ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾನು ಇಂದಿರಾ ಗಾಂಧಿ ಮೊಮ್ಮಗಳು, ಬೇರೆ ನಾಯಕರಂತೆ.....'- ಪ್ರಿಯಾಂಕಾ ವಾಗ್ದಾಳಿ

|
Google Oneindia Kannada News

ಲಕ್ನೌ, ಜೂನ್ 26: ವಲಸೆ ಕಾರ್ಮಿಕರ ವಿಚಾರದಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಪ್ರಿಯಾಂಕಾ ಗಾಂಧಿ, ಮತ್ತೆ ಉತ್ತರ ಪ್ರದೇಶ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ.

Recommended Video

T20 worldcup fixture will decide if IPL gets cancelled this year | Oneindia Kannada

'ನೀವು ಏನು ಬೇಕಾದರೂ ಕ್ರಮ ತೆಗೆದುಕೊಳ್ಳಿ, ನಾನು ಜನರ ಮುಂದೆ ಸತ್ಯವನ್ನು ಎತ್ತಿ ತೋರಿಸುತ್ತೇನೆ' ಎಂದು ಯೋಗಿ ಸರ್ಕಾರ ವಿರುದ್ಧ ಗುಡುಗಿದ್ದಾರೆ. ಕೊರೊನಾ ವೈರಸ್ ನಿಯಂತ್ರಣ ಮಾಡುವ ವಿಚಾರದಲ್ಲಿ, ವಲಸೆ ಕಾರ್ಮಿಕರನ್ನು ರಕ್ಷಿಸುವ ವಿಚಾರಸಲ್ಲಿ ಯುಪಿ ಸರ್ಕಾರ ಸೋತಿದೆ ಎಂದು ಕುಟುಕಿದ್ದಾರೆ.

ಬೇಕಿದ್ರೆ ಬಸ್ ಮೇಲೆ ಬಿಜೆಪಿ ಬಾವುಟ ಹಾಕೊಳ್ಳಿ, ಆದರೆ ಅನುಮತಿ ಕೊಡಿ - ಪ್ರಿಯಾಂಕಾ ಗಾಂಧಿಬೇಕಿದ್ರೆ ಬಸ್ ಮೇಲೆ ಬಿಜೆಪಿ ಬಾವುಟ ಹಾಕೊಳ್ಳಿ, ಆದರೆ ಅನುಮತಿ ಕೊಡಿ - ಪ್ರಿಯಾಂಕಾ ಗಾಂಧಿ

'ಉತ್ತರ ಪ್ರದೇಶ ಸರ್ಕಾರ ನನಗೆ ಬೆದರಿಕೆ ಹಾಕುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದೆ' ಅಷ್ಟೇ. ಅದನ್ನು ಬಿಟ್ಟು ಬೇರೆ ಏನು ಮಾಡುತ್ತಿಲ್ಲ ಪ್ರಿಯಾಂಕಾ ಶುಕ್ರವಾರ ಟ್ವಿಟ್ಟರ್ ಮೂಲಕ ಮಾತಿನ ದಾಳಿ ನಡೆಸಿದ್ದಾರೆ.

ಸತ್ಯವನ್ನು ಎತ್ತಿ ತೋರಿಸುವುದು ನನ್ನ ಕರ್ತವ್ಯ

ಸತ್ಯವನ್ನು ಎತ್ತಿ ತೋರಿಸುವುದು ನನ್ನ ಕರ್ತವ್ಯ

''ಓರ್ವ ಸಾರ್ವಜನಿಕ ಸೇವಕಿಯಾಗಿ ಉತ್ತರ ಪ್ರದೇಶದ ಜನರ ಪರ ಕೆಲಸ ಮಾಡುವುದು ನನ್ನ ಕರ್ತವ್ಯ. ಅವರ ಮುಂದೆ ಸತ್ಯವನ್ನು ತಂದಿಡುವುದು ನನ್ನ ಜವಾಬ್ದಾರಿ. ಸರ್ಕಾರದ ಅಪಪ್ರಚಾರವನ್ನು ಪ್ರಚಾರ ಮಾಡುವುದು ನನ್ನ ಕರ್ತವ್ಯವಲ್ಲ. ಉತ್ತರ ಪ್ರದೇಶ ಸರ್ಕಾರ ನನಗೆ ಬೆದರಿಕೆ ಹಾಕುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದೆ'' ಎಂದು ಪ್ರಿಯಾಂಕಾ ಟ್ವೀಟ್ ಮಾಡಿ ಟೀಕಿಸಿದ್ದಾರೆ.

ನಾನು ಇಂದಿರಾ ಗಾಂಧಿ ಮೊಮ್ಮಗಳು

''ನನ್ನ ವಿರುದ್ಧವಾಗಿ ನೀವು ಯಾವ ಕ್ರಮ ಬೇಕಾದರೂ ತೆಗೆದುಕೊಳ್ಳಿ, ನಾನು ಸತ್ಯವನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತೇನೆ. ನಾನು ಇಂದಿರಾ ಗಾಂಧಿ ಮೊಮ್ಮಗಳು, ಬೇರೆ ನಾಯಕರಂತೆ ನಾನೇನು ಬಿಜೆಪಿಯ ಅಘೋಷಿತ ವಕ್ತಾರಳಲ್ಲ'' ಎಂದು ಪ್ರಿಯಾಂಕಾ ಗಾಂಧಿ ಸವಾಲ್ ಎಸೆದಿದ್ದಾರೆ.

ಕಾರ್ಮಿಕರಿಗೆ ಸಹಾಯ ಮಾಡಲು ಅನುಮತಿ ಕೊಡಿ: ಪ್ರಿಯಾಂಕಾ ಗಾಂಧಿ ಮನವಿಕಾರ್ಮಿಕರಿಗೆ ಸಹಾಯ ಮಾಡಲು ಅನುಮತಿ ಕೊಡಿ: ಪ್ರಿಯಾಂಕಾ ಗಾಂಧಿ ಮನವಿ

ಆಶ್ರಯ ಮನೆಯಲ್ಲಿ ಕೊವಿಡ್ ಕೇಸ್

ಆಶ್ರಯ ಮನೆಯಲ್ಲಿ ಕೊವಿಡ್ ಕೇಸ್

ಕಾನ್ಪುರದ ಸರ್ಕಾರಿ ಮಕ್ಕಳ ಆಶ್ರಯ ಗೃಹದಲ್ಲಿ 57 ಬಾಲಕಿಯರಿಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಇದರಲ್ಲಿ ಇಬ್ಬರು ಹೆಣ್ಣುಮಕ್ಕಳು ಗರ್ಭಿಣಿಯಾಗಿದ್ದು, ಒಬ್ಬ ಎಚ್‌ಐವಿ ಪಾಸಿಟಿವ್ ಸೇರಿದ್ದರು. ಈ ಘಟನೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಪ್ರಿಯಾಂಕಾ ಗಾಂಧಿ ''ಬಿಹಾರದ ಮುಜಾಫರ್ಪುರ್ ಆಶ್ರಯ ಮನೆ ಪ್ರಕರಣಕ್ಕೆ'' ಹೋಲಿಸಿದ್ದರು. ಈ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಸಮಿತಿ ಪ್ರಿಯಾಂಕಾ ಅವರಿಗೆ ''ಜನರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದೀರಾ'' ಎಂದು ನೋಟಿಸ್ ನೀಡಿತ್ತು.

ಆಗ್ರಾದಲ್ಲಿ 28 ಮಂದಿ ಸಾವು ಹೇಗೆ?

ಆಗ್ರಾದಲ್ಲಿ 28 ಮಂದಿ ಸಾವು ಹೇಗೆ?

'ಜೂನ್ 22 ರಂದು ಆಗ್ರಾ ಆಸ್ಪತ್ರೆಯಲ್ಲಿ 28 ಜನ ಕೊರೊನಾ ವೈರಸ್ ರೋಗಿಗಳು ದಾಖಲಾಗಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ 48 ಗಂಟೆಗಳಲ್ಲಿ 28 ಮಂದಿ ಮೃತಪಟ್ಟರು' ಎಂದು ಪ್ರಿಯಾಂಕಾ ಗಾಂಧಿ ಟ್ವಿಟ್ಟರ್‌ನಲ್ಲಿ ಸರ್ಕಾರ ವಿರುದ್ಧ ಚಾಟಿ ಬೀಸಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದರು.

English summary
'I am the granddaughter of Indira Gandhi, not an undeclared spokesperson of the BJP', Congress Leader Priyanka gandhi attacks again uttar pradesh's govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X