ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಭಕ್ತ ಮನೆ ಬಾಗಿಲಿಗೇ ಬರಲಿದೆ ಕಾಶಿ ವಿಶ್ವನಾಥನ ಪ್ರಸಾದ

|
Google Oneindia Kannada News

ವಾರಾಣಸಿ, ಜುಲೈ 6: ಕಾಶಿ ವಿಶ್ವನಾಥನ ದರ್ಶನ ಭಾಗ್ಯವಿಲ್ಲವೆಂದು ಯಾರೂ ಕೂಡ ಕೊರಗುವುದು ಬೇಡ, ಪ್ರಸಾದ ಭಕ್ತರ ಮನೆ ಬಾಗಿಲಿಗೆ ಬರಲಿದೆ.

Recommended Video

ಚಿತ್ರದುರ್ಗ ರೈತನ ಬದುಕನ್ನು ನಾಶ ಮಾಡಿದ ಕೊರೊನ | Chitradurga | Oneindia Kannada

ಅಂಚೆ ಇಲಾಖೆ ಮತ್ತು ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಶ್ರಾವಣ ಮಾಸದಲ್ಲಿ ಪ್ರಸಾದವನ್ನು ತಲುಪಿಸಲು ಒಪ್ಪಂದ ಮಾಡಿಕೊಂಡಿದೆ. 'ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಲಾಗುವುದು ಎಂದು ಲಕ್ನೋ ವೃತ್ತದ ಅಂಚೆ ವಿಭಾಗದ ನಿರ್ದೇಶಕ ಕೃಷ್ಣ ಕುಮಾರ್ ಯಾದವ್ ತಿಳಿಸಿದ್ದಾರೆ.

ಕುಂಕುಮ, ಗಂಧ ಸಿಗುತ್ತೆ, ತೀರ್ಥ ಕೇಳಬೇಡಿ: ದೇವಸ್ಥಾನ ತೆರೆಯಲು 6 ಷರತ್ತುಗಳುಕುಂಕುಮ, ಗಂಧ ಸಿಗುತ್ತೆ, ತೀರ್ಥ ಕೇಳಬೇಡಿ: ದೇವಸ್ಥಾನ ತೆರೆಯಲು 6 ಷರತ್ತುಗಳು

ಪವಿತ್ರ ಶ್ರಾವಣ ಮಾಸದಲ್ಲಿ ಲಕ್ಷಾಂತರ ಶಿವಭಕ್ತರು ಕಾಶಿಯಾತ್ರೆ ಮಾಡಿ ವಿಶ್ವನಾಥನ ದರ್ಶನ ಪಡೆಯಲು ಬಯಸುತ್ತಾರೆ. ಆದರೆ ಈ ಬಾರಿ ದೇಶಾದ್ಯಂತ ಕೊರೊನಾ ಹಾವಳಿ ಇರುವ ಕಾರಣ ಅಂತಹಾ ಯಾತ್ರೆಗೆ ಅವಕಾಶವಿರುವುದಿಲ್ಲ.

Now Get Prasad By Post From Kashi Vishwanath Temple During Shravana Masam

ವಿಶ್ವನಾಥನ ಪ್ರಸಾದಕ್ಕಾಗಿ ಯಾವುದೇ ಅಂಚೆ ಕಚೇರಿಯಿಂದ 251 ರೂ.ಗಳ ಎಲೆಕ್ಟ್ರಾನಿಕ್ ಮನಿ ಆರ್ಡರ್ ಅನ್ನು ವಾರಣಾಸಿ ಪೂರ್ವ ವಿಭಾಗದ ಸೂಪರಿಂಟೆಂಡೆಂಟ್ ಅಂಚೆ ಕಚೇರಿಗಳಿಗೆ ಕಳುಹಿಸಬೇಕು ಮತ್ತು ಮೂರನೇ ದಿನ ಕಾಶಿ ವಿಶ್ವನಾಥ ದೇವಸ್ಥಾನದಿಂದ 'ಪ್ರಸಾದ' ವನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ.

ಈ ಪಾರ್ಸೆಲ್‌ನಲ್ಲಿ ಕಾಶಿ ವಿಶ್ವನಾಥ ದೇವಾಲಯದ ಜ್ಯೋತಿರ್ಲಿಂಗ, ಮಹಾ ಮೃತುಂಜಯ ಮಹಾ ಯಂತ್ರ, ಶಿವ ಚಾಲೀಸಾ, ರುದ್ರಾಕ್ಷಿ, ಡ್ರೈ ಫ್ರೂಟ್ಸ್, ವಿಭೂತಿ ಮತ್ತು ಒಂದು ಪ್ಯಾಕೆಟ್ ಸಿಹಿತಿಂಡಿ ಹಾಗೂ ದೇವರ ಫೋಟೋಗಳಿರಲಿದೆ ಎಂದು ಯಾದವ್ ಹೇಳಿದ್ದಾರೆ.

ಯಾರೂ ನಿರಾಶರಾಗಬೇಕಾಗಿಲ್ಲ. ಭಕ್ತರಿಗೆ ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೂ, ಸೋಮವಾರದಿಂದ ಪ್ರಾರಂಭವಾಗುವ ಹಿಂದೂ ಕ್ಯಾಲೆಂಡರ್ ನ ಶ್ರಾವಣ ಮಾಸದಲ್ಲಿ ವಿಶ್ವನಾಥನ ಪ್ರಸಾದವನ್ನು ನಿಮ್ಮ ನಿಮ್ಮ ಮನೆಗೇ ತರಿಸಿಕೊಳ್ಳಬಹುದು. ಇದಕ್ಕಾಗಿ ವಿಶ್ವನಾಥ ದೇವಾಲಯ ಹಾಗೂ ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡಿವೆ.

English summary
Lakhs of Lord Shiva devotees take out Kawad yatra and throng temples in the holy month of Sawan, but this year the coronavirus pandemic has forced the authorities to ban such religious activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X