• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಾಜ್ ಮಹಲ್ ಆವರಣದಲ್ಲಿ ನಮಾಜ್ ಗೆ ಪ್ರತಿಯಾಗಿ ಆರತಿ, ಪೂಜೆ!

|
   ತಾಜ್ ಮಹಲ್ ಆವರಣದಲ್ಲಿ ನಮಾಜ್ ಬದಲಾಗಿ ಮಹಿಳೆಯರಿಂದ ಆರತಿ ಪೂಜೆ! | Oneindia Kannada

   ಆಗ್ರಾ, ನವೆಂಬರ್ 19: ಯುನೆಸ್ಕೋ ಪಾರಂಪರಿಕ ಕಟ್ಟಡ, ಪ್ರೇಮ ಸೌಧ ತಾಜ್‌ಮಹಲ್‌ ಆವರಣದಲ್ಲಿರುವ ಮಸೀದಿಯಲ್ಲಿ ಪ್ರತಿನಿತ್ಯ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯ(ಎಎಸ್ಐ) ಆದೇಶ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

   ಶುಕ್ರವಾರ ಮಾತ್ರ ಹೊರಗಿನವರು ನಮಾಜ್ ಲ್ಲಿ ಪಾಲ್ಗೊಳ್ಳಬಹುದು. ಉಳಿದ ದಿನ ಸ್ಥಳೀಯರನ್ನು ಹೊರತುಪಡಿಸಿ ಹೊರಗಿನವರಿಗೆ ಅವಕಾಶವಿಲ್ಲ ಎಂದು ಎಎಸ್ಐ ಆದೇಶದಲ್ಲಿ ತಿಳಿಸಲಾಗಿತ್ತು. ಆದರೆ, ಆದೇಶ ಉಲ್ಲಂಘನೆಯಾಗಿರುವುದನ್ನು ಖಂಡಿಸಿ, ರಾಷ್ಟೀಯ ಬಜರಂಗ ದಳ(ಆರ್ ಬಿಬಿ) ಮಹಿಳಾ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

   ತಾಜ್ ಮಹಲ್ ಸೌಂದರ್ಯ ರಕ್ಷಣೆಗೆ ಪಾಕಿಸ್ತಾನದ ಮಣ್ಣು

   ತಾಜ್ ಮಹಲ್ ಮೂಲಾತಃ ತೇಜೋ ಮಹಲ್ ಎಂಬ ದೇಗುಲವಾಗಿದೆ. ಇದನ್ನು ಗಂಗಾಜಲ ಪ್ರೋಕ್ಷಿಸಿ ಶುದ್ಧೀಕರಣ ಮಾಡಲಾಗುತ್ತದೆ. ಆರತಿ ಬೆಳಗಿ, ಪೂಜೆ ಸಲ್ಲಿಸಲಾಗಿದೆ. ಈ ಪ್ರದೇಶದಲ್ಲಿ ನಮಾಜ್ ಮಾಡುವ ಮೂಲಕ ಅಪವಿತ್ರವಾಗಿದೆ ಎಂದು ಆರ್ ಬಿಡಿಯ ಮಹಿಳಾ ಪಡೆಯ ಜಿಲ್ಲಾ ಅಧ್ಯಕ್ಷರಾದ ಮೀನ್ ದಿವಾಕರ್ ಅವರು ಹೇಳಿದ್ದಾರೆ.

   "ತಾಜ್ ಮಹಲ್ ಪ್ರೇಮಸೌಧವಲ್ಲ, ಪುರಾತನ ದೇಗುಲ"

   ಸ್ಥಳೀಯರು ಶುಕ್ರವಾರದಂದು ನಮಾಜ್ ಮಾಡಬಹುದು. ಭದ್ರತಾ ಕಾರಣಗಳಿಗಾಗಿ ಸ್ಥಳೀಯರನ್ನು ಹೊರತುಪಡಿಸಿ ಉಳಿದವರನ್ನು ಮಸೀದಿ ಒಳಗೆ ತೆರಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

   ಪ್ರತಿ ಶುಕ್ರವಾರ ಇಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ

   ಪ್ರತಿ ಶುಕ್ರವಾರ ಇಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ

   17ನೇ ಶತಮಾನದ ಈ ಪ್ರೇಮ ಸೌಧಕ್ಕೆ ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ತಾಜ್ ಮಹಲ್ ವೀಕ್ಷಣೆ ಉಚಿತವಾಗಿದೆ. ಆದರೆ, ಪ್ರತಿ ಶುಕ್ರವಾರ ಇಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ

   ಸ್ಥಳೀಯರು ಮಧ್ಯಾಹ್ನ 2 ಗಂಟೆಯವರೆಗೆ ಯಾವುದೇ ಶುಲ್ಕ ಪಾವತಿಸದೆ ನಮಾಜ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ.

   ಈ ಹಿಂದೆ ಇತರೆ ದಿನಗಳಲ್ಲಿ ತಾಜ್ ಮಹಲ್ ವೀಕ್ಷಣೆಗೆ ಟಿಕೆಟ್ ಪಡೆದವರು ಯಾರು ಬೇಕಾದರೂ ಮಸೀದಿಗೆ ಭೇಟಿ ನೀಡಿ ನಮಾಜ್ ಸಲ್ಲಿಸಲು ಅವಕಾಶವಿತ್ತು. ಇದೀಗ ಟಿಕೆಟ್ ಇದ್ದರೂ ಕೂಡ ಶುಕ್ರವಾರ ಹೊರತುಪಡಿಸಿ ಮಸೀದಿಗೆ ತೆರಳಲು ಅವಕಾಶವಿಲ್ಲ.

   ಸ್ಮಾರಕದ ನಿರ್ವಾಹಕರು ಯಾರು?

   ಸ್ಮಾರಕದ ನಿರ್ವಾಹಕರು ಯಾರು?

   ಸ್ಮಾರಕದ ಸುರಕ್ಷಣೆ, ಹೊಳಪು, ಪ್ರಚಾರ ಎಲ್ಲದ್ದಕ್ಕೂ ಭಾರತೀಯ ಪುರಾತತ್ವ ಇಲಾಖೆ (ASI) ಕಾರಣವಾಗಿದೆ. ಕೇಂದ್ರ ಸರ್ಕಾರ ಸ್ವಾಮ್ಯ ಈ ಸಂಸ್ಥೆ ಇತ್ತೀಚೆಗೆ ಜಗತ್ ವಿಖ್ಯಾತ ಪ್ರೇಮ ಸೌಧದ ಪರಿಶುದ್ಧ ಬಿಳುಪನ್ನು ಕಾಯ್ದುಕೊಳ್ಳುವ ಪ್ರಕ್ರಿಯೆ ನಡೆಸಲಾಗಿದೆ. ಇದಕ್ಕಾಗಿ ಪಾಕಿಸ್ತಾನದ ಮುಲ್ತಾನಿನಿಂದ ಮಣ್ಣನ್ನು ತಂದು ಬಳಿಯಲು ಆರಂಭಿಸಲಾಗಿದೆ. ಆದರೆ, ಆಗ್ರಾದಲ್ಲಿನ ವಾಯುಮಾಲಿನ್ಯ, ಜಲಮಾಲಿನ್ಯದ ದುಷ್ಪರಿಣಾಮ ತಾಜ್ ಮಹಲ್ ಗೂ ತಟ್ಟಿದೆ. ತಾಜ್ ಮಹಲ್ ಸಂರಕ್ಷಣಾ ಸಮಿತಿ ಹಾಗೂ ಎಎಸ್ಐ ನಿರಂತರವಾಗಿ ತಾಜ್ ಮಹಲ್ 'ತಾಜಾತನ' ಉಳಿಸಿಕೊಳ್ಳಲು ಯತ್ನಿಸುತ್ತಿವೆ.

   ಎಲ್ಲರೂ ಮಸೀದಿಗೆ ಭೇಟಿ ನೀಡುವಂತಿಲ್ಲ

   ಎಲ್ಲರೂ ಮಸೀದಿಗೆ ಭೇಟಿ ನೀಡುವಂತಿಲ್ಲ

   ಎಎಸ್ ಐ ಅಧಿಕಾರಿಗಳು ವಝ್ ಕೆರೆಯ ಆವರಣವನ್ನು ಮುಚ್ಚಿದ್ದಾರೆ, ಪವಿತ್ರ ನಮಾಜ್ ಸಲ್ಲಿಸುವ ಮುನ್ನ ಇಲ್ಲಿ ಶುಚಿಗೊಂಡು ಪ್ರವಾಸಿಗರು ಪ್ರಾರ್ಥನೆಗೆ ತೆರಳುತ್ತಿದ್ದರು ಇದರಿಂದ ನಿರಾಸೆ ಉಂಟಾಗಿದೆ. ಉಳಿದ ದಿನಗಳಲ್ಲಿ ತಾಜ್‌ಮಹಲ್ ವೀಕ್ಷಣೆಗೆ ಟಿಕೆಟ್ ಪಡೆದ ಯಾರು ಬೇಕಾದರೂ ಮಸೀದಿಗೆ ಭೇಟಿ ನೀಡಿ ನಮಾಜ್ ಸಲ್ಲಿಸಲು ಅವಕಾಶವಿತ್ತು.

   ತಾಜ್ ಮಹಲ್ ನಿರ್ವಹಣೆಯನ್ನು ವಕ್ಫ್ ಮಂಡಳಿಗೆ

   ತಾಜ್ ಮಹಲ್ ನಿರ್ವಹಣೆಯನ್ನು ವಕ್ಫ್ ಮಂಡಳಿಗೆ

   ಮಸೀದಿಯ ಇಮಾಮ್ ಹಾಗೂ ಸಿಬ್ಬಂದಿಗೆ ಕೂಡ ಶುಕ್ರವಾರ ಮಾತ್ರ ಬರುವಂತೆ ಸೂಚಿಸಲಾಗಿದೆ. ಮದೀಸಿಯಲ್ಲಿ ಮಪ್ರಾರ್ಥನೆಯ ನೇತೃತ್ವ ವಹಿಸುವ ಇಮಾಮ್ ಸೈಯದ್ ಸಾದಿಕ್ ಅಲಿ ಕುಟುಂಬ ಹಲವು ಸಶಕಗಳಿಂದ ಅಲ್ಲಿದೆ. ಎಎಸ್‌ಐ ನಿರ್ಧಾರ ಬಗ್ಗೆ ಕುಟುಂಬ ಅಚ್ಚರಿ ವ್ಯಕ್ತಪಡಿಸಿದೆ. ಈಗ ಮತ್ತೊಮ್ಮೆ ತಾಜ್ ಮಹಲ್ ನಿರ್ವಹಣೆಯನ್ನು ವಕ್ಫ್ ಮಂಡಳಿಗೆ ನೀಡುವ ಬಗ್ಗೆ ಕೂಗೆದ್ದಿದೆ.

   ಈ ಹಿಂದೆ, ತಾಜ್ ಮಹಲ್ ನ ಉಸ್ತುವಾರಿ ವಹಿಸಿಕೊಂಡಿರುವ ಮುತವಾಲಿಗಳು ರಾಜ್ಯ ಸುನ್ನಿ ವಕ್ಫ್ ಬೋರ್ಡ್ ಗೆ ಮನವಿ ಸಲ್ಲಿಸಿ ತಾಜ್ ಮಹಲ್ ನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿ ಅಜಂ ಖಾನ್ ರನ್ನು ಮುಖ್ಯಸ್ಥರನ್ನಾಗಿಸಿ ಎಂದಿದ್ದರು

   ಸುನ್ನಿ- ಶಿಯಾ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು

   ಸುನ್ನಿ- ಶಿಯಾ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು

   ಸುನ್ನಿ ಮುಸ್ಲಿಮರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿಯಾ ಕಾನೂನು ಸಮಿತಿಯ ಮೌಲಾನಾ ಯಸೂಬ್ ಅಬ್ಬಾಸ್ ಅವರು ಮಾತನಾಡಿ, ಮಮ್ತಾಜ್ ಮಹಲ್ ವಿಷಯಕ್ಕೆ ಬಂದರೆ, ಮಮ್ತಾಜ್ ಓರ್ವ ಶಿಯಾ ಪಂಗಡದ ಮಹಿಳೆಯಾಗಿದ್ದಳು. ಅಲ್ಲದೆ ತಾಜ್ ಮಹಲ್ ದೇಶದ ಆಸ್ತಿಯಾಗಿದ್ದು, ಇದನ್ನು ಸುನ್ನಿ ಅಥವಾ ಶಿಯಾ ಸಮಿತಿಗೆ ವಹಿಸಿಕೊಡುವುದು ಸರಿಯಲ್ಲ ಎಂದಿದ್ದಾರೆ. ಶಿಯಾ ಹಾಗು ಸುನ್ನಿ ಬೋರ್ಡ್ ಗಳಿಂದ ಮಸೀದಿ, ಮದರಸಾಗಳನ್ನು ನಿರ್ವಹಿಸಲು ಅಗುತ್ತಿಲ್ಲ ಇನ್ನು ತಾಜ್ ಮಹಲ್ ಹೊಣೆ ಹೇಗೆ ಹೊರುತ್ತಾರೆ ಎಂದು ಬಿಜೆಪಿ ಮುಖಂಡ ಲಕ್ಷ್ಮಿಕಾಂತ್ ಪ್ರಶ್ನಿಸಿದ್ದರು.

   English summary
   Rashtriya Bajarang Dal(RBD)s women wing activists on Sunday performed 'Aarti' and 'Gangaja' in the Taj Mahal in protest against alleged violation of the ASI norms which restrict the offerin of 'namaz' or prayer inside the premises of UNesco World Heritage Site
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more