಿಯಿಸಿದ್ದರು. ಸುದ್ದಿಗಾರರ ಪ್ರಶ್ನೆಗೆ ಹೇಮಾ ಮಾಲಿನಿ ಅವರು "ರಾಖಿ ಸಾವಂತ್ ಕೂಡ ಸ್ಪರ್ಧಿಸಬಹುದು" ಎಂದು ಹೇಳಿದ್ದರು.

ರಣಾವತ್ ರಾಜಕೀಯಕ್ಕೆ ಧುಮುಕಿರುವ ಬಗ್ಗೆ ವರದಿಯಾಗಿರುವ ಸುದ್ದಿಯ ಬಗ್ಗೆ ಕೇಳಿದಾಗ, ಹೇಮಾ ಮಾಲಿನಿ, "ಒಳ್ಳೆಯದು, ಇದು ಒಳ್ಳೆಯ ವಿಚಾರ ... ನನ್ನ ಅಭಿಪ್ರಾಯದ ಬಗ್ಗೆ ನಾನು ಏನು ಹೇಳಲಿ? ನನ್ನ ಅಭಿಪ್ರಾಯವು ದೇವರಿಗೆ ಬಿಟ್ಟದ್ದು. ನಿಮಗೆ ಮಥುರಾದಲ್ಲಿ ಚಲನಚಿತ್ರ ತಾರೆಯರು ಮಾತ್ರ ಬೇಕು. ಬೇರೆ ಯಾರಾದರೂ ಸಂಸದರಾಗಲು ಬಯಸದಿದ್ದರೆ ಬೇರೆ ಯಾರೂ ಆಗಲು ಸಾಧ್ಯವಿಲ್ಲ. ಏಕೆಂದರೆ ನಿಮ್ಮ ಪ್ರಕಾರ ಒಬ್ಬ ಚಲನಚಿತ್ರ ತಾರೆ ಮಾತ್ರ ಮಥುರಾದಿಂದ ಸಂಸದರಾಗಬೇಕು ಅನ್ನೋದಾಗಿತ್ತು ಅಂದರೆ ನಾಳೆ ರಾಖಿ ಸಾವಂತ್ ಕೂಡ ಆಗಬಹುದು' ಎಂದು ಹೇಳಿದ್ದರು.

Rakhi Sawant reacts to Hema Malinis statement I will contest elections in 2024...

ಹೇಮಾ ಮಾಲಿನಿ ಅವರು 2014 ರಲ್ಲಿ ಮತ್ತು 2019 ರಲ್ಲಿ ಎರಡು ಬಾರಿ ಮಥುರಾದಿಂದ ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದರು. ಇತ್ತೀಚೆಗೆ ಕಂಗನಾ ರನೌತ್ ಅವರು ವೃಂದಾವನದ ಪ್ರಸಿದ್ಧ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ತಮಿಳು ನಟಿ, ರಾಜಕಾರಣಿ ಜಯಲಲಿತಾ ಅವರನ್ನು ಆಧರಿಸಿದ ಮತ್ತು ಸೆಪ್ಟೆಂಬರ್ 2021 ರಲ್ಲಿ ಬಿಡುಗಡೆಯಾದ 'ತೈಲವಿ' ಪ್ರಚಾರದ ಸಂದರ್ಭದಲ್ಲಿ ಕಂಗನಾ ಅವರು ತಮ್ಮ ಅಭಿಮಾನಿಗಳು ಬಯಸಿದರೆ ರಾಜಕೀಯಕ್ಕೆ ಸೇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಅವರು ಪ್ರಸ್ತುತ ತಮ್ಮ ನಟನಾ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದಾರೆ. ನಾಳೆ ಮಥುರಾದಿಂದ ಸ್ಪರ್ಧೆ ಮಾಡಿದರೂ ಆಶ್ಚರ್ಯ ಪಡುವಂತಿಲ್ಲ.

English summary
Actress Rakhi Sawant has reacted to politician Hema Malini's statement that she will contest elections in 2024.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X