ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೇಥಿಯಲ್ಲಿ ರಾಹುಲ್, ಸ್ಮೃತಿ ಪ್ರತಿಷ್ಠೆ ಹೋರಾಟ

|
Google Oneindia Kannada News

ಲಕ್ನೋ, ಮೇ 6: ದೇಶದ ಗಮನ ಸೆಳೆದಿರುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಇಂದು ಘಟಾನುಘಟಿ ಅಭ್ಯರ್ಥಿಗಳ ಮತ ಪರೀಕ್ಷೆ ನಡೆಯಲಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವಿನ ಹಣಾಹಣಿಗೆ ಈ ಕ್ಷೇತ್ರ ಸಾಕ್ಷಿಯಾಗಿದ್ದು, ಮತದಾರರು ಸೋಮವಾರ ಭವಿಷ್ಯ ನಿರ್ಧರಿಸಲಿದ್ದಾರೆ.

2014ರಲ್ಲಿ 1.07ಲಕ್ಷ ಮತಗಳ ಅಂತರದಿಂದ ಸೋತಿದ್ದ ಸ್ಮೃತಿ ಇರಾನಿ, ಈ ಬಾರಿ ಗೆಲುವಿಗೆ ಹಠ ತೊಟ್ಟಿದ್ದಾರೆ. ಅಮೇಥಿ ಅಭಿವೃದ್ಧಿ, ಮೋದಿ ಸಾಧನೆ ಹಾಗೂ ರಾಹುಲ್‌ ವೈಫಲ್ಯ ಇರಿಸಿಕೊಂಡು ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಹಾಗೆಯೇ ವಯನಾಡಿನಿಂದ ರಾಹುಲ್‌ ಸ್ಪರ್ಧಿಸಿರುವುದನ್ನು ಕೂಡ ಸೋಲಿನ ಭಯ ಎನ್ನುವ ಆರೋಪವನ್ನೂ ಹೊರಿಸುತ್ತಿದ್ದಾರೆ.

Rahul, Smriti Iranils prestigeous election battle at Amethi

5ನೇ ಹಂತದ ಚುನಾವಣೆ LIVE: ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರ5ನೇ ಹಂತದ ಚುನಾವಣೆ LIVE: ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರ

ಇನ್ನೊಂದೆಡೆ ಕುಟುಂಬದ ಭಾವನಾತ್ಮಕ ನಂಟಿನ ಮೂಲಕ ಮತದಾರರನ್ನು ಸೆಳೆಯುವ ತಂತ್ರವನ್ನು ಗಾಂಧಿ ಕುಟುಂಬ ಮುಂದುವರಿಸಿದೆ. ರಾಹುಲ್‌ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಪ್ರಿಯಾಂಕಾ ಗಾಂಧಿಯೇ ಪ್ರಚಾರ ನಡೆಸುತ್ತಿದ್ದಾರೆ. ಕುಟುಂಬ ಹಾಗೂ ಭಾವನಾತ್ಮಕ ವಿಚಾರಗಳ ಜತೆಗೆ ಮೋದಿ ಸರ್ಕಾರದ ವೈಫಲ್ಯಗಳನ್ನು ಮುಂದಿರಿಸಿಕೊಂಡುಸತತ ೪ನೇ ಆಯ್ಕೆಗೆ ರಾಹುಲ್‌ ಮತ ಯಾಚಿಸುತ್ತಿದ್ದಾರೆ. ಎಸ್ಪಿ-ಬಿಎಸ್ಪಿ ಮೈತ್ರಿಕೂಟದಿಂದಲೂ ರಾಹುಲ್‌ ವಿರುದ್ಧ ಅಭ್ಯರ್ಥಿಗಳನ್ನು ಹಾಕದಿರುವುದು ಕಾಂಗ್ರೆಸ್‌ಗೆ ಲಾಭವಾಗಲಿದೆ. ಒಟ್ಟಿನಲ್ಲಿ ರಾಹುಲ್‌ ಹಾಗೂ ಸ್ಮೃತಿಗೆ ಈ ಚುನಾವಣೆ ಪ್ರತಿಷ್ಠೆಯ ಹೋರಾಟವಾಗಿದೆ.

English summary
Amethi Parliamentary constituency will witness prestigious battle Between Rahul Gandhi and Smriti Irani. today. This high profile constituency will go to vote on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X