ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಮಿಕರಿಗೆ ಸಹಾಯ ಮಾಡಲು ಅನುಮತಿ ಕೊಡಿ: ಪ್ರಿಯಾಂಕಾ ಗಾಂಧಿ ಮನವಿ

|
Google Oneindia Kannada News

ಲಕ್ನೌ, ಮೇ 17: ಕೊರೊನಾ ವೈರಸ್‌ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ನಮಗೆ ಅನುಮತಿ ಕೊಡಿ ಎಂದು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್‌ಗೆ ಪತ್ರ ಬರೆದಿದ್ದಾರೆ.

''ರಾಷ್ಟ್ರವನ್ನು ಕಟ್ಟುವ ಕಾರ್ಮಿಕರು ಬಿಸಿಲಿನಲ್ಲಿ ಇದ್ದಾರೆ. ನಮ್ಮ ಸಹೋದರ ಮತ್ತು ಸಹೋದರಿಯರಿಗೆ ಸಹಾಯ ಮಾಡಲು ಅನುಮತಿ ಕೊಡಿ. ಸಾವಿರಾರು ಬಸ್‌ಗಳು ಗಡಿಭಾಗದಲ್ಲಿ ಸಜ್ಜಾಗಿ ನಿಂತಿವೆ'' ಎಂದು ಯುಪಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಗುಜರಾತ್‌ನಲ್ಲಿ 'ಶ್ರಮಿಕ್ ರೈಲು' ರದ್ದುಗೊಳಿಸಿದ್ದಕ್ಕೆ ಕಾರ್ಮಿಕರಿಂದ ಗಲಾಟೆಗುಜರಾತ್‌ನಲ್ಲಿ 'ಶ್ರಮಿಕ್ ರೈಲು' ರದ್ದುಗೊಳಿಸಿದ್ದಕ್ಕೆ ಕಾರ್ಮಿಕರಿಂದ ಗಲಾಟೆ

''ಖಾಲಿ ಪ್ರಕಟಣೆಗಳು ಹಾಗೂ ಕೀಳುಮಟ್ಟದ ರಾಜಕಾರಣ ಇಲ್ಲಿ ಕೆಲಸಕ್ಕೆ ಬರಲ್ಲ. ಹೆಚ್ಚು ರೈಲುಗಳು ಓಡಿಸಿ, ಹೆಚ್ಚು ಬಸ್‌ಗಳನ್ನು ಓಡಿಸಿ, 1000 ಬಸ್‌ಗಳನ್ನು ನಾವು ಓಡಿಸಲು ಸಜ್ಜಾಗಿದ್ದೇವೆ. ನಾವು ಅವರ ಸೇವೆ ಮಾಡೋಣ'' ಎಂದು ಪ್ರಿಯಾಂಕಾ ವಿನಂತಿಸಿದ್ದಾರೆ.

 Priyanka Gandhi Request to UP CM To Give Permission To Run Bus For Workers

''ಕಳೆದ 50 ದಿನಗಳಿಂದ ಕಾರ್ಮಿಕರಿಗೆ ಕೆಲಸ ಇಲ್ಲ. ಅವರ ಜೀವನ ಸಾಗುತ್ತಿಲ್ಲ. ಅನೇಕ ಜನರು ಉತ್ತರ ಪ್ರದೇಶದ ಗಡಿ ಭಾಗಗಳಲ್ಲಿ ಕಾಯುತ್ತಿದ್ದಾರೆ. ಬಿಸಿಲಿನಲ್ಲಿ ನಿಂತಿದ್ದಾರೆ'' ಎಂದು ಟ್ವಿಟ್ಟರ್‌ನಲ್ಲಿ ಟೀಕಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಪತ್ರಕ್ಕೆ ಉತ್ತರ ಪ್ರದೇಶದ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಸದ್ಯ, ಶ್ರಮಿಕ್ ರೈಲುಗಳು ಸಂಚಾರ ನಡೆಸುತ್ತಿದ್ದೆ. ಆದರೂ, ಹೆದ್ದಾರಿಗಳಲ್ಲಿ ಕಾರ್ಮಿಕರು ನಡೆದುಕೊಂಡು ಹೋಗುತ್ತಿರುವುದು ಮಾತ್ರ ಕಮ್ಮಿ ಆಗುತ್ತಿಲ್ಲ.

English summary
Congress leader and party general secretary Priyanka Gandhi Vadra write a letter to UP CM to give permission to run a bus for migrant workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X