ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರೋಬ್ಬರಿ 4.5 ಲಕ್ಷಕ್ಕೆ ಮಾರಾಟವಾದ ಆಡು ಜೋಡಿ; ಯಾಕಿಷ್ಟು ದುಬಾರಿ?

|
Google Oneindia Kannada News

ಲಖ್ನೋ, ಜುಲೈ 21: ಈದ್-ಅಲ್-ಅಧಾಗೂ ಮುನ್ನಾ ದಿನ ಮಂಗಳವಾರ ಉತ್ತರ ಪ್ರದೇಶದ ಲಖ್ನೋನಲ್ಲಿನ ಮಾರುಕಟ್ಟೆ ವಿವಿಧ ತಳಿಗಳ ಆಡು, ಕುರಿಗಳಿಂದ ತುಂಬಿಕೊಂಡಿತ್ತು. ಅವುಗಳಲ್ಲಿ ಆಡಿನ ಈ ಜೋಡಿಯೊಂದು ಎಲ್ಲರ ಗಮನ ಸೆಳೆಯುತ್ತಿದ್ದವು. ಬರೀ ನೋಟದಿಂದ ಮಾತ್ರವಲ್ಲ, ಇದರ ಬೆಲೆಯೂ ವಿಶೇಷವಾಗಿಯೇ ಇತ್ತು.

ಲಖ್ನೋನ ಗೋಮ್ಟಿ ನದಿ ತೀರದ ಮಾರುಕಟ್ಟೆಯಲ್ಲಿ ಈ ವಿಶೇಷವಾದ ಆಡುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅಂದ ಹಾಗೆ ಈ ಜೋಡಿ ಆಡು ಮಾರಾಟವಾಗಿದ್ದು 4.5 ಲಕ್ಷ ರೂಪಾಯಿಗೆ. ಈ ಎರಡು ಆಡುಗಳಿಗೂ ಎರಡು ವರ್ಷವಾಗಿದ್ದು, ಒಂದು 170 ಕೆ.ಜಿ.ಯದ್ದಾದರೆ ಮತ್ತೊಂದು 150 ಕೆ.ಜಿ. ತೂಕ.

Pair Of Goats Sold For Rs 4.5 Lakh In Lucknow

ಈ ಆಡುಗಳಿಗೆ ಏಕಿಷ್ಟು ದುಬಾರಿ ಬೆಲೆ? ಎಂದು ಪ್ರಶ್ನಿಸಿದರೆ, ಇವುಗಳನ್ನು ಬೆಳೆಸಿದ ರೀತಿಯೇ ಈ ದುಬಾರಿ ಬೆಲೆಗೆ ಕಾರಣ ಎನ್ನುತ್ತಾರೆ ಇವನ್ನು ಖರೀದಿಸಿದ ವ್ಯಕ್ತಿ. ಈ ಆಡುಗಳಿಗೆ ದಿನನಿತ್ಯವೂ ವಿಶೇಷವಾದ ಆಹಾರ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು.

ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಿ: ಆಡು‌ ಕುರಿಗಳಿಗೆ ಕುಸಿದ ಡಿಮ್ಯಾಂಡ್!ಬಕ್ರೀದ್ ಸಂಭ್ರಮಕ್ಕೆ ಕೊರೊನಾ ಅಡ್ಡಿ: ಆಡು‌ ಕುರಿಗಳಿಗೆ ಕುಸಿದ ಡಿಮ್ಯಾಂಡ್!

ಮಾಮೂಲಿ ಹುಲ್ಲಿನ ಬದಲಾಗಿ ಪ್ರತಿದಿನವೂ ತಪ್ಪದೇ ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡಲಾಗುತ್ತಿತ್ತು. ಗೋಡಂಬಿ, ಪಿಸ್ತಾ, ಬಾದಾಮಿಯಂಥ ಪೌಷ್ಟಿಕ ಆಹಾರದ ಜೊತೆ ಸಿಹಿ ತಿನಿಸುಗಳನ್ನು ಕೂಡ ಈ ಆಡುಗಳಿಗೆ ನೀಡಲಾಗುತ್ತಿತ್ತು. ಹೀಗಾಗೇ ಇವುಗಳ ದೇಹ ಇಷ್ಟು ಸದೃಢವಾಗಿದೆ ಎಂದು ವಿವರಿಸಿದರು.

Recommended Video

ಅಂತರಿಕ್ಷಕ್ಕೆ ಹೋಗಿ ಬಂದ ಅನುಭವ ಹಂಚಿಕೊಂಡ ಜೆಫ್ ಬೆಜೋಸ್ | Oneindia Kannada

ಇಷ್ಟೇ ಅಲ್ಲ, ದಿನವೂ ಇವುಗಳನ್ನು ಶಾಂಪೂವಿನಿಂದ ಸ್ನಾನ ಮಾಡಿಸಿ ಶುದ್ಧವಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತು. ಜೊತೆಗೆ ಆಗಾಗ್ಗೆ ವೈದ್ಯಕೀಯ ಪರೀಕ್ಷೆಯನ್ನೂ ಮಾಡಿಸುತ್ತಿದ್ದರಂತೆ.

English summary
A man purchased a pair of goats for a whopping Rs 4.5 lakh in lucknow uttar pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X