ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವೀಕೆಂಡ್ ಲಾಕ್‌ಡೌನ್‌ನಲ್ಲಿ ಲಾಜಿಕ್ ಇಲ್ಲ: ಪ್ರಿಯಾಂಕಾ ವಾಗ್ದಾಳಿ

|
Google Oneindia Kannada News

ಲಕ್ನೌ, ಜುಲೈ 13: ವೀಕೆಂಡ್ ಲಾಕ್‌ಡೌನ್‌ ಮಾಡುವುದರಿಂದ ಯಾವುದೇ ಉಪಯೋಗ ಇಲ್ಲ ಎಂದು ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

Recommended Video

ಎಡಬಿಡದೆ ಕಾಡ್ತಿದೆ ಕೊರೋನಾ: ಬೆಂಗಳೂರು ಬಿಡ್ತಿದ್ದಾರೆ ಜನ | Oneindia Kannada

ಈ ಬಗ್ಗೆ ಸೋಮವಾರ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರಿಯಾಂಕಾ ಗಾಂಧಿ, ''ವಾರಾಂತ್ಯಕ್ಕೆ ಲಾಕ್‌ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ, 55 ಗಂಟೆ ಲಾಕ್‌ಡೌನ್‌ ಜಾರಿ ಮಾಡಿ ಏನಾಗಿದೆ?'' ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಜೊತೆ ಮತ್ತೊಂದಿಷ್ಟು ಜಿಲ್ಲೆಗಳು ಲಾಕ್ ಡೌನ್: ವಿವರ ಇಲ್ಲಿದೆಬೆಂಗಳೂರು ಜೊತೆ ಮತ್ತೊಂದಿಷ್ಟು ಜಿಲ್ಲೆಗಳು ಲಾಕ್ ಡೌನ್: ವಿವರ ಇಲ್ಲಿದೆ

ಈ ಕುರಿತು ಅಂಕಿ ಅಂಶ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, ಜುಲೈ 10 ರಂದು (ಶುಕ್ರವಾರ) 1347 ಕೇಸ್, ಜುಲೈ 11 ರಂದು (ಶನಿವಾರ) 1403 ಕೇಸ್, ಜುಲೈ 12 ರಂದು (ಭಾನುವಾರ) 1388 ಪ್ರಕರಣಗಳು ವರದಿಯಾಗಿದೆ ಎಂದು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಲಾಕ್‌ಡೌನ್ ಪ್ರಾರಂಭವಾಗಿ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಅನ್ವಯವಾಗಿತ್ತು.

No Logic Behind Weekend Baby Pack Of Lockdown Said Priyanka Gandhi

ರಾಜ್ಯದಲ್ಲಿ ವಿಪರೀತವಾಗಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ವಾರಾಂತ್ಯಕ್ಕೆ ಲಾಕ್‌ಡೌನ್‌ ಮಾಡಲಾಗಿದೆ. ಆದರೆ, ಇದರಿಂದ ಯಾವುದೇ ಅನುಕೂಲವಿಲ್ಲ. ಕೊವಿಡ್ ನಿಯಂತ್ರಣದಲ್ಲಿ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಪ್ರಯತ್ನ ನಡೆಯುತ್ತಿದೆ ಎಂದು ಪ್ರಿಯಾಂಕಾ ಟೀಕಿಸಿದ್ದಾರೆ.

ಪ್ರಸ್ತುತ, ಉತ್ತರ ಪ್ರದೇಶದಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಆರ್ಥಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಆದರೆ, ಶುಕ್ರವಾರದಿಂದ ಸೋಮವಾರ ಬೆಳಗ್ಗೆವರೆಗೂ ಲಾಕ್‌ಡೌನ್ ಇದೆ. ಈ ಕ್ರಮವನ್ನು ಪ್ರಿಯಾಂಕಾ ಖಂಡಿಸಿದ್ದಾರೆ.

English summary
Congress secretary Priyanka gandhi said that 'No logic behind weekend baby pack of lockdown'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X