ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕೀಲರ ಹತ್ಯೆ: ಉತ್ತರ ಪ್ರದೇಶದಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದ ಪ್ರಿಯಾಂಕ

|
Google Oneindia Kannada News

ಶಹಜಹಾನ್‌ಪುರ, ಅಕ್ಟೋಬರ್ 19: ಉತ್ತರ ಪ್ರದೇಶದಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಕಾನೂನು ಹಾಗೂ ನ್ಯಾಯಾಂಗ ನಮ್ಮ ಪ್ರಜಾಪ್ರಭುತ್ವದ ಅವಿಭಾಜ್ಯ ಆಧಾರ ಸ್ತಂಭವಾಗಿದೆ. ಶಹಜಹಾನ್‌ಪುರದ ನ್ಯಾಯಾಲಯದ ಆವರಣದಲ್ಲಿ ಹಗಲು ಹೊತ್ತಿನಲ್ಲಿ ವಕೀಲರ ಬರ್ಬರ ಹತ್ಯೆಯಾಗಿದೆ.

ಉತ್ತರಪ್ರದೇಶ; ಕೋರ್ಟ್ ಆವರಣದಲ್ಲಿ ವಕೀಲನ ಕೊಲೆಉತ್ತರಪ್ರದೇಶ; ಕೋರ್ಟ್ ಆವರಣದಲ್ಲಿ ವಕೀಲನ ಕೊಲೆ

ಇಂದಿನ ಉತ್ತರ ಪ್ರದೇಶದಲ್ಲಿ, ಮಹಿಳೆಯರು, ರೈತರು ಹಾಗೂ ವಕೀಲರು ಸೇರಿದಂತೆ ಯಾರೂ ಸುರಕ್ಷಿತವಾಗಿಲ್ಲ ಎನ್ನುವುದನ್ನು ನೆನಪಿಸುತ್ತದೆ" ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Priyanka Says No One Safe In UP, As Lawyer Shot Dead In Shahjahanpur Court

"ಬಿಜೆಪಿ ಆಡಳಿತದಲ್ಲಿ ಯಾವುದೇ ಸಾಮಾನ್ಯ ವ್ಯಕ್ತಿಯೂ ಸುರಕ್ಷಿತವಾಗಿಲ್ಲ ಎಂದು ಷಹಜಹಾನ್ ಪುರ್ ಘಟನೆಯು ಮತ್ತೊಮ್ಮೆ ಸಾಬೀತುಪಡಿಸಿದೆ. ಆದರೆ ರಾಜ್ಯ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವ ಬದಲು ಸುಳ್ಳುಗಳನ್ನು ಹರಡುತ್ತಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.

ಗೂಂಡಾಗಳು ಮತ್ತು ದುಷ್ಕರ್ಮಿಗಳು ರಾಜ್ಯದಿಂದ ಪಲಾಯನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಹೇಳುತ್ತಿದ್ದರು. ಆದರೆ ಇಲ್ಲಿ ಅವರು ನ್ಯಾಯಾಲಯಕ್ಕೆ ನುಗ್ಗಿ ವಕೀಲರನ್ನು ಕೊಲ್ಲುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಉತ್ತರಪ್ರದೇಶದ ಶಹಜಹಾನ್ ಪುರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದೊಳಗೆ ವಕೀಲರೊಬ್ಬರಿಗೆ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಸೋಮವಾರ ವರದಿಯಾಗಿದೆ.

ಹತ್ಯೆಯಾದ ವಕೀಲರನ್ನು ಭೂಪೇಂದ್ರ ಪ್ರತಾಪ್ ಸಿಂಹ ಎಂದು ಗುರ್ತಿಸಲಾಗಿದೆ. ನ್ಯಾಯಾಲಯದ ಮೂರನೇ ಮಹಡಿಯಲ್ಲಿ ವಕೀಲರ ಶವ ಪತ್ತೆಯಾಗಿದೆ. ಮೃತದೇಹದ ಬಳಿ ದೇಶೀಯ ನಿರ್ಮಿತ ಪಿಸ್ತೂಲ್ ಕೂಡ ಕಂಡುಬಂದಿದೆ ಎಂದು ವರದಿಯಾಗಿದೆ.

ಹತ್ಯೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಘಟನೆ ಬಳಿಕ ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆಂದು ತಿಳಿದುಬಂದಿದೆ.

"ನಮಗೆ ಘಟನೆ ಯಾಕೆ ಆಗಿದೆ ಎಂಬುದರ ಬಗ್ಗೆ ವಿವರಗಳು ತಿಳಿದಿಲ್ಲ. ನಾವು ನ್ಯಾಯಾಲಯದಲ್ಲಿದ್ದೆವು. ಯಾರೋ ಬಂದು ನಮಗೆ ಹೇಳಿದರು. ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದಾಗ ನಾವು ಸ್ಥಳಕ್ಕೆ ಹೋಗಿ ನೋಡಿದ್ದೇವೆ. ನಾವು ನೋಡಲು ಬಂದಾಗ ವಕೀಲರ ಮೃತ ದೇಹ ಇತ್ತು. ಪಕ್ಕದಲ್ಲಿ ಒಂದು ನಾಡ ಪಿಸ್ತೂಲ್ ಕಂಡು ಬಂದಿದೆ. ಮೃತ ವ್ಯಕ್ತಿ ಈ ಹಿಂದೆ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದರು. ಕಳೆದ 4-5 ವರ್ಷಗಳಿಂದ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದರು" ಎಂದು ವಕೀಲರು ಹೇಳಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ನಡೆದಾಗ ಕಚೇರಿಯಲ್ಲಿ ಯಾರೂ ಇರಲಿಲ್ಲ. ಮಾಹಿತಿ ಬಂದ ತಕ್ಷಣ ಎಸ್ಪಿ ಎಸ್.ಆನಂದ್, ಡಿಎಂ ಇಂದರ್ ವಿಕ್ರಮ್ ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ಪೊಲೀಸರು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಹುಡುಕುತ್ತಿದ್ದಾರೆ.

'ವಕೀಲರ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ದ್ವೇಷ ಸಾಧನೆಗೆ ಈ ಕೊಲೆ ನಡೆದಿದೆ ಎಂಬ ಅನುಮಾನ ಮೂಡಿದೆ. ಘಟನೆ ನಡೆದ ಸ್ಥಳದಿಂದ ನಾಡ ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು' ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ದೆಹಲಿಯ ರೋಹಿಣಿಯ ನ್ಯಾಯಾಲಯದಲ್ಲಿ ದುಷ್ಕರ್ಮಿಗಳು ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.

ನ್ಯಾಯಾಲಯಗಳ ಆವರಣಗಳಲ್ಲಿಯೇ ಇಂತಹ ಘಟನೆಗಳು ನಡೆದಿರುವುದಕ್ಕೆ ದೆಹಲಿ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ.ನ್ಯಾಯಾಲಯದ ಮೂರನೇ ಮಹಡಿಯಿಂದ ಗುಂಡಿನ ಶಬ್ಧ ಕೇಳಿ ಬಂತು. ಕೆಲವರು ಕೆಳಗೆ ಓಡಿ ಬಂದು ವಕೀಲ ಭೂಪೇಂದ್ರ ಸಿಂಗ್ ಅವರನ್ನು ಆಗಂತುಕನೋರ್ವ ಹತ್ಯೆ ಮಾಡಿದ ಎಂದು ತಿಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ವಕೀಲನ ಹತ್ಯೆಯನ್ನು ಖಂಡಿಸಿರುವ ಬಿಎಸ್‌ಪಿ ಮುಖ್ಯಸ್ಥೆ ಹಾಗೂ ಮಾಜಿ ಸಿಎಂ ಮಾಯಾವತಿ, ಯೋಗಿ ಆದಿತ್ಯನಾಥ್ ಅವರ ರಾಮರಾಜ್ಯ ಅಂದರೆ ಇದೇನಾ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಹಾಡಹಗಲೇ ನ್ಯಾಯಾಲಯಗಳಲ್ಲಿ ದಾಳಿಗಳಾಗುತ್ತಿದೆ. ವಕೀಲರನ್ನೇ ಗುಂಡಿಟ್ಟು ಹತ್ಯೆ ಮಾಡಲಾಗುತ್ತಿದೆ. ಆದರೆ ಯೋಗಿ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಮಾಯಾವತಿ ಕಿಡಿಕಾರಿದ್ದಾರೆ.

English summary
Congress leader Priyanka Gandhi Vadra on Monday attacked the Yogi Adityanath government over the death of a lawyer, who died of a gunshot wound to the head at the Shahjahanpur district court, and said the incident was another chilling reminder that no one is safe in today's Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X