ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಿಪ್ಯಾಟ್ ಹಿಡಿದು ಮಿಂಚಿದ್ದ ಹಳದಿ ಸೀರೆ ಚೆಲುವೆ ಯಾರು?

|
Google Oneindia Kannada News

ಲಕ್ನೋ, ಮೇ 14 : ಲಕ್ನೋನಲ್ಲಿ ಲೋಕಸಭೆ ಮತಗಟ್ಟೆಯಲ್ಲಿ ಹಳದಿ ಸೀರೆಯುಟ್ಟು ಮಿಂಚಿ ಎಲ್ಲರ ಚಿತ್ತ ಸೆಳೆದಿದ್ದ ಚುನಾವಣಾ ಸಿಬ್ಬಂದಿ ರೀನಾ ಯಾರು?

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಲೋಕಸಭೆ ಚುನಾವಣೆ ಮತದಾನದ ವೇಳೆ ಹಳದಿ ಸೀರೆಯುಟ್ಟ ಮಹಿಳೆ ಸುದ್ದಿಗೆ ಬಂದಿದ್ದಾರೆ. ಫೇಸ್ಬುಕ್, ವಾಟ್ಸಪ್, ಇನ್ಸ್ಟ್ರಾಗ್ರಾಮ್ ಸೇರಿದಂತೆ ಟಿಕ್ ಟಾಕ್ ನಲ್ಲಿ ಕೂಡ ಮಹಿಳೆ ಪ್ರಸಿದ್ಧಿ ಪಡೆದಿದ್ದಾರೆ.
ರೀನಾ ದ್ವಿವೇದಿ ಮೂಲತಃ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆ ನಿವಾಸಿ ಮಾಧ್ಯಮವೊಂದರ ಜೊತೆ ಮಾತನಾಡುವ ವೇಳೆ ತನ್ನ ಖಾಸಗಿ ಬದುಕಿನ ಬಗ್ಗೆಯೂ ಹೇಳಿಕೊಂಡಿದ್ದಾರೆ.

polling officers in Yellow saree going viral in social media

ರೀನಾ ಈಗ ಲಕ್ನೋದ ಪಿಡಬ್ಲ್ಯೂಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. 2004 ರಲ್ಲಿ ಅದೇ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ಸಂಜಯ್ ಜೊತೆ ಮದುವೆಯಾಗಿದ್ದರು. ಈಗ ರೀನಾ ಮಗನಿಗೆ 13 ವರ್ಷ.

ಮೋದಿ ಸರ್ಕಾರ 'ಮುಳುಗುತ್ತಿರುವ ಹಡಗು' ಎಂದು ಮಾಯಾವತಿ ಟೀಕೆಮೋದಿ ಸರ್ಕಾರ 'ಮುಳುಗುತ್ತಿರುವ ಹಡಗು' ಎಂದು ಮಾಯಾವತಿ ಟೀಕೆ

ಬಾಲ್ಯದಿಂದಲೂ ಫಿಟ್‌ನೆಸ್‌ ಗೆ ಮಹತ್ವ ನೀಡುತ್ತಿದ್ದ ರೀನಾ ಬಟ್ಟೆಗಳನ್ನು ಆಲೋಚನೆ ಮಾಡಿ ಆಯ್ಕೆ ಮಾಡ್ತಾರಂತೆ. ಹಾಗಾಗಿಯೇ ನಾನು ಸುಂದರವಾಗಿ ಕಾಣ್ತೇನೆ ಎನ್ನುತ್ತಾರೆ.

ಕಚೇರಿಗೆ ಸುಂದರವಾಗಿ ರೆಡಿಯಾಗಿ ಬರುವುದು ನನ್ನ ಅಭ್ಯಾಸ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕ್ತಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಹಾಗೆಯ ಭೋಜ್‌ಪುರಿ ಚಿತ್ರದಲ್ಲೂ ನಟಿಸಲು ಅವಕಾಶ ಸಿಕ್ಕಿತ್ತು ಆದರೆ ಪುತ್ರನ ವಿದ್ಯಾಭ್ಯಾಸವೂ ನನಗೆ ಮುಖ್ಯ ಹಾಗಾಗಿ ಆಫರ್ ತಿರಸ್ಕರಿಸಿದ್ದೆ ಎಂದಿದ್ದಾರೆ.ಮೇ 19ರಂದು ಗಂಡನ ಜೊತೆಗೆ ಮತದಾನ ಮಾಡಲು ಹೋಗುತ್ತಿದ್ದೇನೆ ಎಂದೂ ತಿಳಿಸಿದ್ದಾರೆ.

English summary
From a junior assistant in state public works department to a social media star Reena Dwivedi has got an instant recognition as the woman in Yellow saree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X