ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿಯಲ್ಲಿ ತಮಗೇ ಮತ ಹಾಕಿಕೊಳ್ಳುವ ಅದೃಷ್ಟ ಮೋದಿಗಿಲ್ಲ!

|
Google Oneindia Kannada News

Recommended Video

ವಾರಣಾಸಿಯಲ್ಲಿ ನರೇಂದ್ರ ಮೋದಿ ತಮಗೆ ತಾವೇ ಮತ ಹಾಕಿಕೊಳ್ಳುವ ಅದೃಷ್ಟ ಇಲ್ಲ | Lok Sabha Elections 2019

ವಾರಣಾಸಿ, ಏಪ್ರಿಲ್ 23: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಿದ್ದಾರೆ. ಆದರೆ ತಮಗೇ ತಾವು ಮತಚಲಾಯಿಸಿಕೊಳ್ಳುವ ಅದೃಷ್ಟ ಅವರಿಗಿಲ್ಲ!

ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಅಹ್ಮದಾಬಾದಿನಲ್ಲಿ ಮತದಾನದ ಹಕ್ಕು ಪಡೆದಿದ್ದು, ಈಗಾಗಲೇ ಅವರು ಮತಚಲಾಯಿಸಿದ್ದಾರೆ. ಆದ್ದರಿಂದ ಅವರು ವಾರಣಾಸಿಯಲ್ಲಿ ಮತಚಲಾಯಿಸುವುದಕ್ಕೆ ಆಗುವುದಿಲ್ಲ.

ಉಗ್ರರ ಐಇಡಿಗಿಂತ, ಮತದಾರರ ವೋಟಿಗೇ ಹೆಚ್ಚು ಶಕ್ತಿ: ಮೋದಿಉಗ್ರರ ಐಇಡಿಗಿಂತ, ಮತದಾರರ ವೋಟಿಗೇ ಹೆಚ್ಚು ಶಕ್ತಿ: ಮೋದಿ

2014 ರ ಲೋಕಸಭಾ ಚುನಾವಣೆಯಲ್ಲೂ ವಾರಣಾಸಿ ಮತ್ತು ವಡೋದರಾ ಎರಡು ಕ್ಷೇತ್ರಗಳಿಂದ ಮೋದಿ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಎರಡೂ ಕ್ಷೇತ್ರಗಳಲ್ಲೂ ಗೆದ್ದಿದ್ದ ಮೋದಿ, ವಾರಣಾಸಿಯನ್ನು ತಮ್ಮ ಬಳಿಯೇ ಉಳಿಸಿಕೊಡು ವಡೋದರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು.

PM Narendra Modi can not cast his own vote in Varanasi

ಈ ಬಾರಿ ಅವರು ಕೇವಲ ವಾರಣಾಸಿಯಿಂದ ಮಾತ್ರ ಸ್ಪರ್ಧಿಸುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿ ಕಾಂಗ್ರೆಸ್ ಗೆ ತನ್ನ ಬೆಂಬಲವಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂಬೆಲ್ಲ ವದಂತಿ ಹಬ್ಬಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಮೋದಿ ಕರೆಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಸಾರ್ವಜನಿಕರಿಗೆ ಮೋದಿ ಕರೆ

ಟಿಕೆಟ್ ನೀಡಿದರೆ ನಾನೂ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ಧ ಎಂದು ಲೋಕಸಭೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Lok sabha elections 2019: PM Narendra Modi can not cast his own vote for him in varanasi, Uttar Pradesh. Because he has voter right in Ahmedabad Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X