ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಜ್ವಲ ಯೋಜನೆ 2.0 ಬಗ್ಗೆ ನೀವು ತಿಳಿಯಬೇಕಾದ ಕೆಲವು ಸಂಗತಿ

|
Google Oneindia Kannada News

ಲಕ್ನೋ, ಆಗಸ್ಟ್ 10:ಪ್ರಧಾನಿ ನರೇಂದ್ರ ಮೋದಿ 'ಉಜ್ವಲ ಯೋಜನೆ 2.0'ಗೆ ಇಂದು ಚಾಲನೆ ನೀಡಿದ್ದಾರೆ. Ujjwala Yojana 2.0 ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಉಜ್ವಲ ಯೋಜನೆಯನ್ನು ಹೊಸ ಪ್ಯಾಕೇಜಿಂಗ್‌ನೊಂದಿಗೆ ಆರಂಭಿಸಲಿದೆ.

ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸುವ ಯೋಜನೆ ಇದಾಗಿದೆ . ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಜ್ವಲ ಯೋಜನೆ 2.0ಕ್ಕೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಿಂದ ಚಾಲನೆ ನೀಡಲಿದ್ದಾರೆ. Ujjwala Scheme 2.0 ಅಡಿಯಲ್ಲಿ, ಫಲಾನುಭವಿಗೆ ಉಚಿತ ಗ್ಯಾಸ್ ಸಂಪರ್ಕ, ಗ್ಯಾಸ್ ಸ್ಟೋವ್ ಜೊತೆಗೆ ಮೊದಲ ಬಾರಿಗೆ ತುಂಬಿದ ಸಿಲಿಂಡರ್ ದೊರೆಯಲಿದೆ.

ಮಂಗಳವಾರ ಉತ್ತರ ಪ್ರದೇಶದ ಮಹೋಬಾ ಜಿಲ್ಲೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ ಚಾಲನೆ ನೀಡಿದ್ದು ಇಲ್ಲಿನ ಫಲಾನುಭವಿಗಳು ಎಲ್​ಪಿಜಿ ಗ್ಯಾಸ್​ ಸಂಪರ್ಕ ಪಡೆಯಲಿದ್ದಾರೆ. ಹಾಗೇ, ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದವನ್ನೂ ನಡೆಸಲಿದ್ದಾರೆ.

 PM Modi Launches Ujjwala Yojana 2.0: What Is Ujjwala Yojana, Eligibility, Benefits And How To Apply In Kannada

2017 ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರದ ಉಜ್ವಲ ಯೋಜನೆಯನ್ನು ಸಾಕಷ್ಟು ಚರ್ಚಿಸಲಾಯಿತು ಮತ್ತು ಇದು ಬಿಜೆಪಿಯ ದೊಡ್ಡ ಗೆಲುವಿಗೆ ಕಾರಣವಾಗಿತ್ತು.

ಆದರೆ, ಉಜ್ವಲ ಯೋಜನೆಯ ಮೊದಲ ಆವೃತ್ತಿಯಲ್ಲಿ, ಸರ್ಕಾರವು LPG ಸಂಪರ್ಕಗಳಿಗೆ ರೂ 1600 (ಠೇವಣಿ ಹಣ) ದ ಆರ್ಥಿಕ ಸಹಾಯವನ್ನು ಮಾತ್ರ ನೀಡುತ್ತಿತ್ತು. ಈ ಯೋಜನೆಯಡಿ, ಗ್ಯಾಸ್ ಸಂಪರ್ಕಗಳನ್ನು ಪಡೆಯುವ ಕುಟುಂಬಗಳು ಯಾವುದೇ ಬಡ್ಡಿ ಇಲ್ಲದೆ ಸ್ಟೌವ್ ಮತ್ತು ಸಿಲಿಂಡರ್‌ಗಳಿಗಾಗಿ ಸಾಲ ತೆಗೆದುಕೊಳ್ಳಬಹುದಾಗಿತ್ತು.

Ujjwala Scheme 2.0 ಯೋಜನೆಯ ಅಡಿ ಕೇಂದ್ರ ಸರ್ಕಾರ ಈ ಆರ್ಥಿಕ ವರ್ಷದಲ್ಲಿ ಸುಮಾರು ಒಂದು ಕೋಟಿ ಗ್ಯಾಸ್ ಸಂಪರ್ಕ ಬಡವರಿಗೆ ಉಚಿತವಾಗಿ ಕಲ್ಪಿಸುವ ಗುರಿ ಹೊಂದಿದೆ.

ಇಂದಿಗೆ ಸುಮಾರು ಐದು ವರ್ಷಗಳ ಹಿಂದೆ ಉತ್ತರ ಪ್ರದೇಶ ಚುನಾವಣೆಗಳಿಗೂ ಮುನ್ನ ಪ್ರಧಾನಿ ಮೋದಿ ಮೇ 1, 2016ರಲ್ಲಿ ರಾಜ್ಯದ ಬಲಿಯಾ ಜಿಲ್ಲೆಯ ಮೂಲಕ ಈ ಯೋಜನೆಯ ಮೊದಲ ಆವೃತ್ತಿಗೆ ಚಾಲನೆ ನೀಡಿದ್ದರು.

ಹೆಸರು ಉಲ್ಲೇಖಿಸದಿರಲು ಮನವಿ ಮಾಡಿರುವ ಅಧಿಕಾರಿಯೊಬ್ಬರ ಪ್ರಕಾರ, ಉಜ್ವಲಾ 2.0 ಅಡಿ ರೂ.800ಕ್ಕಿಂತ ಅಧಿಕ ಬೆಲೆಯ ಸಿಲಿಂಡರ್ ಹಾಗೂ ಒಂದು ಗ್ಯಾಸ್ ಸ್ಟೋವ್ ಉಚಿತವಾಗಿ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದು:
ಫ್ರೀ ಕಾಸ್ಟ್ ರಿಫಿಲ್ ಹಾಗೂ ಸ್ಟೋವ್ ಜೊತೆಗೆ ಡಿಪಾಸಿಟ್ ಪ್ರೀ ಗ್ಯಾಸ್ ಕನೆಕ್ಷನ್ ಪಡೆಯಲು ಈ ಯೋಜನೆಗೆ ಹೊಸದಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇರಲಿದೆ. ಈ ಕುರಿತು ಮಾತನಾಡಿರುವ ಅಧಿಕಾರಿಗಳು ಒಂದು ವಲಸಿಗರ ಕುಟುಂಬಕ್ಕೆ ಪ್ರತ್ಯೇಕ ಗ್ಯಾಸ್ ಸಂಪರ್ಕ ಕೂಡ ಸಿಗಲಿದೆ ಎಂದಿದ್ದಾರೆ. ಈ ಕುರಿತು ಹೇಳಿರುವ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಕುಟುಂಬಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ಈ ಕುರಿತು ಘೋಷಿಸಲಾಗಿದೆ:
ಈ ಬಾರಿಯ ಬಜೆಟ್ ನಲ್ಲಿ ಈ ಯೋಜನೆಯ ಉದ್ದೇಶವನ್ನು ಘೋಷಿಸಲಾಗಿತ್ತು. ಫೆಬ್ರುವರಿ 1, 2021 ರ ತಮ್ಮ ಬಜೆಟ್ ಭಾಷಣದಲ್ಲಿ ಈ ಕುರಿತು ಉಲ್ಲೇಖಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೋಟ್ಯಾಂತರ ಹೊಸ ಲಾಭಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದರು. ಈ ಕುರಿತು ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದ ನಿರ್ಮಲಾ ಸೀತಾರಾಮನ್, ಈಗಾಗಲೇ ಸುಮಾರು 8 ಕೋಟಿ ಲಾಭಾರ್ಥಿಗಳನ್ನು ಹೊಂದಿರುವ ಉಜ್ವಲಾ ಯೋಜನೆಗೆ ಹೊಸದಾಗಿ ರುಮಾರು 1 ಕೋಟಿ ಅಧಿಕ ಲಾಭಾರ್ಥಿಗಳನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದರು.

English summary
Prime Minister Narendra Modi will, at 12:30pm on Tuesday, launch Ujjwala scheme 2.0 via video conferencing. On the occasion, beneficiaries from Uttar Pradesh’s Mahoba will received liquefied petroleum gas (LPG) cylinder connections. Union petroleum minister Hardeep Singh Puri and UP chief minister Yogi Adityanath will also attend the event
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X