ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶಿಯಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಆರಂಭಿಸಲಿರುವ ಮೋದಿ

|
Google Oneindia Kannada News

Recommended Video

ನರೇಂದ್ರ ಮೋದಿ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಶನಿವಾರ ಭೇಟಿ | Narendra Modi

ನವದೆಹಲಿ, ಜುಲೈ 6: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಶನಿವಾರ ಭೇಟಿ ನೀಡಲಿದ್ದು, ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದ ಲೋಕಸಭೆಯ ಚುನಾವಣೆಯಲ್ಲಿ ಪಕ್ಷ ಭರ್ಜರಿ ಜಯಗಳಿಸಿದ ಬಳಿಕ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೆಯ ಬಾರಿ.

ಈ ಬಾರಿ ಸದಸ್ಯತ್ವ ನೋಂದಣಿ ಜೊತೆಗೆ ಬಿಜೆಪಿ ಮತ್ತೇನು ಮಾಡಲಿದೆ?ಈ ಬಾರಿ ಸದಸ್ಯತ್ವ ನೋಂದಣಿ ಜೊತೆಗೆ ಬಿಜೆಪಿ ಮತ್ತೇನು ಮಾಡಲಿದೆ?

'ನಮ್ಮ ಸ್ಫೂರ್ತಿಯಾದ ಡಾ. ಶ್ಯಾಮ ಪ್ರಸಾದ್ ಮೂಖರ್ಜಿ ಅವರ ಜನ್ಮದಿನದಂದು ಬಿಜೆಪಿಯ ಸದಸ್ಯತ್ವ ನೋಂದಣಿ ಆರಂಭವಾಗಲಿದೆ. ಈ ಕಾರ್ಯಕ್ರಮವನ್ನು ನಾನೂ ಕಾಶಿಯಿಂದ ಆರಂಭಿಸುತ್ತೇನೆ. ಇದು ಅಭಿಯಾನವು ಜನರನ್ನು ಎಲ್ಲ ಸಂದರ್ಭದಲ್ಲಿಯೂ ಬಿಜೆಪಿ ಕುಟುಂಬದೊಂದಿಗೆ ಸಂಪರ್ಕಿಸುತ್ತದೆ' ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

PM Narendra Modi Varansi kashi bjp membership

ವಾರಣಾಸಿಗೆ ಬೆಳಿಗ್ಗೆ 10 ಗಂಟೆಗೆ ಬರಲಿರುವ ಮೋದಿ ಅವರು, ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್, ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ಮಹೇಂದ್ರ ನಾಥ್ ಪಾಂಡೆ ಅವರನ್ನು ಸ್ವಾಗತಿಸಲಿದ್ದಾರೆ. ಇದರ ಬಳಿಕ ಮೋದಿ ಅವರನ್ನು ಗಿಡವೊಂದನ್ನು ನೆಡಲಿದ್ದಾರೆ.

ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

'ನಗರದ ಸಾಂಸ್ಕೃತಿಕ ಹೆಗ್ಗುರುತು ದಶಶ್ವಮೇಧ ಘಾಟ್‌ನ ಮನ್ ಮೊಹಲ್‌ನಲ್ಲಿರುವ ವರ್ಚ್ಯುಯಲ್ ಮ್ಯೂಸಿಯಂಗೆ ನಾನು ಭೇಟಿ ನೀಡಲಿದ್ದೇನೆ. ಅದು ನಮ್ಮ ಮಹಾನ್ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ' ಎಂದು ಮೋದಿ ಶುಕ್ರವಾರ ಟ್ವೀಟ್ ಮಾಡಿದ್ದರು.

English summary
Prime Minister Narendra Modi on Saturday will visit Varanasi to launch a membership drive for the BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X