ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಬಿಜೆಪಿಯವರಿಗೆ 'ನೊ ಎಂಟ್ರಿ' ಬೋರ್ಡ್ ನ ಸ್ವಾಗತ!

|
Google Oneindia Kannada News

Recommended Video

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸಿಕ್ಕಿದ್ದು ' ನೋ ಎಂಟ್ರಿ ಬೋರ್ಡ್ ' ಸ್ವಾಗತ | Oneindia Kannada

ಲಕ್ನೋ, ಅಕ್ಟೋಬರ್ 11: ಉತ್ತರ ಪ್ರದೇಶದಲ್ಲಿ ಹಲವೆಡೆ ಬಿಜೆಪಿ ಮುಖಂಡರನ್ನು 'ನೋ ಎಂಟ್ರಿ' ಬೋರ್ಡ್ ಸ್ವಾಗತಿಸುತ್ತಿರುವುದು, ಪಕ್ಷದ ಮುಖಂಡರಿಗೆ ದೊಡ್ಡ ತಲೆನೋವೆನ್ನಿಸಿದೆ!

ಮಹಾ ಮೈತ್ರಿಕೂಟದಿಂದ ಕೆಸಿಎಆರ್ ಹೊರಗಿಟ್ಟ ಮಮತಾ! ಮಹಾ ಮೈತ್ರಿಕೂಟದಿಂದ ಕೆಸಿಎಆರ್ ಹೊರಗಿಟ್ಟ ಮಮತಾ!

ಹಲವು ಕಾರಣಗಳಿಂದ ಬಿಜೆಪಿ ಮುಖಂಡರಿಗೆ ಊರೊಳಗೆ ಬರಲು ಜನರು ಬಿಡುತ್ತಿಲ್ಲ. ಬಿಜೆಪಿ ಮುಖಂಡರು ಯಾವುದಾದರೂ ಕಾರ್ಯಕ್ರಮಕ್ಕೆ ತೆರಳಿದರೆ ಅಲ್ಲಿ 'ನೋ ಎಂಟ್ರಿ' ಬೋರ್ಡ್ ಹಾಕಿ ಅವರನ್ನು ವಾಪಸ್ ಕಳಿಸಲಾಗುತ್ತಿದೆ.

ನಿಮ್ಮ ಆಯ್ಕೆಯ ನಾಯಕ ಯಾರು? ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ?ನಿಮ್ಮ ಆಯ್ಕೆಯ ನಾಯಕ ಯಾರು? ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ?

ಬಿಜೆಪಿಯನ್ನು ತಳಮಟ್ಟದಿಂದ ಮೇಲೆತ್ತುವ ಉದ್ದೇಶ ಹೊತ್ತು ಊರಿಂದೂರಿಗೆ ತೆರಳುತ್ತಿರುವ ಬಿಜೆಪಿ ಮುಖಂಡರಿಗೆ ಇದರಿಂದ ಇರಿಸುಮುರಿಸುಂಟಾಗಿದೆ.

No entry boards inviting BJP men in Uttar Pradesh

ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಪಕ್ಷದ ವರಿಷ್ಟರು, ಬಿಜೆಪಿ ಶಾಸಕ, ಸಂಸದರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲೇ ಇದ್ದು, ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಹೇಳಿದ್ದಾರೆ. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರ ಮೇಲೆ ಮತದಾರರು ಮುನಿಸಿಕೊಂಡಿರುವುದು ಬಿಜೆಪಿಗೆ ದೊಡ್ಡ ತಲೆನೋವಾಗಿದೆ.

ಲೋಕಸಭಾ ಉಪಚುನಾವಣೆ: ಬಳ್ಳಾರಿ, ಶಿವಮೊಗ್ಗದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ?ಲೋಕಸಭಾ ಉಪಚುನಾವಣೆ: ಬಳ್ಳಾರಿ, ಶಿವಮೊಗ್ಗದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ?

ಹಿಂದುಳಿದ ವರ್ಗ ಮತ್ತು ಮುಸ್ಲಿಂ ಮತೀಯರು ಬಿಜೆಪಿ ಮೇಲೆ ಮುನಿಸಿಕೊಂಡಿದ್ದು, ಅವರ ಕೋಪ ತಣ್ಣಗಾಗುವವರೆಗೂ ನಾವು ನಮ್ಮ ಕ್ಷೇತ್ರಗಳಿಗೆ ತೆರಳದಿರುವುದೇ ಲೇಸು ಎಂದು ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.

English summary
BJP men are worrying about 'no entry' borads seen in so many villages in Uttar Pradesh. It is an alarming factor to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X