ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಮರಣೋತ್ತರ ವರದಿಯಲ್ಲಿ ಏನಿತ್ತು?

|
Google Oneindia Kannada News

ಲಕ್ನೋ, ಅಕ್ಟೋಬರ್ 1: ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮರಣೋತ್ತರ ವರದಿಯಲ್ಲಿ ಆಕೆಯ ಬೆನ್ನುಮೂಳೆ ಮುರಿದಿತ್ತು, ಹಾಗೂ ಕತ್ತು ಹಿಸುಕುವ ಯತ್ನ ನಡೆದಿತ್ತು ಎಂಬುದರ ಕುರಿತು ಉಲ್ಲೇಖಿಸಲಾಗಿದೆ.

ಇದೀಗ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಸಂತ್ರಸ್ತೆಯ ಬೆನ್ನುಹುರಿ ಮುರಿದಿರುವುದು ಸಾಬೀತಾಗಿದೆ ಎಂದು' ಇಂಡಿಯಾ ಟುಡೆ' ವರದಿ ಮಾಡಿದೆ. ಆಕೆಯ ಬೆನ್ನುಮೂಳೆ ಮುರಿದಿದ್ದಷ್ಟೇ ಅಲ್ಲದೇ ಕತ್ತು ಹಿಸುಕಲಾಗಿತ್ತು ಎಂಬುದು ಕೂಡ ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು

ಅತ್ಯಾಚಾರ ಮಾಡಿ ಆಕೆಯ ನಾಲಿಗೆ ಕತ್ತರಿಸಿ ಬೆನ್ನು ಮೂಳೆ ಮುರಿದಿದ್ದರು ಎಂದು ಕುಟುಂಬದವರು ಆರೋಪಿಸಿದ್ದರು, ಆದರೆ ಪೊಲೀಸರು ಇದನ್ನು ನಿರಾಕರಿಸಿ ಆಕೆಯ ಮೈಮೇಲೆ ಯಾವುದೇ ಗಾಯಗಳಿರಲಿಲ್ಲ, ಬೆನ್ನುಮೂಳೆಯೂ ಮುರಿದಿರಲ್ಲಿ, ನಾಲಿಗೆಯನ್ನೂ ಕತ್ತರಿಸಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

ಮರಣೋತ್ತರ ವರದಿಯಲ್ಲಿ ಏನೇನಿದೆ?

ಮರಣೋತ್ತರ ವರದಿಯಲ್ಲಿ ಏನೇನಿದೆ?

ಮರಣೋತ್ತರ ವರದಿಯಲ್ಲಿ ಮುರಿತದ ಬೆನ್ನುಹುರಿ ಉದ್ದಕ್ಕೂ ನರಗಳಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಸಂತ್ರಸ್ತೆಯ ಕುತ್ತಿಗೆಯಲ್ಲಿ ಹಲವು ಗುರುತುಗಳಿದ್ದವು. ಅವು ಕತ್ತು ಹಿಸುಕಲು ಮಾಡಿದ್ದ ಪ್ರಯತ್ನ ಎಂಬುದು ಸಾಬೀತಾಗಿದೆ.

ಸೆಪ್ಟೆಂಬರ್ 14 ರಂದು ನಡೆದಿದ್ದ ಅತ್ಯಾಚಾರ

ಸೆಪ್ಟೆಂಬರ್ 14 ರಂದು ನಡೆದಿದ್ದ ಅತ್ಯಾಚಾರ

ಸೆಪ್ಟೆಂಬರ್ 14 ರಂದು ಯುವತಿ ತನ್ನ ತಾಯಿ ಜೊತೆ ಹುಲ್ಲು ತರಲು ಹೊಲಕ್ಕೆ ಹೋಗಿದ್ದಾಗ, ನಾಲ್ವರು ಕಾಮುಕರು ಆಕೆಯನ್ನು ಎಳೆದೊಯ್ದು ಅತ್ಯಾಚಾರವಸಗಿದ್ದರು. ಬಳಿಕ ಆಕೆಯ ನಾಲಿಗೆ ಕತ್ತರಿಸಿ, ಬೆನ್ನುಮೂಳೆ ಮುರಿದಿದ್ದರು. ಬಳಿಕ ತಾಯಿ ಮತ್ತು ಸ್ಥಳೀಯರು ಸೇರಿ ಆಕೆಯನ್ನು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಯುವತಿ ಕೊನೆಯಿಸಿರೆಳೆದಿದ್ದಾರೆ.

ಹತ್ರಾಸ್ ಅತ್ಯಾಚಾರ ಕೇಸ್: ರಾತ್ರಿ 2.30ಕ್ಕೆ ಸಂತ್ರಸ್ತೆ ಅಂತ್ಯಕ್ರಿಯೆಹತ್ರಾಸ್ ಅತ್ಯಾಚಾರ ಕೇಸ್: ರಾತ್ರಿ 2.30ಕ್ಕೆ ಸಂತ್ರಸ್ತೆ ಅಂತ್ಯಕ್ರಿಯೆ

ಯುವತಿಯ ಮೈಮೇಲೆ ಯಾವುದೇ ಗುರುತುಗಳಿರಲಿಲ್ಲ

ಯುವತಿಯ ಮೈಮೇಲೆ ಯಾವುದೇ ಗುರುತುಗಳಿರಲಿಲ್ಲ

ಅತ್ಯಾಚಾರ ಸಂತ್ರಸ್ತೆ ಮೈಮೇಲೆ ಯಾವುದೇ ಗುರುತುಗಳು ಇರಲಿಲ್ಲ, ಆಕೆಯ ಬೆನ್ನುಮೂಳೆಯೂ ಮುರಿದಿರಲಿಲ್ಲ, ನಾಲಿಗೆಯೂ ಕತ್ತರಿಸಿರಲಿಲ್ಲ, ಹೀಗಿರುವಾಗ ಅತ್ಯಾಚಾರವಾಗಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದರು.

ಪೋಷಕರನ್ನು ಬಿಟ್ಟು ಪೊಲೀಸರಿಂದಲೇ ಅಂತ್ಯಕ್ರಿಯೆ

ಪೋಷಕರನ್ನು ಬಿಟ್ಟು ಪೊಲೀಸರಿಂದಲೇ ಅಂತ್ಯಕ್ರಿಯೆ

ಪೋಷಕರನ್ನು ಮನೆಯಲ್ಲಿಯೇ ಬಂಧಿಮಾಡಿ, ಮಗಳ ಮುಖವನ್ನೂ ತೋರಿಸಿದರೆ ಮಧ್ಯರಾತ್ರಿ 2.30ರ ವೇಳೆಗೆ ಅಂತ್ಯಕ್ರಿಯೆ ನಡೆಸಿದ್ದಾರೆ. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಈ ಕುರಿತು ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.

ಅತ್ಯಾಚಾರಕ್ಕೆ ಸಾಕ್ಷಿ ಇಲ್ಲ, ನಾಲಿಗೆ ತುಂಡುಮಾಡಿಲ್ಲ: ಹತ್ರಾಸ್ ಪೊಲೀಸರ ಹೇಳಿಕೆಅತ್ಯಾಚಾರಕ್ಕೆ ಸಾಕ್ಷಿ ಇಲ್ಲ, ನಾಲಿಗೆ ತುಂಡುಮಾಡಿಲ್ಲ: ಹತ್ರಾಸ್ ಪೊಲೀಸರ ಹೇಳಿಕೆ

English summary
The post-mortem report of the 19-year-old Dalit girl from Hathras who was allegedly gangraped by four upper caste men and brutally assaulted has confirmed that she suffered fracture in her spine and was also strangulated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X