ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಿಕಾಸ್ ದುಬೆ ಸತ್ತ, ಆತನ ರಕ್ಷಣೆಗೆ ನಿಂತವರ ಕಥೆಯೇನು' ಪ್ರಿಯಾಂಕಾ ಗಾಂಧಿ ಪ್ರಶ್ನೆ

|
Google Oneindia Kannada News

ಲಕ್ನೌ, ಜುಲೈ 10: ಏಂಟು ಮಂದಿರ ಪೊಲೀಸರ ಹತ್ಯೆಗೆ ಕಾರಣವಾಗಿದ್ದ ರೌಡಿ ಶೀಟರ್ ವಿಕಾಸ್ ದುಬೆ ಎನ್‌ಕೌಂಟರ್‌ ಪ್ರಕರಣ ಉತ್ತರ ಪ್ರದೇಶದಲ್ಲಿ ರಾಜಕೀಯವಾಗಿ ತಿರುವು ಪಡೆದುಕೊಳ್ಳುತ್ತಿದೆ.

Recommended Video

Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

ವಿಕಾಸ್ ದುಬೆ ಎನ್‌ಕೌಂಟರ್ ಕುರಿತು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ''ಅಪರಾಧಿ ಸತ್ತ, ಆದರೆ, ಅಪರಾಧಿಯ ರಕ್ಷಣೆಗೆ ನಿಂತಿದ್ದವರ ಕಥೆಯೇನು?'' ಎಂದು ಪ್ರಶ್ನಿಸಿದ್ದಾರೆ.

ವಿಕಾಸ್ ದುಬೆ ಬಂಧನದ ಬಗ್ಗೆ ಗುರುವಾರ ಮಾತನಾಡಿದ್ದ ಪ್ರಿಯಾಂಕಾ ಗಾಂಧಿ, ''ವಿಕಾಸ್ ದುಬೆಗೆ ರಕ್ಷಣೆ ನೀಡುತ್ತಿರುವವರ ಬಗ್ಗೆ ಸತ್ಯವನ್ನು ಕಂಡುಹಿಡಿಯಲು ಸಿಬಿಐ ತನಿಖೆ ವಹಿಸಬೇಕು'' ಎಂದು ಒತ್ತಾಯಿಸಿದ್ದರು. ಮರುದಿನವೇ ದುಬೆ ಎನ್‌ಕೌಂಟರ್ ಆಗಿದ್ದು, ಆತನನ್ನು ರಕ್ಷಿಸುತ್ತಿದ್ದವರ ಬಗ್ಗೆ ಮತ್ತೊಮ್ಮೆ ಪ್ರಿಯಾಂಕಾ ಪ್ರಶ್ನೆ ಎತ್ತಿದ್ದಾರೆ.

8 ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಪಾತಕಿ ವಿಕಾಸ್ ದುಬೆ ಎನ್‌ಕೌಂಟರ್‌8 ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಪಾತಕಿ ವಿಕಾಸ್ ದುಬೆ ಎನ್‌ಕೌಂಟರ್‌

ಇದೇ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ''ಅಸಲಿ ಕಾರು ಪಲ್ಟಿಯಾಗಿಲ್ಲ, ಆದರೆ ಕಾರು ಉರುಳಿಸಿ ಉತ್ತರ ಪ್ರದೇಶದ ಸರ್ಕಾರ ಉಳಿಸಿಕೊಂಡಿದೆ'' ಎಂದು ವ್ಯಂಗ್ಯ ಮಾಡಿದ್ದಾರೆ.

Priyanka Gandhi tweeted on Vikas Dubey criminal is dead what about those who aided the criminal

ವಿಕಾಸ್ ದುಬೆಯನ್ನು ಉಜ್ಜಯಿನಿಯಿಂದ ಕಾನ್ಪುರಕ್ಕೆ ಕರೆದುಕೊಂಡು ಹೋಗುತ್ತಿದ್ದ ಪೊಲೀಸರ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಪೊಲೀಸರ ಗನ್ ಕಸಿದು ಪರಾರಿಯಾಗಲು ಯತ್ನಿಸಿದ ಕಾರಣ, ಆತನನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಾನ್ಪುರ ಪೊಲೀಸರ ಹತ್ಯೆ ಪ್ರಕರಣವನ್ನು ನಿಭಾಯಿಸುವಲ್ಲಿ ಮತ್ತು ದುಬೆಯನ್ನು ಬಂಧಿಸುವಲ್ಲಿ ಉತ್ತರಪ್ರದೇಶದ ಬಿಜೆಪಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದನ್ನು ಸ್ಮರಿಸಬಹುದು.

English summary
Congress leader Priyanka Gandhi Reacting to Vikas Dubey’s death on Friday morning, she tweeted “The criminal is dead, but what about those who aided the criminal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X