ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿಯಲು ನೀರಿಲ್ಲ, ದಯಾಮರಣ ಕೋರಿ ಪದವೀಧರನಿಂದ ಪ್ರಧಾನಿಗೆ ಪತ್ರ

|
Google Oneindia Kannada News

ಆಗ್ರಾ, ಜೂನ್ 17: 'ಕುಡಿಯೋಕೆ ಒಂದು ಹನಿ ನೀರಿಲ್ಲ, ಬದುಕುವುದರಲ್ಲಿ ಅರ್ಥವಿಲ್ಲ, ಸಾಯಲು ಅನುಮತಿ ನೀಡಿ' ಎಂದು ಒಲ್ಲದ ಮನಸ್ಸಿನಿಂದಲೇ ಉತ್ತರ ಪ್ರದೇಶದ ಕುಟುಂಬವೊಂದು ಪ್ರಧಾನಿಯವರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

ಸರ್ಕಾರವು ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಎಂಬಿಎ ಪದವೀಧರ ಚಂದ್ರಪಾಲ್ , ಇವರು ಇದಕ್ಕೂ ಮೊದಲು ಗಣರಾಜ್ಯೋತ್ಸವ ದಿನದಂದು ಸರ್ಕಾರ ಮಾಡುವ ಕೆಲಸವನ್ನು ನಾವೇ ಮಾಡೋಣ ಎಂದು ಜನರ ಅಗತ್ಯಗಳನ್ನು ಪೂರೈಸಲು ಜನರಿಂದಲೇ ಹಣ ಸಂಗ್ರಹಿಸಿದ್ದರು. ಜೊತೆಗೆ ಪ್ರತಿಭಟನೆ ಕೂಡ ನಡೆಸಿದ್ದರು.

ಇನ್ನು 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕುಇನ್ನು 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕು

ಪ್ರತಿಭಟನೆ ಕೂಡ ನಡೆಸಿದ್ದರು ಆದರೆ ಸ್ಥಳೀಯ ಆಡಳಿತವು ಇದೆಲ್ಲಕ್ಕೂ ಬ್ರೇಕ್ ಹಾಕಿತ್ತು.ಹೊಸಾಯನ ಬ್ಲಾಕ್‌ನಲ್ಲಿ ವಾಸಿಸುತ್ತಿರುವ ಚಂದ್ರಪಾಲ್ ಒಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅವರ ಮಗಳು ದಯಾಮರಣಕ್ಕಾಗಿ ಪ್ರಧಾನಿಯವರನ್ನು ಕೇಳಿಕೊಳ್ಳುವ ದೃಶ್ಯವನ್ನು ಒಳಗೊಂಡಿದೆ.

No drinking water please give permission to end life

ಇನ್ನುಮುಂದೆ ನಮಗೆ ಉಪ್ಪು ಮಿಶ್ರಿತ ನೀರು ಕುಡಿಯಲು ಸಾಧ್ಯವೇ ಇಲ್ಲ.ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ನಡೆದು ಹೋಗುವುದು ಮಾತ್ರ ತಪ್ಪಿಲ್ಲ. ದಿನನಿತ್ಯ ನೋವಿನಿಂದ ನರಳುವುದಕ್ಕಿಂತ ಒಂದೇ ಸಲ ಸಾಯುವುದು ಉತ್ತಮ ಎಂದಿದ್ದಾರೆ.

ಕರಾವಳಿ ಕರ್ನಾಟಕ, ಕೇರಳಕ್ಕೆ ಮಾತ್ರ ಸೀಮಿತವಾದ ಮುಂಗಾರುಕರಾವಳಿ ಕರ್ನಾಟಕ, ಕೇರಳಕ್ಕೆ ಮಾತ್ರ ಸೀಮಿತವಾದ ಮುಂಗಾರು

ಈಗ 45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದೆ, ಇಂತಹ ಸಮಯದಲ್ಲಿ ಮನೆಯಲ್ಲಿರುವುದೇ ಕಷ್ಟ ಹಾಗಿದ್ದಾಗ ಎಲ್ಲಿ ಅಂತ ನೀರು ಹುಡುಕಿಕೊಂಡು ಬಿಸಿಲಿನಲ್ಲಿ ಅಲೆಯುವುದು, ಮಕ್ಕಳು ಪ್ರತಿಯೊಬ್ಬರು ಉಪ್ಪು ನೀರನ್ನೇ ಕುಡಿಯುತ್ತಿದ್ದಾರೆ, ಸುತ್ತ 150 ಹಳ್ಳಿಯ ಲಕ್ಷಕ್ಕೂ ಅಧಿಕ ಮಂದಿ ಇದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ.ಆದರೆ ಯಾರೂ ಕೂಡ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

English summary
MBA graduate Chandrapal writes letter to Prime minister Narendra Modi to seeking permission to end life because they even dont have little bit water to drink.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X