ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ಕಾಯ್ದೆ ವಿರೋಧಿ ಹೋರಾಟ: ಮೃತರ ಮನೆಗೆ ಪ್ರಿಯಾಂಕಾ ವಾದ್ರಾ

|
Google Oneindia Kannada News

ಲಕ್ನೋ, ಡಿಸೆಂಬರ್.22: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಮೃತಪಟ್ಟ ಪ್ರತಿಭಟನಾಕಾರರ ನಿವಾಸಕ್ಕೆ ಕಾಂಗ್ರೆಸ್ ಜನರಲ್ ಸೆಕ್ರಟರಿ ಆಗಿರುವ ಪ್ರಿಯಾಂಕಾ ವಾದ್ರಾ ಭೇಟಿ ನೀಡಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಕಾಂಗ್ರೆಸ್ ನಾಯಕಿ, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಉತ್ತರ ಪ್ರದೇಶದ ಬಿಜ್ನೂರಿನಲ್ಲಿ ಮೃತ ಸುಲೇಮಾನ್ ನಿವಾಸಕ್ಕೆ ಭೇಟಿ ನೀಡಿದ ಪ್ರಿಯಾಂಕಾ ವಾದ್ರಾ, ಮೃತನ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಕಳೆದ ಡಿಸೆಂಬರ್.20ರಂದು ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉಗ್ರ ಪ್ರತಿಭಟನೆ ನಡೆಯಿತು.

ಪೌರತ್ವಕಾಯ್ದೆ; ಅಮಿತ್ ಶಾ ರಾಜ್ಯಕ್ಕೆ ಕೊಟ್ಟ ಸೂಚನೆ ಏನು?
ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಉತ್ತರಪ್ರದೇಶದಲ್ಲಿ ಇದುವರೆಗೂ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆ ಎಂದರೆ, ಶನಿವಾರ ನಡೆದ ಘರ್ಷಣೆಯಲ್ಲಿ ಸುಲೇಮಾನ್ ಪ್ರಾಣ ಬಿಟ್ಟಿದ್ದರು. 288ಕ್ಕೂ ಅಧಿಕ ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

Priyanka Vadra Visited To Suleman Home, Who Died In Anti-CAA Protest In Uttar Pradesh

ಕಳೆದ ಒಂದು ವಾರದಿಂದಲೂ ಉತ್ತರ ಪ್ರದೇಶದ ಹಲವೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಯುತ್ತಿದೆ. ಹಲವೆಡೆ ಪೊಲೀಸರ ಮೇಲೆಯೇ ಕಲ್ಲುತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಲಾಠಿಪ್ರಹಾರ, ಅಶ್ರುವಾಯು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು.

Priyanka Vadra Visited To Suleman Home, Who Died In Anti-CAA Protest In Uttar Pradesh
ಇದುವರೆಗೂ ಪ್ರತಿಭಟನೆಗೆ ಸಂಬಂಧಿಸಿದಂತೆ 135ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲಾಗಿದೆ. 879ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, 5 ಸಾವಿರಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಡಿಜಿಪಿ ಓ.ಪಿ.ಸಿಂಗ್ ಮಾಹಿತಿ ನೀಡಿದ್ದಾರೆ.
English summary
Citizenship Amendment Act: Congress General Secretary Priyanka Vadra Visited To Suleman Home, Who Died In Anti-CAA Protest In Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X