ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಮರೆಯಾಗಿದ್ದ ಬಾಂಬ್ ಸ್ಫೋಟ ತಜ್ಞ ಕುಖ್ಯಾತ ಡಾ.ಬಾಂಬ್ ಬಂಧನ

|
Google Oneindia Kannada News

ಲಖನೌ, ಜನವರಿ 18: ಜೈಲಿನಿಂದ ಪೆರೋಲ್ ಪಡೆದು ಕಣ್ಮರೆ ಆಗಿದ್ದ ಕುಖ್ಯಾತ ಬಾಂಬ್ ಸ್ಫೋಟ ತಜ್ಞ ಡಾ.ಬಾಂಬ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ.ಅಲೀಸ್ ಅನ್ಸಾರಿ ಅಲಿಯಾಸ್ ಡಾ. ಬಾಂಬ್‌ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಆಗಿದ್ದ. ಬಾಂಬ್ ತಯಾರಿಕೆಯಲ್ಲಿ ಈತ ಮಾಸ್ಟರ್ ಮೈಂಡ್. ಕೆಲವು ದಿನಗಳ ಹಿಂದೆ ರಾಜಸ್ಥಾನದ ಅಜ್ಮೇರ್‌ ಜೈಲಿನಿಂದ ಪರೋಲ್‌ ಮೇಲೆ ಹೊರಗೆ ಬಂದಿದ್ದ. ಪರೋಲ್ ಮೇಲೆ ಹೊರಬಂದ ಮರುದಿನವೇ ಈತ ಪೊಲೀಸರಿಂದ ಕಣ್ಮರೆ ಆಗಿದ್ದ.

ಮುಂಬೈ ಸರಣಿ ಸ್ಫೋಟ ಅಪರಾಧಿ ಜಾಲಿಸ್ ಅನ್ಸಾರಿ ನಾಪತ್ತೆಮುಂಬೈ ಸರಣಿ ಸ್ಫೋಟ ಅಪರಾಧಿ ಜಾಲಿಸ್ ಅನ್ಸಾರಿ ನಾಪತ್ತೆ

ಬಹು ಅಪಾಯಕಾರಿಯಾಗಿದ್ದ ಡಾ.ಬಾಂಬ್ ಪತ್ತೆಗೆ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಬಹು ಹುಡುಕಾಟದ ಬಳಿಕ ನಿನ್ನೆ ಡಾ.ಬಾಂಬ್ ಅನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಂಧಿಸಲಾಗಿದೆ.

Notorious Dr.Bomb Arrested In Uttar Pradesh

ಮುಂಬೈನ ಮನೆಗೆ ಬಂದಿದ್ದ ಡಾ.ಬಾಂಬ್ ಬೆಳಗಿನ ನಮಾಜ್‌ ಗೆಂದು ಹೊರಗೆ ಬಂದವ ನಂತರ ಹಿಂತುರಿಗಿರಲಿಲ್ಲ. ಡಾ.ಬಾಂಬ್ ಕಾಣೆಯಾಗಿದ್ದಾನೆಂದು ಆತನ ಕುಟುಂಬ ಸದಸ್ಯರು ಅಗ್ರಿಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಸೀದಿ ಒಂದರಿಂದ ಹೊರಗೆ ಬರುವ ವೇಳೆ ಆತನನ್ನು ಬಂಧಿಸಲಾಗಿದೆ. ಆತನನ್ನು ಲಖನೌ ಗೆ ಕರೆದುಕೊಂಡು ಬರಲಾಗಿದ್ದು, ಆತ ದೇಶ ಬಿಟ್ಟು ಪರಾರಿ ಆಗುವ ಯೋಜನೆಯಲ್ಲಿದ್ದು ಎಂದು ಉತ್ತರ ಪ್ರದೇಶ ಎಸ್‌ಪಿ ಓಪಿ ಸಿಂಗ್ ತಿಳಿಸಿದ್ದಾರೆ.

ಬೆಂಗಳೂರು; ಶಂಕಿತ ಉಗ್ರರು 10 ದಿನ ಸಿಸಿಬಿ ವಶಕ್ಕೆಬೆಂಗಳೂರು; ಶಂಕಿತ ಉಗ್ರರು 10 ದಿನ ಸಿಸಿಬಿ ವಶಕ್ಕೆ

ಎಂಬಿಬಿಎಸ್ ವೈದ್ಯನಾಗಿದ್ದ ಡಾ.ಅಲೀಸ್ ಅನ್ಸಾರಿ 1993 ರ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ. ಅದು ಮಾತ್ರವಲ್ಲದೇ ದೇಶದಲ್ಲಿ ನಡೆದಿರುವ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಈತ ತಯಾರು ಮಾಡಿದ ಬಾಂಬ್ ಬಳಕೆ ಆಗಿದೆ. ಈತನಿಗೆ ಸಿಮಿ ಉಗ್ರರು, ಇಂಡಿಯನ್ ಮುಜಾಹಿದ್ದೀನ್ ಉಗ್ರರ ಜೊತೆ ನಂಟು ಇತ್ತು.

English summary
1993 serial blast main accused Notorious Dr.Bomb arrested in Uttar Pradesh's Kanpur. He got parole from jail then he tried flee away from India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X