ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾರ್ಮಿಕರೇನು ಅವರ ಆಸ್ತಿಯಲ್ಲ' ಯೋಗಿ ವಿರುದ್ಧ ರಾಹುಲ್ ವಾಗ್ದಾಳಿ

|
Google Oneindia Kannada News

ಲಕ್ನೌ, ಮೇ 26: ವಲಸೆ ಕಾರ್ಮಿಕರ ವಿಚಾರದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೈಗೊಂಡಿರುವ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.

Recommended Video

ಕಾಂಗ್ರೆಸ್ ವಿರುದ್ಧ ಸಿಎಂಗೆ ಸಾಫ್ಟ್ ಕಾರ್ನರ್..? | Yediyurappa

''ಕಾರ್ಮಿಕರು ಅವರ ವೈಯಕ್ತಿಕ ಆಸ್ತಿಯಲ್ಲ, ಉತ್ತರ ಪ್ರದೇಶದ ಆಸ್ತಿಯೂ ಅಲ್ಲ'' ಎಂದು ಹೇಳುವ ಮೂಲಕ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಲಾಕ್‌ಡೌನ್ ಗುರಿ ಮತ್ತು ಉದ್ದೇಶ ಸಂಪೂರ್ಣ ವಿಫಲ''ಲಾಕ್‌ಡೌನ್ ಗುರಿ ಮತ್ತು ಉದ್ದೇಶ ಸಂಪೂರ್ಣ ವಿಫಲ'

ಭಾನುವಾರ ‌ಆರ್ ಎಸ್ ಎಸ್ ಆಯೋಜಿಸಿದ್ದ ಮಾಧ್ಯಮ ಸಂವಹನದಲ್ಲಿ ಮಾತನಾಡಿದ ಸಿಎಂ ಆದಿತ್ಯನಾಥ್, ''ಉತ್ತರ ಪ್ರದೇಶದಿಂದ ಕಾರ್ಮಿಕರನ್ನು ಬೇರೆ ರಾಜ್ಯಗಳಿಗೆ ಕೆಲಸಕ್ಕಾಗಿ ಕರೆದುಕೊಂಡು ಹೋಗುವ ಮುಂಚೆ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ'' ಎಂದು ಹೇಳಿದ್ದಾರೆ.

Workers Not his personal property Rahul Gandhi Argued Against Yogi Decision

''ಇದು ದುರದೃಷ್ಟಕರ ಸಂಗತಿ ಎಂದು ಭಾವಿಸುತ್ತೇನೆ. ಜನರು ಮೊದಲು ಭಾರತೀಯರು, ಆಮೇಲೆ ಆಯಾ ರಾಜ್ಯಗಳಿಗೆ ಸೇರಿದವರು. ಬೇರೆ ರಾಜ್ಯಗಳಿಗೆ ಕಾರ್ಮಿಕರು ಹೋಗಬೇಕು ಎನ್ನುವುದನ್ನು ನಿರ್ಧರಿಸುವುದು ಸಿಎಂ ಅಲ್ಲ'' ಎಂದು ರಾಹುಲ್ ಗಾಂಧಿ ವಿರೋಧಿಸಿದ್ದಾರೆ.

"ಉತ್ತರ ಪ್ರದೇಶದ ಜನರು ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಹಾಗೂ ಇನ್ಯಾವುದೇ ಸ್ಥಳಕ್ಕೆ ಹೋಗಿ ತನ್ನ ಕನಸುಗಳನ್ನು ಈಡೇರಿಸಲು ಬಯಸಿದರೆ, ಅದನ್ನು ಮಾಡುವ ಹಕ್ಕು ಅವರು ಹೊಂದಿದ್ದಾರೆ" ಎಂದು ರಾಹುಲ್ ಹೇಳಿದರು.

''ಅವರ ಕನಸುಗಳನ್ನು ಬೆಂಬಲಿಸುವುದು ಸರ್ಕಾರದ ಕರ್ತವ್ಯ. ನೀವು ನಮಗೆ ಸೇರಿದವರು ಎನ್ನುವುದರಲ್ಲಿ ಅರ್ಥವಿಲ್ಲ. ನೀವು ಹೋಗಿ ಮಹಾರಾಷ್ಟ್ರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಇದು ಅಸಂಪೂರ್ಣವಾಗಿ ಅಸಂಬದ್ಧ ನಿರ್ಧಾರ'' ಎಂದು ಮಾಜಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದಾರೆ.

English summary
'Workers not his personal property....' Congress leader Rahul gandhi react to Uttar pradesh Cm statement about workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X