ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಹಾಕದವರಿಗೆ ದಂಡ ಹಾಕುತ್ತಿದ್ದ ಪೊಲೀಸರಿಗೆ ದಂಡ!

|
Google Oneindia Kannada News

ಲಕ್ನೋ, ಆಗಸ್ಟ್ 11 : ಮಾಸ್ಕ್ ಹಾಕದೇ ಬೈಕ್, ಸೈಕಲ್‌ನಲ್ಲಿ ಸಂಚಾರ ನಡೆಸುತ್ತಿದ್ದ ಜನರಿಗೆ ದಂಡ ವಿಧಿಸುತ್ತಿದ್ದ ಪೊಲೀಸರಿಗೆ ದಂಡ ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬುಂಡಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ಬರುವ ವಾಹನ ಸವಾರರು ಮಾಸ್ಕ್ ಹಾಕದಿದ್ದರೆ 500 ರೂ. ದಂಡ ಹಾಕುತ್ತಿದ್ದರು. ಆದರೆ, ಅವರೇ ಮಾಸ್ಕ್ ಹಾಕಿರಲಿಲ್ಲ.

ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಲಭ್ಯ ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಲಭ್ಯ

ಇದನ್ನು ಗಮನಿಸಿದ್ದ ಜನರು ಫೋಟೋ ತೆಗೆದು ಎಸ್‌ಪಿಗೆ ಕಳಿಸಿದ್ದರು. ಎಸ್ಪಿ ಪರಿಶೀಲನೆಗೆ ಬಂದಾಗ ಸಿಬ್ಬಂದಿಯೇ ಮಾಸ್ಕ್ ಹಾಕದಿರುವುದು ತಿಳಿದಿದೆ. ಆದ್ದರಿಂದ ಅವರಿಗೆ 500 ರೂ. ದಂದ ಹಾಕಲಾಗಿದೆ.

ಸೂರತ್‌ನಲ್ಲಿ ವಜ್ರದ ಮಾಸ್ಕ್‌ ಮಾರಾಟ: 1.5 ಲಕ್ಷದಿಂದ 4 ಲಕ್ಷ ರುಪಾಯಿ ಸೂರತ್‌ನಲ್ಲಿ ವಜ್ರದ ಮಾಸ್ಕ್‌ ಮಾರಾಟ: 1.5 ಲಕ್ಷದಿಂದ 4 ಲಕ್ಷ ರುಪಾಯಿ

Police Officer Fined For Not Wearing Mask

ಕೋವಿಡ್ ಭೀತಿ ಹಿನ್ನಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಂಚಾರ ನಡೆಸುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಉತ್ತರ ಪ್ರದೇಶ ಸರ್ಕಾರ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ.

ಅಂಚೆ ಕಚೇರಿಯಲ್ಲೇ ಸ್ಯಾನಿಟೈಸರ್, ಮಾಸ್ಕ್ ಮಾರಾಟ ಅಂಚೆ ಕಚೇರಿಯಲ್ಲೇ ಸ್ಯಾನಿಟೈಸರ್, ಮಾಸ್ಕ್ ಮಾರಾಟ

ಜನರಿಗೆ ತಿಳುವಳಿಕೆ ಹೇಳುವ ಪೊಲೀಸರು ಸಹ ನಿಯಮಗಳನ್ನು ಪಾಲನೆ ಮಾಡಬೇಕು. ಅವರು ಕಾನೂನಿಗಿಂತ ದೊಡ್ಡವರಲ್ಲ ಎಂಬ ಸಂದೇಶವನ್ನು ಕಳಿಸಲು ಪೊಲೀಸ್ ಸಿಬ್ಬಂದಿಗೆ ದಂಡ ಹಾಕಲಾಗಿದೆ ಎಂದು ಎಸ್‌ಪಿ ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣ ದಾಖಲಾದ ದಿನದಿಂದ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಹ ಕರೆ ನೀಡಿದ್ದಾರೆ.

English summary
In Uttar Pradesh a police officer issuing challans to people for not wearing masks fined 500 rs for not wearing mask. He is not wearing mask during superintendent of police visit to spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X