ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ ಲೋಕ ಸಮರ ಗೆಲ್ಲಲು ಬಿಜೆಪಿಯಿಂದ 40 ಸ್ಟಾರ್ ಪ್ರಚಾರಕರು

|
Google Oneindia Kannada News

ಲಕ್ನೋ, ಮಾರ್ಚ್ 26: ಲೋಕಸಭಾ ಚುನಾವಣಾ ಕಾವು ದಿನೇ ದಿನೇ ಏರುತ್ತಿದ್ದು, ದೇಶದ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಸಮರ ಗೆಲ್ಲಲು ಬಿಜೆಪಿ ಸಾಕಷ್ಟು ಕಸರತ್ತು ನಡೆಸಿದೆ. 80 ಲೋಕಸಭಾ ಸ್ಥಾನಗಳಲ್ಲಿ ಹೇಗೆಲ್ಲ ಪ್ರಚಾರ ನಡೆಸಬೇಕು ಎಂಬುದರ ಬಗ್ಗೆ ಕಾರ್ಯತಂತ್ರ ರೂಪಿಸಿದ್ದು, ಇದಕ್ಕಾಗಿ 40 ಸ್ಟಾರ್​ಪ್ರಚಾರಕರ ಪಟ್ಟಿಯನ್ನು ಮಂಗಳವಾರದಂದು ಬಿಡುಗಡೆ ಮಾಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ಶಾ ಸೇರಿದಂತೆ ಅನೇಕ ಪ್ರಮುಖ ನಾಯಕರ ಹೆಸರುಗಳನ್ನು ಸೇರಿಸಲಾಗಿದೆ. 2014ರ ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳಲ್ಲಿ ಜಯ ದಾಖಲಿಸಿತ್ತು. ರಾಯ್​ಬರೇಲಿ ಹಾಗೂ ಅಮೇಥಿಯಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಕಂಡಿತ್ತು. 40 ಸದಸ್ಯರಿರುವ ಪಟ್ಟಿಯಲ್ಲಿ ರಾಜನಾಥ್​ ಸಿಂಗ್​, ನಿತಿನ್​ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಉಮಾ ಭಾರತಿ ಸೇರಿದಂತೆ ಅನೇಕರಿದ್ದಾರೆ.

PM Narendra Modi, Amit Shah highlight BJPs list of 40 star campaigners for UP

ಮತದಾನದ ಅರಿವು ಮೂಡಿಸಲು ಸೆಲೆಬ್ರಿಟಿಗಳಿಗೆ ಮೋದಿ ಮನವಿಮತದಾನದ ಅರಿವು ಮೂಡಿಸಲು ಸೆಲೆಬ್ರಿಟಿಗಳಿಗೆ ಮೋದಿ ಮನವಿ

ಪ್ರಧಾನಿ ಮೋದಿ ಅವರು ವಾರಣಾಸಿಯಿಂದ, ಗೃಹ ಸಚಿವರಾದ ರಾಜನಾಥ್​ ಸಿಂಗ್ ಅವರು ರಾಜಧಾನಿ ಲಕ್ನೋದಿಂದ, ಸ್ಮೃತಿ ಇರಾನಿ ಅವರು ಅಮೇಥಿಯಿಂದ ಕಣಕ್ಕಿಳಿದಿದ್ದಾರೆ. ಮುಖ್ಯವಾಗಿ ಬಿಎಸ್ ಪಿ ಹಾಗೂ ಎಸ್ಪಿ ಮೈತ್ರಿ ಅಭ್ಯರ್ಥಿಗಳನ್ನು ಗುರಿಯನ್ನಾಗಿಸಿಕೊಂಡು, ಹಿಂದುಪರ ಮತದಾರರನ್ನು ಓಲೈಕೆ ಮಾಡಲು ಬೇಕಾದ ಕಾರ್ಯತಂತ್ರಕ್ಕೆ ಅನುಗುಣವಾಗಿ ಪ್ರಚಾರ ಕಾರ್ಯ ನಡೆಸಲಾಗುತ್ತದೆ.

English summary
The bigwigs of Bharatiya Janata Party (BJP) will cover the length and breadth of Uttar Pradesh to campaign for the party for the upcoming Lok Sabha election. In a list of star campaigners for the state taken out on Tuesday, PM Narendra Modi and Amit Shah figured prominently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X