ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ: ಕೊರೊನಾ ಲಸಿಕೆ ಪಡೆಯದಿದ್ದರೆ ಸಂಬಳವಿಲ್ಲ!

|
Google Oneindia Kannada News

ಲಕ್ನೋ, ಜೂನ್ 02: ಸರ್ಕಾರಿ ಉದ್ಯೋಗಿಗಳು ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ತಿಂಗಳ ವೇತನ ಬಂದು ನಿಮ್ಮ ಖಾತೆಗೆ ಬೀಳುತ್ತದೆ. ಕೊವಿಡ್-19 ಲಸಿಕೆ ಪಡೆಯದವರಿಗೆ ತಿಂಗಳ ವೇತನ ನೀಡುವುದಿಲ್ಲ ಎಂದು ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Recommended Video

ಕೊರೊನ ವ್ಯಾಕ್ಸಿನ್ ಹಾಕ್ಸಿಲ್ಲ ಅಂದ್ರೆ ಸಂಬಳ ಕಟ್ | Oneindia Kannada

ಫಿರೋಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ "ಲಸಿಕೆ ಇಲ್ಲವೇ, ಸಂಬಳವೂ ಇಲ್ಲ" ಎಂಬ ಮೌಖಿಕ ಆದೇಶವನ್ನು ಹೊರಡಿಸಿದ್ದಾರೆ ಎಂದು ಮುಖ್ಯ ಅಭಿವೃದ್ಧಿ ಅಧಿಕಾರಿ ಚಾರ್ಚಿತ್ ಗೌರ್ ತಿಳಿಸಿದ್ದಾರೆ. ಈ ಆದೇಶದ ಪ್ರಕಾರ, ಸರ್ಕಾರಿ ಉದ್ಯೋಗಿಯು ಕೊವಿಡ್-19 ಲಸಿಕೆಯನ್ನು ಪಡೆಯದಿದ್ದರೆ, ಇಲಾಖೆಯು ಉದ್ಯೋಗಿ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಮೇ ತಿಂಗಳ ವೇತನವನ್ನು ತಡೆ ಹಿಡಿಯಲಾಗುತ್ತದೆ.

ಅಬ್ಬಬ್ಬಾ ಆಶ್ಚರ್ಯ: ಎಣ್ಣೆ ಖರೀದಿಗೆ ಕೊರೊನಾ ಲಸಿಕೆ ಪ್ರಮಾಣಪತ್ರ ಕಡ್ಡಾಯ!ಅಬ್ಬಬ್ಬಾ ಆಶ್ಚರ್ಯ: ಎಣ್ಣೆ ಖರೀದಿಗೆ ಕೊರೊನಾ ಲಸಿಕೆ ಪ್ರಮಾಣಪತ್ರ ಕಡ್ಡಾಯ!

ಜಿಲ್ಲಾ ಖಜಾನೆ ಅಧಿಕಾರಿ ಮತ್ತು ಇತರೆ ಇಲಾಖೆ ಮುಖ್ಯಸ್ಥರು ತಮ್ಮ ತಮ್ಮ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಪಟ್ಟಿಯನ್ನು ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಈ ಪಟ್ಟಿ ಪ್ರಕಾರ, ಕೊವಿಡ್-19 ಲಸಿಕೆ ಪಡೆದವರನ್ನು ಹಾಗೂ ಲಸಿಕೆ ಪಡೆದುಕೊಳ್ಳದವರನ್ನು ಪ್ರತ್ಯೇಕಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

 No Vaccination, No Salary Oral Order From Firozabad District Magistrate Chandra Vijay Singh

ವೇತನ ಕಡಿತದ ಭಯದಲ್ಲಿ ಲಸಿಕೆ:

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗಿಗಳು ವೇತನ ಕಡಿತಗೊಳ್ಳುತ್ತದೆ ಎಂಬ ಭಯದಲ್ಲಾದರೂ ಕೊರೊನಾವೈರಸ್ ಲಸಿಕೆಯನ್ನು ಹಾಕಿಸಿಕೊಳ್ಳಲಿ ಎಂಬ ಉದ್ದೇಶದಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಮೌಖಿಕ ಆದೇಶವನ್ನು ಹೊರಡಿಸಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 137 ದಿನಗಳಲ್ಲಿ 21,85,46,667 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 22,08,941 ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಈ ಪೈಕಿ 19,45,581 ಜನರಿಗೆ ಮೊದಲ ಡೋಸ್ ಹಾಗೂ 2,63,360 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

English summary
''No Vaccination, No Salary'' Oral Order From Firozabad District Magistrate Chandra Vijay Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X