ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಿತ್ರ ಸ್ನಾನ, ಪೂಜೆ ಬಳಿಕ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ ಪ್ರಧಾನಿ ಮೋದಿ

|
Google Oneindia Kannada News

ವಾರಣಾಸಿ, ಡಿಸೆಂಬರ್ 13: ಉತ್ತರ ಪ್ರದೇಶದ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, 339 ಕೋಟಿ ವೆಚ್ಚದ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ. ಈ ಯೋಜನೆ ಮೂಲಕ ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾ ಘಾಟ್‌ಗಳ ನಡುವೆ ಸಂಪರ್ಕ ಕಲ್ಪಿಸಲಾಗಿದೆ.

ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆಗೂ ಮೊದಲು ಪವಿತ್ರ ಗಂಗೆಯಲ್ಲಿ ಮಿಂದೆದ್ದ ಪ್ರಧಾನಿ ಮೋದಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಗರ್ಭಗುಡಿಯ ಒಳಗೆ, ಅವರು ಕಾಶಿ ವಿಶ್ವನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕಾಂತ್ ಮಿಶ್ರಾ ಸಹಾಯದೊಂದಿಗೆ ಪ್ರಾರ್ಥನೆ ಸಲ್ಲಿಸಿದರು.

ಗಂಗೆಯಲ್ಲಿ ಪವಿತ್ರ ಸ್ನಾನ, ಕಾಲ ಭೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದು, ಸಾಮಾನ್ಯ ವ್ಯಕ್ತಿಯಿಂದ ಪಗ್ಡಿ (ಶಿರವಸ್ತ್ರ) ಸ್ವೀಕರಿಸುವುದು ಹೀಗೆ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾರಿಡಾರ್ ಉದ್ಘಾಟನೆ ಹಾಗೂ ಅದಕ್ಕೂ ಮೊದಲಿನ ಕೆಲವು ಪ್ರಮುಖ ಕ್ಷಣಗಳು ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

PM Modi inaugurates Kashi Vishwanath Corridor: Know interesting things about the project in Kannada

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಪ್ರಮುಖ ಅಂಶಗಳು:

* ಕಾಲ ಭೈರವ ದೇವಾಲಯ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕ್ಷೀರಾಭಿಷೇಕ ಮಾಡಿ ಮಹಾಮಂಗಳಾರತಿ ಬೆಳಗಿದರು. ತದನಂತರ ಕೆಲಸ ನಿಮಿಷಗಳವರೆಗೂ ಪ್ರಾರ್ಥನೆ ಸಲ್ಲಿಸಿದರು.

* ಕಾಶಿಯಲ್ಲಿ ಪೌರ ಕಾರ್ಮಿಕರಿಗೆ ಪುಷ್ಪ ಗೌರವ ಅರ್ಪಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅವರ ಜೊತೆಗೆ ನಿಂತು ಫೋಟೋ ಶೂಟ್ ಮಾಡಿಸಿಕೊಂಡರು.

* ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಮತ್ತು ಪಕ್ಷದ ಪ್ರಮುಖರ ಸೇರಿದಂತೆ 3,000ಕ್ಕೂ ಹೆಚ್ಚು ದಾರ್ಶನಿಕರು, ವಿವಿಧ ಧಾರ್ಮಿಕ ಗುರುಗಳು, ಕಲಾವಿದರು ಮತ್ತು ಇತರರು ಉದ್ಘಾಟನೆಗೆ ಸಾಕ್ಷಿಯಾದರು.

* ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಕರ್ಯ ಕೇಂದ್ರಗಳು, ವೈದಿಕ ಕೇಂದ್ರ, ಮುಮುಕ್ಷು ಭವನ, , ಭೋಗಶಾಲಾ, ಸಿಟಿ ಮ್ಯೂಸಿಯಂ, ವ್ಯೂಯಿಂಗ್ ಗ್ಯಾಲರಿ, ಫುಡ್ ಕೋರ್ಟ್, ಇತ್ಯಾದಿ ಸೇರಿದಂತೆ ಪ್ರವಾಸಿಗರಿಗೆ ಅಸಂಖ್ಯಾತ ಸೌಲಭ್ಯಗಳನ್ನು ಒದಗಿಸುವ ಕಾಶಿ ವಿಶ್ವನಾಥ ಯೋಜನೆಯ ಮೊದಲ ಹಂತದಲ್ಲಿ ಒಟ್ಟು 23 ಕಟ್ಟಡಗಳನ್ನು ಉದ್ಘಾಟಿಸಲಾಗಿದೆ.

* ಯೋಜನಾ ಪ್ರದೇಶದ ವಿಸ್ತಾರವು 5 ಲಕ್ಷ ಚದರ ಅಡಿಗಳಷ್ಟು ದೊಡ್ಡದಾಗಿದೆ, ಹಿಂದಿನ ಆವರಣವು ಕೇವಲ 3,000 ಚದರ ಅಡಿಗಳಿಗೆ ಸೀಮಿತವಾಗಿದೆ. 40 ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳನ್ನು ಮರುಶೋಧಿಸಲಾಗಿದೆ, ಮರುಸ್ಥಾಪಿಸಲಾಗಿದೆ ಮತ್ತು ಸುಂದರಗೊಳಿಸಲಾಗಿದೆ.

* ಈ ಯೋಜನೆಗಾಗಿ ದೇವಾಲಯದ ಸುತ್ತಮುತ್ತಲಿನ 300ಕ್ಕೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸುಮಾರು 1,400 ಅಂಗಡಿಕಾರರು, ಬಾಡಿಗೆದಾರರು ಮತ್ತು ಮನೆ ಮಾಲೀಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಹಳೆಯ ಆಸ್ತಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು ಪತ್ತೆಯಾಗಿದ್ದು, ಈ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

* ಒಂದು ವಾರದಲ್ಲಿ ಉತ್ತರ ಪ್ರದೇಶದಲ್ಲಿ ಪ್ರಧಾನಿ ಉದ್ಘಾಟಿಸುತ್ತಿರುವ ಮೂರನೇ ಯೋಜನೆ ಇದಾಗಿದೆ. ಕಳೆದ ವಾರ ಅವರು ಗೋರಖ್‌ಪುರದಲ್ಲಿ 9,600 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಪ್ರಾರಂಭಿಸಿದರು. ಯೋಗಿ ಆದಿತ್ಯನಾಥ್ ಅವರ ಭದ್ರಕೋಟೆ ಮತ್ತು ಬಲರಾಮ್‌ಪುರದಲ್ಲಿ ಸರಯು ಕಾಲುವೆ ಯೋಜನೆ. ಈ ತಿಂಗಳು ಇನ್ನೂ ಎರಡು ಕಾರ್ಯಕ್ರಮಗಳಿಗಾಗಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ನಾಳೆ ಅವರು ಅಸ್ಸಾಂ, ಅರುಣಾಚಲ ಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ತ್ರಿಪುರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಬಿಹಾರ ಮತ್ತು ನಾಗಾಲ್ಯಾಂಡ್‌ನ ಉಪ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸಲಿದ್ದಾರೆ.

* ಬಿಜೆಪಿ ಸರ್ಕಾರವು ಚುನಾವಣೆಗೆ ಮುನ್ನ ಪ್ರಾರಂಭಿಸುತ್ತಿರುವ ಹಲವಾರು ಯೋಜನೆಗಳು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಪಕ್ಷದ ನಾಯಕರ ದಾಳಿಗೆ ಕಾರಣವಾಗಿವೆ.

* ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಅಂಗೀಕರಿಸಿದ ಯಾವುದೇ ಕ್ಯಾಬಿನೆಟ್ ಇದ್ದರೆ, ಅದು ಸಮಾಜವಾದಿ ಪಕ್ಷದ ಸರ್ಕಾರ" ಎಂದು ಅಖಿಲೇಶ್ ಯಾದವ್ ಹೇಳಿದರು. ಕಳೆದ ವಾರ 'ಸರಯೂ ಕಾಲುವೆ ಯೋಜನೆಗೆ ಶೇ.75ರಷ್ಟು ಕಾಮಗಾರಿ ತಮ್ಮ ಅಧಿಕಾರಾವಧಿಯಲ್ಲಿ ಪೂರ್ಣಗೊಂಡಿದೆ ಎಂದು ಯಾದವ್ ಪ್ರತಿಪಾದಿಸಿದ್ದರು.

English summary
Prime Minister Narendra Modi in Varanasi today inaugurates the first phase of the Rs339 crore Kashi Vishwanath Corridor project. Here are ten points on on the Kashi Vishwanath Corridor project in Kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X