ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಭದ್ರತೆ ಕರ್ತವ್ಯ ಮುಗಿಸಿ ವಾಪಸ್ಸಾಗುತ್ತಿದ್ದ ಪೇದೆಯ ಹೊಡೆದು ಕೊಂದ ಜನ

|
Google Oneindia Kannada News

ವಾರಣಾಸಿ (ಉತ್ತರ ಪ್ರದೇಶ), ಡಿಸೆಂಬರ್ 30: ಉತ್ತರ ಪ್ರದೇಶದಲ್ಲಿ ಗುಂಪು ಹತ್ಯೆಗಳು ನಿಲ್ಲುತ್ತಿಲ್ಲ. ಕೆಲವು ದಿನಗಳ ಹಿಂದಷ್ಟೆ ಎಸ್‌ಐ ಒಬ್ಬರನ್ನು ಕೊಂದಿದ್ದ ಜನ ಈಗ ಮತ್ತೊಬ್ಬರನ್ನು ಕೊಂಡಿದ್ದಾರೆ.

ಮೋದಿ ಕಾರ್ಯಕ್ರಮದ ಭದ್ರತೆ ಕರ್ತವ್ಯ ಮುಗಿಸಿ ವಾಪಸ್ಸಾಗುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್‌ ಒಬ್ಬರನ್ನು ಪ್ರತಿಭಟನಾ ನಿರತ ಗುಂಪೊಂದು ಗಾಜಿಯಾಬಾದ್‌ನಲ್ಲಿ ಹತ್ಯೆ ಮಾಡಿದೆ. ಮೃತ ಪೊಲೀಸ್ ಕಾನ್‌ಸ್ಟೇಬಲ್‌ ಅವರನ್ನು ಸುರೇಶ್ ವತ್ಸಾ ಎಂದು ಗುರುತಿಸಲಾಗಿದೆ. ಇವರು ಕರೀಂಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕಾನ್‌ಸ್ಟೇಬಲ್ ಸುರೇಶ್ ವತ್ಸಾ ಅವರು ತಮ್ಮದೇ ಠಾಣೆಯ ಇತರ ನಾಲ್ಕು ಸಿಬ್ಬಂದಿ ಜೊತೆ ಐಐಟಿ ಮೈದಾನದಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮದ ಭದ್ರತಾ ಕರ್ತವ್ಯ ಮುಗಿಸಿ ವಾಪಸ್ಸಾಗುವ ವೇಳೆ, ಗಾಜಿಯಾಬಾದ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ನಿಷಾದ್ ಪಕ್ಷದ ಕೆಲವು ಸದಸ್ಯರು ಅವರನ್ನು ಅಡ್ಡಗಟ್ಟಿ ಥಳಿಸಿ ಕೊಂದಿದ್ದಾರೆ.

Police returning from Modi security lynched by mob in Uttar Pradesh

ಮೃತ ಕಾನ್‌ಸ್ಟೇಬಲ್ ಸುರೇಶ್ ವತ್ಸಾ ಕುಟುಂಬಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು 50 ಲಕ್ಷ ಪರಿಹಾರ ಮತ್ತು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ಘೋಷಣೆ ಮಾಡಿದ್ದಾರೆ.

ಕೆಲವು ವಾರಗಳ ಹಿಂದೆ ಅಷ್ಟೆ ಉತ್ತರ ಪ್ರದೇಶದ ಬುಲಂದ್‌ಶಹರ್ ನಲ್ಲಿ ಎಸ್‌ಐ ಒಬ್ಬರನ್ನು ಉದ್ರಿಕ್ತ ಗುಂಪೋಂದು ಹತ್ಯೆ ಮಾಡಿತ್ತು ಇದು ದೇಶದಾದ್ಯಂತ ಸುದ್ದಿಯಾಗಿತ್ತು, ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಪ್ರಶ್ನೆಗೆ ಗುರಿಯಾಗಿತ್ತು. ಅದಾದ ಕೆಲವು ವಾರಗಳ ಬಳಿಕ ಈಗ ಮತ್ತೊಂದು ಅಂತಹುದೇ ಘಟನೆ ಘಟಿಸಿದೆ.

English summary
Police-constable killed by mob in Uttar Pradesh's Ghaziabad. Constable Suresh Vatsa returning from Modi program security duty. UP government announced 50 lakh to the Suresh Vatsa's family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X