ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಓಬಿಸಿಯಿಂದಾಗಿ ಬಿಜೆಪಿಗೆ ಹೆಚ್ಚಿನ ಬಲ

|
Google Oneindia Kannada News

ಲಕ್ನೋ, ಮೇ 13 : ದೇಶದ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಓಬಿಸಿ ಸಮುದಾಯದ ಬೆಂಬಲ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿರುವ ಸಾಧ್ಯತೆ ಇದೆ. ಉತ್ತರ ಪ್ರದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳ ಮತದಾನ ಮುಕ್ತಾಯವಾಗಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ ಯಾದವ ಮತ್ತು ಜಾಟ್ ಸಮುದಾಯದ ಮೇಲೆ ಅವರ ಗಮನ ಹೆಚ್ಚಾಗಿತ್ತು. ಯಾದವ ಮತ್ತು ಜಾಟ್‌ ಯೇತರ ಓಬಿಸಿ ಸಮುದಾಯ ಬಿಜೆಪಿ ಕಡೆ ವಲಸೆ ಬಂದಿದ್ದು ಕುತೂಹಲಕ್ಕೆ ಕಾರಣವಾಗಿದೆ.

2 ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಮಾಯಾ-ಮುಲಾಯಂ2 ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಮಾಯಾ-ಮುಲಾಯಂ

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಜಾಧವ್ ಅವರು ಹಿಂದೂಗಳ ಪರವಾಗಿ ಈ ಬಾರಿಯ ಚುನಾವಣೆಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ದೇವಾಲಯಗಳ ವಿಚಾರದಲ್ಲಿ ಅಖಿಲೇಶ್ ನೀಡಿರುವ ಹೇಳಿಕೆಗಳು ಸಹ ಅವರ ಹಿಂದುತ್ವದ ಬಗೆಗಿನ ಧೋರಣೆಯನ್ನು ತೆರೆದಿಟ್ಟಿದೆ.

ಹಿಂದುಳಿದ ವರ್ಗಕ್ಕೆ ಒಳ ಮೀಸಲಾತಿ: ಯೋಗಿ ಆದಿತ್ಯನಾಥ್ ಗೆ ತಲೆನೋವುಹಿಂದುಳಿದ ವರ್ಗಕ್ಕೆ ಒಳ ಮೀಸಲಾತಿ: ಯೋಗಿ ಆದಿತ್ಯನಾಥ್ ಗೆ ತಲೆನೋವು

OBC may help BJP in Lok sabha elections in Uttar Pradesh

2018ರಲ್ಲಿ ಅಖಿಲೇಶ್ ಯಾಧವ್ ಅವರು ವಿಷ್ಣುವಿನ ಹೆಸರಿನಲ್ಲಿ ನಗರವೊಂದನ್ನು ನಿರ್ಮಾಣ ಮಾಡುವ ಭರವಸೆಯನ್ನು ನೀಡಿದ್ದರು. ಈ ಹೇಳಿಕೆ ಮೂಲಕ ಯಾದವ ಸಮುದಾಯದ ಮತಗಳನ್ನು ಸೆಳೆಯಲು ಅವರು ಪ್ರಯತ್ನ ನಡೆಸಿದ್ದರು.

2 ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಮಾಯಾ-ಮುಲಾಯಂ2 ದಶಕಗಳ ನಂತರ ಒಂದೇ ವೇದಿಕೆಯಲ್ಲಿ ಮಾಯಾ-ಮುಲಾಯಂ

ಓಬಿಸಿ ಸಮುದಾಯಗಳು ಬಿಜೆಪಿ, ಕಾಂಗ್ರೆಸ್ ಹೊರತಾಗಿ ಚಿಕ್ಕ-ಚಿಕ್ಕ ರಾಜಕೀಯ ಪಕ್ಷಗಳನ್ನು ಮಾಡಿಕೊಂಡಿದ್ದು, ಆ ಮೂಲಕ ಚುನಾವಣೆಯನ್ನು ಎದುರಿಸಿವೆ. ಆದರೆ, ಓಂ ಪ್ರಕಾಶ್ ರಾಜ್‌ ಭರ್ ನೇತೃತ್ವದ ಎಸ್‌ಬಿಎಸ್‌ಪಿ ಬಿಜೆಪಿ ಜೊತೆ ಸೇರಿಲ್ಲ, ಚುನಾವಣೆಯಲ್ಲಿ ಪಕ್ಷದ ವಿರುದ್ಧವೇ ಪ್ರಚಾರ ನಡೆಸಿದೆ.

ಸಂಜಯ್ ಚೌವ್ಹಾಣ್ ನೇತೃತ್ವದ ಜನವಾದಿ ಸೋಶಿಯಲಿಸ್ಟ್ ಪಾರ್ಟಿ ಎಂಬ ಚಿಕ್ಕ ಪಕ್ಷ ಸಮಾಜವಾದಿ ಪಕ್ಷದ ಟಿಕೆಟ್‌ನಿಂದ ಚುನಾವಣೆಗೆ ನಿಂತಿದೆ. ಮಹಾನ್ ದಳ ಎಂಬ ಪಕ್ಷ ಕಾಂಗ್ರೆಸ್ ಟಿಕೆಟ್ ಮೂಲಕ ಚುನಾವಣೆ ಎದುರಿಸಿದೆ. ಹೀಗೆ 1, 2 ಕ್ಷೇತ್ರಗಳಲ್ಲಿ ಚಿಕ್ಕ-ಚಿಕ್ಕ ಸಮುದಾಯಗಳು ಕಣಕ್ಕಿಳಿದಿವೆ.

'ಹಿಂದುಳಿದ ವರ್ಗಗಳ ಪಕ್ಷಗಳಲ್ಲಿ ತ್ವತ್ವ ಸಿದ್ದಾಂತದ ಕೊರತೆ ಇದೆ. ಹಲವು ವರ್ಷಗಳಿಂದ ಹೋರಾಟ ಮಾಡಿದರೂ ಸೂಕ್ತವಾದ ಸಿದ್ದಾಂತ ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ಓಂ ಪ್ರಕಾಶ್ ರಾಜ್‌ ಭರ್ ಹೇಳಿದ್ದಾರೆ.

ಎಸ್‌ಬಿಎಸ್‌ಪಿ ಮತ್ತು ನಿಷಾದ್ ಪಕ್ಷ ಕುಟುಂಬ ರಾಜಕಾರಣದ ಮೊರೆ ಹೋಗಿದ್ದು ಬಿಜೆಪಿಗೆ ಸಹಾಯಕವಾಗಲಿದೆ. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಬಾರಿ ರಾಜ್ಯದಲ್ಲಿ ಯಾರು ಹೆಚ್ಚಿನ ಸ್ಥಾನಗಳಿಸುವರು ಎಂದು ಕಾದು ನೋಡಬೇಕು.

English summary
In Uttar Pradesh fragmentation of backward caste politics may help BJP in Lok sabha elections 2019. SP and BSP are represent only Yadavs and Jatavs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X