ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗೆ ಹಾರ್ದಿಕ್ ಪಟೇಲ್ ಸ್ಪರ್ಧೆ ಮಾಡುವುದಾಗಿ ಘೋಷಣೆ

|
Google Oneindia Kannada News

ಲಖನೌ, ಫೆಬ್ರವರಿ 6: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಬುಧವಾರ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಘೋಷಣೆ ಮಾಡಿದ್ದಾರೆ. ಲಖನೌದಲ್ಲಿ ನಡೆದ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಹಾಗೆ ನೋಡಿದರೆ ಇಪ್ಪತ್ತೈದು ವರ್ಷದ ಹಾರ್ದಿಕ್ ಪಟೇಲ್ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲೇ ಸ್ಪರ್ಧಿಸಬೇಕಿತ್ತು.

ಆದರೆ, ಚುನಾವಣೆಗೆ ಸ್ಪರ್ಧಿಸಲು ಆಯೋಗ ನಿಗದಿ ಮಾಡಿದ ವಯಸ್ಸು ಅವರಿಗೆ ಆಗಿರಲಿಲ್ಲ. "ಮೊದಲು ವಯಸ್ಸು ಬರಲಿ" ಎಂದು 2017ರ ಡಿಸೆಂಬರ್ ನಲ್ಲಿ ಹೇಳಿದ್ದರು. ಮುಂದಿನ ಎರಡು ಅಥವಾ ಮೂರು ವರ್ಷದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ಇರುವ ಬಗ್ಗೆ ಹೇಳಿಕೊಂಡಿದ್ದರು.

ಬಾಲ್ಯದ ಗೆಳತಿ ಜೊತೆ ಹಸೆಮಣೆ ಏರಿದ ಹಾರ್ದಿಕ್ ಪಟೇಲ್ಬಾಲ್ಯದ ಗೆಳತಿ ಜೊತೆ ಹಸೆಮಣೆ ಏರಿದ ಹಾರ್ದಿಕ್ ಪಟೇಲ್

ಅದಕ್ಕೂ ಮುಂಚೆ ಕೂಡ, "ಸಂವಿಧಾನದ ಪ್ರಕಾರ ಮಾತನಾಡಬೇಕೆಂದರೆ, ನಾನು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಮೊದಲ ಭಾಗವಾಗಿ ಈಗ ಅದು ಬೇಡ. ಇದರ ಜತೆಗೆ ನಾವೀಗ ಬಿಜೆಪಿ ವಿರುದ್ಧ ಒಟ್ಟಾಗಬೇಕಿದೆ. ಇದು ಬಿಜೆಪಿ-ಕಾಂಗ್ರೆಸ್ ಚುನಾವಣೆಯಲ್ಲ. ಗುಜರಾತಿನ ಆರು ಕೋಟಿ ಜನತೆಯ ಚುನಾವಣೆ" ಎಂದು ಹೇಳಿದ್ದರು.

Hardik Patel

ಹಾರ್ದಿಕ್ ಪಟೇಲ್ ಚುನಾವಣೆಗೆ ಸ್ಪರ್ಧಿಸುವುದಾದರೆ ನಮ್ಮ ಪಕ್ಷ ಬೆಂಬಲ ನೀಡುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು. ಗುಜರಾತ್ ನ ಅಮ್ರೇಲಿಯಿಂದ ಹಾರ್ದಿಕ್ ಪಟೇಲ್ ಸ್ಪರ್ಧಿಸುವ ಸಾಧ್ಯತೆ ಇದೆ. ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ನಿಡುವ ಸಾಧ್ಯತೆ ಇದೆ.

ಮಹಾಘಟಬಂಧನ ರ‍್ಯಾಲಿಯಲ್ಲಿ ಮೋದಿ ಮೇಲೆ ಹಾರ್ದಿಕ್ ವಾಗ್ದಾಳಿಮಹಾಘಟಬಂಧನ ರ‍್ಯಾಲಿಯಲ್ಲಿ ಮೋದಿ ಮೇಲೆ ಹಾರ್ದಿಕ್ ವಾಗ್ದಾಳಿ

2017ರ ಅಕ್ಟೋಬರ್ ನಲ್ಲಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿನ್ಹಾ ಸೋಲಂಕಿ ಮಾತನಾಡಿ, ಹಾರ್ದಿಕ್ ಪಟೇಲ್ ಚುನಾವಣೆಗೆ ಸ್ಪರ್ಧಿಸಲು ಬಯಸಿದರೆ ಕಾಂಗ್ರೆಸ್ ಟಿಕೆಟ್ ನೀಡುತ್ತದೆ ಎಂದಿದ್ದರು. ಈಚೆಗಷ್ಟೇ ಹಾರ್ದಿಕ್ ಪಟೇಲ್ ಅವರು ತಮ್ಮ ಬಾಲ್ಯದ ಗೆಳತಿ ಕಿಂಜಲ್ ಪಾರೀಖ್ ಅವರನ್ನು ವಿವಾಹ ಆಗಿದ್ದಾರೆ.

English summary
Gujarat Patidar leader, 25 year old Hardik Patel will contest for Lok Sabha Elections 2019. He announced in Lucknow, Uttar Pradesh on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X