ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

81 ಮಕ್ಕಳಿಗೆ ಒಂದು ಲೀಟರ್ ಹಾಲು: ಯೋಗಿ ಸರ್ಕಾರದ ವಿರುದ್ಧ ಆಕ್ರೋಶ

|
Google Oneindia Kannada News

ಲಖನೌ, ನವೆಂಬರ್ 29: ಉತ್ತರ ಪ್ರದೇಶ ರಾಜ್ಯದಲ್ಲಿ ಶಾಲಾ ಬಿಸಿ ಊಟದ ಹುಳುಕುಗಳು ಹೊರಬರುವುದು ನಿಂತಿಲ್ಲ. ಮಕ್ಕಳಿಗೆ ಚಪಾತಿ ಜೊತೆ ಉಪ್ಪು ನೀಡಿ ಸುದ್ದಿ ಆಗಿದ್ದ ಉತ್ತರ ಪ್ರದೇಶ ಶಿಕ್ಷಣ ಇಲಾಖೆ ಈಗ ಒಂದು ಲೀಟರ್ ಹಾಲನ್ನು 81 ಮಕ್ಕಳಿಗೆ ನೀಡಿ ಸುದ್ದಿ ಆಗಿದೆ.

ಉತ್ತರ ಪ್ರದೇಶದ ಸೋನೆಬಾದ್ರಾ ಜಿಲ್ಲೆ ಸಲೈಬಾನ್ವಾ ಊರಿನಲ್ಲಿ ಶಾಲೆಯಲ್ಲಿ ಒಂದು ಲೀಟರ್ ಹಾಲನ್ನು 81 ಮಕ್ಕಳಿಗೆ ನೀಡಲಾಗಿದೆ. ಒಂದು ಲೀಟರ್ ಹಾಳಿಗೆ ಒಂದು ಬಕೆಟ್ ನೀರು ಬೆರೆಸಿ ಅದನ್ನೇ ಕಾಯಿಸಿ ಮಕ್ಕಳಿಗೆ ಕುಡಿಯಲು ನೀಡಿದ್ದಾರೆ ಶಾಲೆಯ ಸಿಬ್ಬಂದಿ.

ಡೆಂಜರ್ ಡೆಂಗ್ಯೂಗೆ ಬಲಿಯಾಗಿದ್ದು ಒಬ್ಬಿಬ್ಬರಲ್ಲಡೆಂಜರ್ ಡೆಂಗ್ಯೂಗೆ ಬಲಿಯಾಗಿದ್ದು ಒಬ್ಬಿಬ್ಬರಲ್ಲ

ಸಲೈಬಾನ್ವಾ ಪ್ರಾಥಮಿಕ ಶಾಲೆಯಲ್ಲಿ ಒಂದು ಲೀಟರ್ ಹಾಲು ಮಾತ್ರವೇ ಇತ್ತು, ಅದಕ್ಕೆ ಬಕೆಟ್ ನೀರು ಸೇರಿಸಿ ಅದನ್ನೇ ಮಕ್ಕಳಿಗೆ ಕುಡಿಯಲು ನೀಡಲಾಯಿತು ಎಂದು ಪ್ರತ್ಯಕ್ಷದರ್ಶಿ ಗ್ರಾಮ ಪಂಚಾಯಿತಿ ಸದಸ್ಯ ದೇವ್ ಪಾಟಿಯಾ ಹೇಳಿದ್ದಾರೆ.

One litre milk for 81 kids in Uttar Pradesh school

ಶಾಲೆಯ ಮುಖ್ಯೋಪಾಧ್ಯಾಯ ಶೈಲೇಶ್ ಕನೌಜಿಯಾ ಘಟನೆ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದು, 'ಶಾಲೆಯಲ್ಲಿ 171 ಮಕ್ಕಳಿದ್ದಾರೆ, ಅದರಲ್ಲಿ 81 ಮಕ್ಕಳು ಅಂದು ಹಾಜರಾಗಿದ್ದರು. ನಾನು ಎರಡು ಶಾಲೆ ನಿಭಾಯಿಸಬೇಕಿದೆ. ನಾನು ಅಂದು ಬೇರೆ ಶಾಲೆಯಲ್ಲಿದ್ದೆ ಆಗ ಅಡುಗೆಯವರು ಮಕ್ಕಳಿಗೆ ಹಾಲು ವಿತರಿಸಿದ್ದಾರೆ' ಎಂದು ನುಣುಚಿಕೊಳ್ಳುವ ಉತ್ತರ ಕೊಟ್ಟಿದ್ದಾರೆ.

ವೈರಲ್ ಆದ ಈ ಫೋಟೊ ಹಿಂದಿನ ಸತ್ಯಾಂಶ ಫ್ಯಾಕ್ಟ್ ಚೆಕ್ ನಲ್ಲಿ ಹೊರಬಿತ್ತುವೈರಲ್ ಆದ ಈ ಫೋಟೊ ಹಿಂದಿನ ಸತ್ಯಾಂಶ ಫ್ಯಾಕ್ಟ್ ಚೆಕ್ ನಲ್ಲಿ ಹೊರಬಿತ್ತು

'ಘಟನೆಯು ನನ್ನ ಗಮನಕ್ಕೆ ಬಂದ ಕೂಡಲೇ ನಾನು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶಾಲೆಯ ಮುಖ್ಯೋಪಾಧ್ಯಾಯರಿಂದ ಮಾಹಿತಿ ಪಡೆದಿದ್ದೇನೆ' ಬೇಸಿಕ್ ಸ್ಕೂಲ್ ಅಧಿಕಾರಿ (ಬಿಎಸ್‌ಎ) ಅಧಿಕಾರಿ ಹೇಳಿದ್ದಾರೆ.

ಆಗ್ರಾ ಹೆಸರು ಬದಲಿಸಲು ಯೋಗಿ ಸರ್ಕಾರ ಚಿಂತನೆಆಗ್ರಾ ಹೆಸರು ಬದಲಿಸಲು ಯೋಗಿ ಸರ್ಕಾರ ಚಿಂತನೆ

ಕೆಲವೇ ತಿಂಗಳುಗಳ ಹಿಂದೆಯಷ್ಟೆ ಮಕ್ಕಳಿಗೆ ಚಪಾತಿ ಗೆ ಪಲ್ಯ ನೀಡದೇ ಕೇವಲ ಉಪ್ಪು ನೀಡಿದ್ದು ಭಾರಿ ಸುದ್ದಿ ಆಗಿತ್ತು. ಯೋಗಿ ಸರ್ಕಾರದಲ್ಲಿ ಶಿಕ್ಷಣ ಇಲಾಖೆಯು ಅಧೋಗತಿಗೆ ಇಳಿದಿದೆ ಎಂದು ವಿಪಕ್ಷಗಳು ಆರೋಪ ಮಾಡಿದ್ದವು.

English summary
One liter milk distributed to 81 kids in Uttar Pradesh's school. one bucket water mixed to one liter milk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X