ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆಯೊಂದು ಮಾಫಿಯಾ ಅಭಿಪ್ರಾಯ ಸಂಗ್ರಹವಲ್ಲ: ಅಖಿಲೇಶ್ ಯಾದವ್

|
Google Oneindia Kannada News

ಲಕ್ನೋ ಜನವರಿ 24: ಅಖಿಲೇಶ್ ಯಾದವ್ ಇಂದು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಒಲವು ತೋರುವ ಸಮೀಕ್ಷೆಗಳು "ಅಫೀಮು ಸಮೀಕ್ಷೆಗಳು, ಅಭಿಪ್ರಾಯ ಸಮೀಕ್ಷೆಗಳಲ್ಲ" ಎಂದು ಹೇಳಿದ್ದಾರೆ. ಮುಂದಿನ ತಿಂಗಳು ಯುಪಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಅಭಿಪ್ರಾಯ ಸಂಗ್ರಹಗಳನ್ನು ನಿಷೇಧಿಸುವಂತೆ ಸಮಾಜವಾದಿ ಪಕ್ಷದ ನಾಯಕ ಒತ್ತಾಯಿಸಿದ್ದಾರೆ.

"ಇವು ಅಭಿಪ್ರಾಯ ಸಂಗ್ರಹಗಳಲ್ಲ. ಇವು ಅಫೀಮು ಸಮೀಕ್ಷೆಗಳು. ಈ ಸಮೀಕ್ಷೆಗಳನ್ನು ಯಾವ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ತಿಳಿದರೆ ನನಗೆ ಆಶ್ಚರ್ಯವಾಗುತ್ತದೆ. ಸಮೀಕ್ಷೆಗಳ ಮೂಲಕ ಆಡಳಿತ ಪಕ್ಷದ ನಾಯಕರು ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅಖಿಲೇಶ್ ಯಾದವ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಯುಪಿಗಾಗಿ ಕದನ: ಪಾಕ್ ಹೇಳಿಕೆಗೆ ಅಖಿಲೇಶ್ ವಿರುದ್ಧ ಬಿಜೆಪಿ ವಾಗ್ದಾಳಿ
"ಈ ಜನರು ಹಣದುಬ್ಬರ ಅಥವಾ ನಿರುದ್ಯೋಗದ ಬಗ್ಗೆ ಬಿಜೆಪಿಯನ್ನು ಕೇಳುವುದಿಲ್ಲ. ಸಾರ್ವಜನಿಕರ ಮೇಲಿನ ಕೋಪದಿಂದಾಗಿ ಅಭ್ಯರ್ಥಿಗಳನ್ನು ಕ್ಷೇತ್ರಗಳಿಂದ ಓಡಿಸಲಾಗುತ್ತಿದೆ. ಅವರ ಸರ್ಕಾರಿ ಕಾರ್ಯಕ್ರಮಗಳಿಗೆ ಕಡಿಮೆ ಹಾಜರಾತಿ ಇದೆ. ಹೀಗಿರುವಾಗ ಅವರು ಸಮೀಕ್ಷೆಗಳಲ್ಲಿ ಏನು ತೋರಿಸುತ್ತಾರೆ?" ಎಂದು ಅಖಿಲೆಶ್ ಯಾದವ್ ಪ್ರಶ್ನೆ ಮಾಡಿದ್ದಾರೆ. ಬಿಜೆಪಿಗೆ ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ ಮತ್ತು ಹೀಗಾಗಿ ಇಂಥ ಕಾರ್ಯಗಳಿಗೆ ಸಿದ್ಧವಾಗಿದೆ ಎಂದು ಅವರು ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ.

Opium, Not Opinion Polls, Says Akhilesh Yadav
"ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯುವ ಬಿಜೆಪಿ ನಾಯಕರ ವಿರುದ್ಧ ಘೇರಾವ್ ಹಾಕಲಾಗುತ್ತಿದೆ. ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಜನರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ, ಏಕೆಂದರೆ ಕಳೆದ 4.5 ವರ್ಷಗಳಿಂದ ಜನರಿಗೆ ದ್ರೋಹ ಮಾಡಲಾಗುತ್ತಿದೆ. ಅದಾಗ್ಯೂ, ಸಮೀಕ್ಷೆಗಳು ಬಿಜೆಪಿಯ ಪರವಾಗಿ ಬರುತ್ತಿವೆ. ಆದರೆ ಇಂಥ ಸಮೀಕ್ಷೆಗಳು ಜನರ ಕೋಪ ಮತ್ತು ಮನಸ್ಥಿತಿಯನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ತಮ್ಮ ಅತ್ತಿಗೆ ಅಪರ್ಣಾ ಯಾದವ್ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆಗಿರುವ ಬಗ್ಗೆ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದರು. ಸಮಾಜವಾದಿ ಪಕ್ಷದವರು ಬಿಜೆಪಿ ಸೇರುತ್ತಿರುವುದಕ್ಕೆ ಖುಷಿ ಆಗುತ್ತಿದೆ. ಅವರು ಸಂವಿಧಾನವನ್ನು ಉಳಿಸುವುದಕ್ಕಾಗಿ ಬಿಜೆಪಿಯಲ್ಲಿದ್ದುಕೊಂಡೇ ಹೋರಾಟವನ್ನು ಮುಂದುವರಿಸುತ್ತಾರೆ. ಈಗ ಆ ಪಕ್ಷದಲ್ಲಿಯೂ ಇದೇ ಚರ್ಚೆ ನಡೆಸುತ್ತಿದೆ," ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಅಖಿಲೇಶ್ ಯಾದವ್ ಪಕ್ಷಕ್ಕೆ ಸೇರ್ಪಡೆಗೊಂಡ ದೇಶದ ಅತಿ ಎತ್ತರದ ವ್ಯಕ್ತಿ ಧರ್ಮೇಂದ್ರ ಪ್ರತಾಪ್ ಸಿಂಗ್ ಯಾರು?
ಉತ್ತರ ಪ್ರದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಯ ಮಧ್ಯೆ ಸಾಮಾಜಿಕ ಮಾಧ್ಯಮಗಳ ಮೂಲಕ ಮತದಾರರನ್ನು ತಲುಪುವುದಕ್ಕೆ ಭಾರತೀಯ ಜನತಾ ಪಕ್ಷ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ರಾಜ್ಯ ಬಿಜೆಪಿಯ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥ ಅಂಕಿತ್ ಚಂದೇಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊವಿಡ್-19 ಸೋಂಕಿನ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗವು ಭೌತಿಕ ಪ್ರಚಾರ ಮತ್ತು ಮೆರವಣಿಗೆಗಳಿಗೆ ನಿರ್ಬಂಧವನ್ನು ವಿಧಿಸಿದೆ. ಮನೆ ಮನೆ ಪ್ರಚಾರಕ್ಕೂ ನಿಗದಿತ ನಿರ್ಬಂಧವನ್ನು ವಿಧಿಸಲಾಗಿದೆ. ಈ ಹಂತದಲ್ಲಿ ನಾವು ವರ್ಚುವಲ್ ರ್‍ಯಾಲಿಗಳ ಮೂಲಕ ಜನರನ್ನು ತಲುಪಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ತಿಂಗಳಾಂತ್ಯದ ವೇಳೆಗೆ ಬಿಜೆಪಿಯು ತನ್ನ ವರ್ಚುವಲ್ ರ್‍ಯಾಲಿಗಳನ್ನು ಆರಂಭಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 11 ಜಿಲ್ಲೆಗಳಲ್ಲಿ ಒಟ್ಟು 58 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 10 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

English summary
Akhilesh Yadav today said surveys favouring the BJP in Uttar Pradesh were "opium polls, not opinion polls".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X